ಮಡಿಕೇರಿ ಮೇ 26 NEWS DESK : ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಎನ್.ಡಿ.ಎ ಮೈತ್ರಿ ಕೂಟದ ಅಭ್ಯರ್ಥಿಗಳಾದ ಡಾ.ಧನಂಜಯ ಸರ್ಜಿ ಹಾಗೂ ಎಸ್.ಎಲ್.ಬೋಜೆಗೌಡ ಅವರುಗಳು ಮತದಾರರನ್ನು ಭೇಟಿಯಾಗಿ ಸಮಾಲೋಚನೆ ನಡೆಸಲು ಮೇ 28 ರಂದು ಕೊಡಗು ಜಿಲ್ಲೆಗೆ ಆಗಮಿಸಲಿದ್ದಾರೆ ಎಂದು ಕೊಡಗು ಜಿಲ್ಲಾ ಬಿಜೆಪಿ ವಕ್ತಾರ ಸುಬ್ರಮಣ್ಯ ಉಪಾಧ್ಯಾಯ ಕಾರ್ಯಕ್ರಮದ ವಿವರ ನೀಡಿದ್ದಾರೆ.
ಅಂದು ಬೆಳಿಗ್ಗೆ 8.30 ಗಂಟೆಗೆ ಮಡಿಕೇರಿ ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಸಂತ ಮೈಕಲರ ಶಾಲೆ, ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜು ಮತ್ತು ಸಂತ ಜೋಸೆಫರ ಶಾಲೆಗೆ ಭೇಟಿ ನೀಡಲಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಬೆಳಿಗ್ಗೆ 10 ಗಂಟೆಗೆ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ನಂತರ 10.30 ಗಂಟೆಗೆ ಮತದಾರರ ಹಾಗೂ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ.
ಮಧ್ಯಾಹ್ನ 12.30 ಗಂಟೆಗೆ ವಿರಾಜಪೇಟೆಯ ಅರಮೇರಿ ಕಳಂಚೇರಿ ಮಠ ಮತ್ತು ಶಾಲೆಗೆ ಭೇಟಿ, 1.30ಕ್ಕೆ ಗೋಣಿಕೊಪ್ಪದ ಕಾಲ್ಸ್ ಶಾಲೆ, 1.45 ಕಾವೇರಿ ಕಾಲೇಜು ಭೇಟಿ ಮತ್ತು 2 ಗಂಟೆಗೆ ದುರ್ಗಾ ಬೋಜಿ ಹಾಲ್ ನಲ್ಲಿ ಮತದಾರರು ಹಾಗೂ ಕಾರ್ಯಕರ್ತರೊಂದಿಗೆ ಸಮಾಲೋಚಿಸಲಿದ್ದಾರೆ.
ಮಧ್ಯಾಹ್ನ 3 ಗಂಟೆಗೆ ಸೋಮವಾರಪೇಟೆಯ ಅನುಗ್ರಹ ಪಿ.ಯು ಕಾಲೇಜು, 3.30ಕ್ಕೆ ವಿಶ್ವ ಮಾನವ ಕುವೆಂಪು ಶಾಲೆ ಭೇಟಿ ಮತ್ತು ಸಂಜೆ 4 ಗಂಟೆಗೆ ಸೋಮವಾರಪೇಟೆ ಕೊಡವ ಸಮಾಜದಲ್ಲಿ ಮತದಾರರ ಹಾಗೂ ಕಾರ್ಯಕರ್ತರ ಸಭೆ ನಡೆಸಲಿದ್ದಾರೆ. ನಂತರ 5.30 ಗಂಟೆಗೆ ಕುಶಾಲನಗರದ ಮಹಾಲಕ್ಷ್ಮಿ ಹಾಲ್ ನಲ್ಲಿ ನಡೆಯುವ ಮತದಾರರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸುಬ್ರಮಣ್ಯ ಉಪಾಧ್ಯಾಯ ತಿಳಿಸಿದ್ದಾರೆ.