ಮಡಿಕೇರಿ ಮೇ 8 NEWS DESK : ಭೂಮಂಡಲದಲ್ಲಿ ನೀರು ಒಂದು ಅತ್ಯಾವಶ್ಯಕವಾಗಿರುವ ಒಂದು ವಸ್ತು. ನೀರಿಲ್ಲದ ಭೂಮಿಯನ್ನು ಊಹಿಸಲು ಅಸಾಧ್ಯ. ದಕ್ಷಿಣ ಆಫ್ರಿಕಾ ದೇಶದ ಕೇಪ್ ಟೌನ್ ನಗರದ ನೀರಿನ ಮಟ್ಟ ಶೂನ್ಯಕ್ಕೆ ಮುಟ್ಟಿದೆ. ಮುಂದಿನ ಅಂದರೆ 2030 ರ ವೇಳೆಗೆ ಬೆಂಗಳೂರು ಸೇರಿದಂತೆ ವಿಶ್ವದಲ್ಲಿ 16 ನಗರದ ನೀರಿನ ಮಟ್ಟ ಶೂನ್ಯಕ್ಕೆ ತಲುಪುತ್ತದೆ ಎಂಬ ಸಮೀಕ್ಷೆ 2016ರಲ್ಲಿ ವರದಿಯಾಗಿತ್ತು. ಇತೀಚೆಗೆ ಪತ್ರಿಕೆ ಒಂದರಲ್ಲಿ ಬೆಂಗಳೂರಿನ ಜಲಕ್ಷಮಕ್ಕೆ ಪರಿಹಾರವೆಂತು…? ಎಂಬ ಶ್ರೀರೋನಾಮೆಡಿಯಲ್ಲಿ ಪ್ರಕಟಗೊಂಡ ಲೇಖನ ಓದಿದಾಗ ಒಂದು ರೀತಿಯ ಭಯವಾಯಿತು. ಬೆಂಗಳೂರು ಬೆಳೆಯುವ ಪರಿ ನೋಡಿದರೆ ಮತ್ತು ಮುಂದಿನ ದಿನಗಳಲ್ಲಿ ಅದರ ನೀರಿನ ಬೇಡಿಕೆಯನ್ನು ಅಂದಾಜಿಸಿದರೆ ಕರ್ನಾಟಕದ ಎಲ್ಲಾ ನದಿಗಳನ್ನು ಬೆಂಗಳೂರಿಗೆ ತಿರುಗಿಸಿದರು. ನಗರದ ಕುಡಿಯುವ ನೀರಿನ ದಾಹವನ್ನು ನೀಗಿಸಲು ಸಾಧ್ಯವಿಲ್ಲ ಎನ್ನುವ ಪರಿಣಿತರ ಎಚ್ಚರಿಕೆಯಲ್ಲಿ ಅರ್ಥವಿಲ್ಲದಿಲ್ಲ. 1974 ರಲ್ಲಿ ಕಾವೇರಿ ಯೋಜನೆ ಅನಾವರಣಗೊಂಡಾಗ ಬೆಂಗಳೂರಿನ ಜನಸಂಖ್ಯೆ 22 ಲಕ್ಷ. ಅಂದು ಅಂದಿನ ಜನಸಂಖ್ಯೆ ಅನುಗುಣವಾಗಿ ಆ ಯೋಜನೆ ರೂಪಿಸಲಾಗಿತ್ತು. ಆದರೆ ತೊಂಬತ್ತರ ದಶಕದಲ್ಲಿ ಐಟಿ ಕ್ರಾಂತಿ ಅನಾವರಣಗೊಳ್ಳುವವರೆಗೆ ಮೂಲಭೂತ ಸೌಕರ್ಯಗಳ ಮೇಲೆ ಒತ್ತಡ ಒಂದು ಮಿತಿಯಲ್ಲಿ ಇತ್ತು. ಇಂದು ಜನ 70 ಲಕ್ಷ ದಾಟಿದೆ. ನಗರದಲ್ಲಿ ಸುಮಾರು 75000 ಸಾವಿರ ಅಪಾಟ್ಮೆರ್ಂಟ್‍ಗಳಿವೆ. ಇವುಗಳು ಸದ್ಯಕ್ಕೆ ನೀರಿಗಾಗಿ ಬೋರ್‍ವೆಲ್, ಖಾಸಗಿ ಟ್ಯಾಂಕರ್‍ಗಳನ್ನು ಅವಲಂಬಿಸಿದೆ. ಇವುಗಳಿಗೂ ಕಾವೇರಿ ನೀರು ಪೂರೈಸುವ ಅನಿವಾರ್ಯತೆ ಬಂದರೆ ಬೆಂಗಳೂರಿಗರಿಗೆ ಒಂದು ಲೋಟ ನೀರಿಗೂ ಹಾಹಾಕಾರವಾಗಬಹುದು.
ಬೆಂಗಳೂರು ಒಂದರಲ್ಲಿ ಸರಿ ಸುಮಾರು 700 ಕ್ಕೂ ಹೆಚ್ಚು ಕೆರೆಗಳಿದ್ದವು. ಬಹುತೇಕ ಮನೆಗಳಲ್ಲಿ ತೆರೆದ ಬಾವಿ ಇದ್ದವು, ಅವುಗಳಿಂದ ಕುಡಿಯುವ ನೀರಿನ ಮತ್ತು ಇತರ ಬಳಿಕೆಗೆ ಬಹುತೇಕ ನೀರಿನ ಪೂರೈಕೆಯಾಗುತ್ತಿತ್ತು. ಇಂದು ಅವುಗಳಲ್ಲಿ ಕೆರೆಗಳೆಲ್ಲ ಭೂಗಳ್ಳರ ಪಾಲಾಗಿ ಕಾಂಪ್ಲೆಕ್ಸ್‍ಗಳಾಗಿ, ಅಪಾಟ್ಮೆರ್ಂಟ್ ಆಗಿ ಪರಿವರ್ತನೆ ಆಗಿದೆ. ತೆರೆದ ಬಾವಿಗಳು ಕಾಲ ಗರ್ಭದಲ್ಲಿ ಸೇರಿ ಹೋಗಿದೆ. ಇದು ಒಂದು ಉದಾಹರಣೆ ಅಷ್ಟೇ. ಎಲ್ಲಾ ನಗರದಲ್ಲೂ, ಸಣ್ಣ ಸಣ್ಣ ಗ್ರಾಮಗಳಲ್ಲಿ ಇಂತಹ ಸಮಸ್ಯೆ ಅಂದು ಇದ್ದ ಬದ್ದ ನೀರಿನ ಮೂಲಗಳನ್ನು ನಾಶ ಮಾಡಿ ಕಾಂಕ್ರೀಟ್ ಕಟ್ಟಡಗಳನ್ನು ಏರಿಸಿ ಈಗ ಬೇಸಿಗೆಯಲ್ಲಿ ಆರಂಭ ಪ್ರಾರಂಭವಾಗುತ್ತೆ ನೀರಿನ ಬವಣೆ. ಇದರ ಬಗ್ಗೆ ಯಾರು ಅಂದರೆ ನಮ್ಮನ್ನು ಆಳುವ ರಾಜಕಾರಣಿಗಳಾಗಲಿ, ಆಡಳಿತ ನಡೆಸುವ ಅಧಿಕಾರಿಗಳಾಗಲಿ ಅಥವಾ ಪರಿಸರ ಸಂರಕ್ಷಣೆಗೆ ಹುಟ್ಟಿಕೊಂಡ ಸಂಘ ಸಂಸ್ಥೆಗಳೇ ಆಗಲಿ, ಕೊನೆ ಪಕ್ಷ ಈ ಭೂಮಿ ಮೇಲೆ ಜೀವನ ನಡೆಸಲು ಎಲ್ಲಾ ಸಂಪನ್ಮೂಲಗಳ ಉಪಯೋಗಿಸುವ, ಭೂಮಂಡಲವನ್ನು ಎಷ್ಟು ಸಾಧ್ಯವೋ ಅಷ್ಟು ಬಗೆದ ಮನುಷ್ಯ ಕೂಡ ಎಚ್ಚರಗೊಳ್ಳಲಿಲ್ಲ. ಹಾಗೆ ಗಾಳಿ ಮಣ್ಣು ಹೀಗೆ ಎಲ್ಲಾ ಕಲ್ಮಶಗೊಂಡು ಉಪಯೋಗಿಸುವ ಅರ್ಹತೆ ಕಳೆದುಕೊಂಡು ಸಂಪೂರ್ಣ ವಿಷಮಯವಾಗಿದೆ.
ಯಾರು ಮಾಡಿದರು ದೌರ್ಜನ್ಯ. ಮೊದಲ ಸ್ಥಾನ ರಾಜಕಾರಣಿಗಳಿಗೆ ಮತ್ತು ಅವರ ಛೇಲಾಗಳು. ನಂತರ ಸ್ಥಾನ ಅಧಿಕಾರಿಗಳದ್ದು. ಇವರಲ್ಲಿ ಮೂರು ವರ್ಗ ಒಂದು ರಾಜಕಾರಣಿಗಳೊಂದಿಗೆ ಶಾಮಿಲಾಗಿ ಭ್ರಷ್ಟರಾಗುವುದು, ಎರಡನೇ ವರ್ಗ ಮೇಲಿನವರಿಗೆ ಹೆದರಿ ಅಥವಾ ಬದುಕಿನ ಪ್ರಶ್ನೆ ಬಂದಾಗ ವ್ಯವಸ್ಥೆಗೆ ಹೆದರಿ ಕೈ ಜೋಡಿಸುವುದು. ನಂತರದ ಸ್ಥಾನ ನಮ್ಮಂತವರು. ಅಂದರೆ ಸಾಮಾನ್ಯ ನಾಗರೀಕರು. ನಮಗಂತೂ ಪರಿಸರ ಕಾಳಜಿ ಇಲ್ಲ. ಅರಣ್ಯ ಸಂಪನ್ಮೂಲಗಳು ಉಳ್ಳವರ ಪಾಲಿಗೆ ಹೋದರೆ ಶ್ರೀಸಾಮಾನ್ಯನಾದ ನಾವು ಎಷ್ಟೇಲ್ಲ ಸಾಧ್ಯವೊ ಅಷ್ಟು ಪರಿಸರವನ್ನು ಕುಲಗೇಡಿಸಿಬಿಟ್ಟಿದ್ದೇವೆ. ಬೇಸಿಗೆ ಬಂದರೆ ಸಾಕು ನೀರಿಗಾಗಿ ಹಾಹಾಕಾರ ಆರಂಭವಾಗುತ್ತದೆ. ಆಗ ಶುರುವಾಗುತ್ತದೆ ಜನಾಂದೋಲನ. ನೀರಿನ ಮಹತ್ವದ ಕುರಿತು ಸಂದೇಶಗಳು, ವಿಡಿಯೋಗಳು. ನೀರಿನ ಬಳಕೆ ಉಳಿಕೆ ಬಗ್ಗೆ ಜನಾಂದೋಲನ, ಚಳುವಳಿಗಳು ಹೀಗೆ ಹಲವು ರೀತಿಯಲ್ಲಿ ನಾಗರಿಕರಿಗೆ ಪ್ರಜ್ಞೆ ಮೂಡಿಸುವ ಕೆಲಸವಾಗುತ್ತದೆ. ಒಂದೆರಡು ಮಳೆ ಬಂದಾಗ ಎಲ್ಲವನ್ನು ಮಡಚಿ ತಲೆ ಕೆಳಗೆ ಇಟ್ಟು ಮಲಗಿದರೆ ಅಲ್ಲಿಗೆ ಮುಗಿತು ನೀರಿನ, ಪರಿಸರ, ಪ್ರಕೃತಿಗಳ ಬಗ್ಗೆ ಇರುವ ಕಾಳಜಿ. ಇನ್ನೊಂದು ಬೇಸಿಗೆ ಬಂದಾಗ ಇವರು ಏಳುವುದು.
ಒಂದು ಕಡೆ ಭೂಮಿಯ ತಾಪಮಾನ ಏರುತಿದೆ. ಅಂತರಜಲದ ಮಟ್ಟ ಊಹಿಸಲು ಸಾಧ್ಯವಾಗದಷ್ಟು ತಳಮುಟ್ಟಿದೆ. ಅರಣ್ಯ ಸಂಪತ್ತು ಸಂಪೂರ್ಣ ಲೂಟಿ ಆಗಿದೆ. ಇದರ ಪರಿಣಾಮ ಮಾನವ ಮತ್ತು ಪ್ರಾಣಿಗಳ ಸಂಘರ್ಷ ತಾರಕಕ್ಕೆ ಏರಿದೆ. ಕೃಷಿ ಭೂಮಿಯನ್ನು ಅಧಿಕಾರದಲ್ಲಿ ಇರುವ ರಾಜಕಾರಣಿಗಳು, ಅಧಿಕಾರಿಗಳು ತಮಗೆ ಬೇಕಾದಂತೆ ಪರಿವರ್ತಿಸಿಕೊಂಡರು. ಕಾನೂನು ಶ್ರೀಸಾಮಾನ್ಯನಿಗೆ ಅನ್ವಯವಾಗು ವಂತೆ ನೋಡಿಕೊಂಡರು. ಕೃಷಿಯನ್ನು ಸಂಪೂರ್ಣ ನಿರ್ಲಕ್ಷಿಸುವ ಮೂಲಕ ಬಹುತೇಕ ನೀರಾವರಿ ಕೃಷಿ ಭೂಮಿ ಹಡಲು ಬಿಡಲಾಯಿತು. ಏಕೆಂದರೆ ಕೃಷಿ ಇಂದು ಲಾಭದಾಯಕವಲ್ಲ. ಇನ್ನೊಂದೆಡೆ ಕೃಷಿ ಕಾರ್ಮಿಕರ ಕೊರತೆ. ಕೃಷಿಯಲ್ಲಿ ಸಂಪೂರ್ಣ ರಾಸಾಯನ ಬಳಕೆ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಅದಕ್ಕೆ ಕೊನೆಯೇ ಇಲ್ಲ. ಹೀಗೆ ಎಲ್ಲ ರೀತಿಯಲ್ಲೂ ನಮ್ಮ ಪರಿಸರ ನಮ್ಮ ಕೈ ತಪ್ಪಿಹೋಗಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಪ್ರಾಕೃತಿಕ ಅಸಮತೋಲನ ಉಂಟಾಗುತ್ತದೆ. ಈಗಾಗಲೇ ಅದನ್ನು ಅನುಭವಿಸುತ್ತಿದ್ದೇವೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂದೆ ಬಾರಿ ಪರಿಣಾಮ ಎದುರಿಸ ಬೇಕಾಗುತ್ತದೆ.
ಇಂತಹ ಪರಿಸ್ಥಿತಿ ಬಂದರೂ ಆಳುವವರಾಗಲಿ, ಆಳಿಸಿಕೊಳ್ಳುವವರಾಗಲಿ ಎಚ್ಚರಗೊಳ್ಳಲಿಲ್ಲ. ಈ ಮದ್ಯೆ ಕೆಲವರು ಎಚ್ಚರಗೊಂಡರು. ಆದರೆ ಎಚ್ಚರಗೊಂಡವರನ್ನು ಮಲಗಿಸುವ ತಂತ್ರ ಮೇಲಿನವರಿಗೆ ತಿಳಿದಿತ್ತು. ಅದನ್ನು ಪ್ರಯೋಗಿಸಿ ಪರಿಸರದ ಪರವಾಗಿ ಹೋರಾಟಕ್ಕೆ ಇಳಿದವರನ್ನು ವ್ಯವಸ್ಥಿತವಾಗಿ ಮಲಗಿಸುವ ಕೆಲಸವಾಯಿತು. ದೇಶದ್ರೋಹಿಗಳಂತೆ ಬಿಂಬಿಸುವ ಕೆಲಸವಾಯಿತು. ಹೀಗೆ ಎಲ್ಲಾ ಹೋರಾಟಗಳಿಗೆ ದೇಶ ದ್ರೋಹದ ಪಟ್ಟ ಕಟ್ಟಿದರೆ ಜನಪರ ಹೋರಾಟಕ್ಕೆ ಎಲ್ಲಿದೆ ನ್ಯಾಯ. ನನಗೆ ಅರಿವು ಮೂಡಿದಲ್ಲಿಂದ ಅನೇಕ ಪರಿಸರ ಪರವಾದದ ಚಳುವಳಿಗಳನ್ನು ನೋಡಿ ಕೇಳಿ ಅರಿತಿದ್ದೇನೆ. ಸುಂದರಲಾಲ್ ಬಹುಗುಣರ ಆಪಿಕೋ ಚಳುವಳಿ, ಬಾಬಾಅಮ್ಸ್ ಮೇದಪಾಠಕರ್‍ರವರ ನರ್ಮದಾ ಬಚಾವೋ ಆಂದೋಲನಗಳು ಪಶ್ಚಿಮ ಘಟಗಳ ಉಳಿವಿಗಾಗಿ ಅನೇಕ ವರ್ಷಗಳಿಂದ ಹೋರಾಟವೇ ನಡೆಯುತ್ತಿದೆ. ಅದಕ್ಕಾಗಿ ಸಮಿತಿ ರಚನೆ ಮಾಡಲಾಯಿತು. ಅವರು ನೀಡಿದಂತಹ ಗಾಡಿಗಿಲ್ ವರದಿ ಕಸ್ತೂರಿ ರಂಗನ್ ವರದಿಗಳನ್ನು ಜಾರಿಗೆ ತರಲು ಯಾವ ರಾಜಕೀಯ ಪಕ್ಷಗಳು ಪ್ರಯತ್ನ ಪಡಲೇ ಇಲ್ಲ. ಬದಲಾಗಿ ಅದರಲ್ಲಿನ ನ್ಯೂನತೆಯನ್ನು ಕಂಡುಹಿಡಿದು ಅದನ್ನು ವೈಭವಿಕರಿಸಿ ಜನರನ್ನು ಎತ್ತಿ ಕಟ್ಟಿದರು. ಒಂದು ಸಮಿತಿ ವರ್ಷಗಟ್ಟಲೇ ಅಧ್ಯಯನ ನಡೆಸಿ ರಚನೆ ಮಾಡಿದಂತಹ ವರದಿಗಳ ಸಾಧಕಬಾಧಕಗಳ ಚರ್ಚೆಯನ್ನು ಕೂಡ ನಡೆಸಲಿಲ್ಲ. ವಿಪರ್ಯಾಸವೆಂದರೆ ಅವರಾರು ವರದಿ ಪುಸ್ತಕದ ಹಾಳೆಯನ್ನು ಮಗುಚಿ ಕೂಡ ನೋಡಿರುವುದಿಲ್ಲ. ಹೀಗೆ ಕೃಷಿ ಕೃಷಿಯೇತರ ಚಟುವಟಿಕೆಗಳಿಗೆ ಬಳಸದಂತಹ ಕಾನೂನು ಇದ್ದರೂ ಗದ್ದೆಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಆಗಿದೆ. ಯಾವುದೇ ನೀರಿನ ಸೆಳೆತ ಇರುವ ಜಾಗಗಳು ಸರ್ಕಾರಿ ಆಸ್ತಿ. ಆದರೆ ಎಲ್ಲಾ ಜಲಮೂಲಗಳು ಅಕ್ರಮವಾಗಿ ಆಕ್ರಮಿಸಿಕೊಂಡು ಅವುಗಳನ್ನು ನಾಶಮಾಡಿಯಾಗಿದೆ. ನಗರಿಕರಣದ ಕಾರಣ ದೊಡ್ಡ ದೊಡ್ಡ ಕಟ್ಟಡಗಳು ತಲೆಯೆತ್ತಿದೆ. ಪ್ರತಿಕೆಯಲ್ಲಿ ಸುದ್ದಿ ಒಂದು ಪ್ರಕಟವಾಗಿತ್ತು. ಕಾಡು ಪ್ರಾಣಿಗಳಿಗೆ ಟ್ಯಾಂಕ್‍ರ್‍ಗಳ ಮೂಲಕ ನೀರು ಸರಬರಾಜು ಇಂತಹ ಪರಿಸ್ಥಿತಿಗೆ ಕಾರಣರಾರು, ನಾವೇ. ಇಂದೇನು ಟ್ಯಾಂಕರ್ ಮೂಲಕ ಸರಬರಾಜು ಮಾಡಿದೆವು. ಮುಂದಿನ ದಿನಗಳಲ್ಲಿ ಏನು ಮಾಡುವುದು ಎಂಬ ಪ್ರಶ್ನೆ. ನಾವು ಉತ್ತರ ಕಂಡು ಕೊಳ್ಳುವ ಆಲೋಚನೆ ಮಾಡಲೇ ಇಲ್ಲ. ಅದರಿಂದ ಅರಣ್ಯ ಪ್ರದೇಶವನ್ನು ಲೂಟಿ ಮಾಡಿದೆವು. ಕಾಡಿಗೆ ಬೆಂಕಿ ಇಟ್ಟೇವು. ಅತ್ಯಾವಶ್ಯಕತೆಗಿಂತ ಯಾಂತ್ರಿಕರಣ, ಪ್ಲಾಸ್ಟಿಕ್ ಬಳಕೆ ಹೀಗೆ ಎಲ್ಲಾ ರೀತಿಯಲ್ಲಿ ಪ್ರಕೃತಿಯ ಮೇಲೆ ದೌರ್ಜನ್ಯ ಎಸಗಿದೆವು. ಅದರ ಪರಿಣಾಮ ಮುಂದಿನ ದಿನಗಳಲ್ಲಿ ಭೀಕರ ಪರಿಸ್ಥಿತಿ ಅನುಭವಿಸುವುದು ನಾವೇ.
ಇಂತಹ ಒಂದು ಪರಿಸ್ಥಿತಿಗೇ ನಾವೇ ಹೊಣೆಗಾರರು. ಪರಿಸರವಾದಿಗಳು, ವಿಜ್ಞಾನಿಗಳು ಅಸಮತೋಲನ ಬಗ್ಗೆ ಎಚ್ಚರ ನೀಡುತ್ತಲೇ ಬರುತ್ತ ಇದ್ದಾರೆ. ಆದರೂ ನಾವು ಎಚ್ಚರಗೊಳ್ಳಲಿಲ್ಲ. ಯಾರು ಪ್ರಕೃತಿಯನ್ನು ಕಾಯಬೇಕೊ ಅವರೇ ಲೂಟಿ ಮಾಡಿದರು. ಸರ್ಕಾರಗಳು ಅವರೇ ಕಾನೂನು ಜಾರಿಗೆ ಅವರಿಗೆ ಬೇಕಾದಾಗ ಬದಲಾವಣೆ ಮಾಡಿದರು. ಪರಿಸರ ರಕ್ಷಣೆಗೇ ಅರಣ್ಯಇಲಾಖೆ, ವಾಯು ಮಾಲಿನ್ಯ ತಡೆ ಮಂಡಳಿ, ಶಬ್ದ ಮಾಲಿನ್ಯ ತಡೆ ಮಂಡಳಿ, ಭೂ ಮತ್ತು ಗಣಿ ವಿಜ್ಞಾನ ಇಲಾಖೆ, ಹವಾಮಾನ ಇಲಾಖೆ, ವನ್ಯಜೀವಿ ಸಂರಕ್ಷಣೆ ಇಲಾಖೆ, ಒಳಚರಂಡಿ ಮತ್ತು ಕೊಳಚೆ ನಿರ್ಮೂಲನ ಮಂಡಳಿ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಭೂಮಿ ಇರುವ ಪ್ರತಿ ಸಂಪನ್ಮೂಲದ ಸಂರಕ್ಷಣೆಗೆ ಇಲಾಖೆಗಳು, ಮಂಡಳಿಗಳು ಅದಕ್ಕೆ ಅಧ್ಯಕ್ಷರು, ಸದ್ಯಸರು, ಅಧಿಕಾರಿಗಳು, ನೌಕರರು ಅವರಿಗೆ ಬೇಕಾದ ಎಲ್ಲಾ ಮೂಲಭೂತ ವ್ಯವಸ್ಥೆ ಇದ್ದರೂ ಒಂದೇ ಒಂದು ಇಲಾಖೆ ಪರಿಣಾಮಕಾರಿ ಕಾರ್ಯ ನಿರ್ವಹಿಸುತ್ತಿರುವುದು ತೋರಿಸಿ ನೋಡುವ. ಇಲ್ಲ ಅಂತ ಅಲ್ಲ ಕೆಲವು ದಕ್ಷ ಅಧಿಕಾರಿಗಳು, ಪ್ರಾಮಾಣಿಕ ರಾಜಕಾರಣಿಗಳು ಇದ್ದರು. ಪರಿಸರವಾದಿಗಳು ಇದ್ದರು. ಅನೇಕ ಪರಿಸರವಾದಿಗಳು ತಮ್ಮ ಜೀವನವನ್ನೇ ಪರಿಸರ ಸಂರಕ್ಷಣೆಗೆ ಮುಡಿಪಾಗಿಟ್ಟರು. ಅವರ ಹೋರಾಟಗಳು ನಾಗರಿಕತೆ, ನಗರೀಕರಣ ಅಭಿವೃದ್ಧಿಪಥದ ಪ್ರವಾಹದ ರಭಸಕ್ಕೆ ಕೊಚ್ಚಿ ಹೋಯಿತು. ಅವರ ಹೋರಾಟಗಳು ಇತಿಹಾಸ ಪುಟ ಸೇರಿಹೋದವು. ಅದರ ಪರಿಣಾಮ ನಾವು ಅನುಭವಿಸಲು ಆರಂಭಿಸಿದ್ದೀವಿ. ಮುಂದೆ ಭೀಕರ ಪರಿಸ್ಥಿತಿ ಎದುರಿಸಲು ಸಜ್ಜಾಗಬೇಕು. ನಾವು ಮಾಡಿದ್ದು ನಾವು ಅನುಭವಿಸಿ ಮುಂದೆ ನಮ್ಮ ಮಕ್ಕಳು ಅನುಭವಿಸುವಂತೆ ಮಾಡಿದ್ದೂ ನಮ್ಮ ಜೀವನದ ಸಾಧನೆ
“ ಈಗ ಪ್ರಾಣಿ, ಪಕ್ಷಿಗಳಿಗೆ ತಾರಸಿಯಲ್ಲಿ ನೀರಿಡಿ ಎಂಬ ವಾಕ್ಯ ಸಾಮಾಜಿಕ ಜಾಲದಲ್ಲಿ ಸಂದೇಶಗಳು ಹರಿದಾಡುತ್ತಿದೆ, ಏನೋ ಬಾರಿ ಪುಣ್ಯದ ಕೆಲಸ ಮಾಡಿದಂತೆ ನಾವು ಅವುಗಳ ನೀರನ್ನು ನಾಶ ಮಾಡಿದವರು ನಾವೇ ಮುಂದೆ ಒಂದು ದಿನ ನಾವು ನಂಗೊಂದು ಕಪ್ ನೀರು ಕೊಡಿ ಎಂದು ಅಂಗಲಾಚಿ ಬೇಡುವ ಕಾಲ ದೂರವಿಲ್ಲ.”
ವರದಿ : ಬಾಳೆಯಡ ಕಿಶನ್ ಪೂವಯ್ಯ
ವಕೀಲರು ಮತ್ತು ನೋಟರಿ
ಮಡಿಕೇರಿ – 9448899554