ಮಡಿಕೇರಿ ಜೂ.12 NEWS DESK : ಸಮರ್ಥ ಕನ್ನಡಿಗರು ಸಂಸ್ಥಯ ಕೊಡಗು ಜಿಲ್ಲಾ ಘಟಕದ ವತಿಯಿಂದ ನಿಮ್ಮ ಪ್ರತಿಭೆ ನಮ್ಮ ಪ್ರೋತ್ಸಾಹ ಕಾಯ೯ಕ್ರಮ ಆಯೋಜಿಲಾಗಿದ್ದು, ಮಕ್ಕಳಿಗೆ ವೈಯಕ್ತಿಕ ನೃತ್ಯ ಹಾಗೂ ಕಥೆ ಹೇಳುವ ಆನ್ ಲೈನ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಸಂಘಟನೆಯ ಜಿಲ್ಲಾ ಸಂಚಾಲಕಿ ಕೆ.ಜಯಲಕ್ಷ್ಮಿ ತಿಳಿಸಿದ್ದಾರೆ.
ಸ್ಪಧೆ೯ಯ ವಿವರ ಇಂತಿದೆ :
ಕಥೆ ಹೇಳುವ ಸ್ಪರ್ಧೆ :
ನಿಯಮಗಳು : ವೈಯಕ್ತಿಕ ಸ್ಪರ್ಧೆಯಾಗಿದ್ದು, 3 ವರ್ಷದಿಂದ 6 ವರ್ಷದ ಒಳಗಿನ ಮಕ್ಕಳು ಮಾತ್ರ ಭಾಗವಹಿಸಬೇಕು, ಮೂರು ನಿಮಿಷ ಅವಧಿಯಲ್ಲಿ ಕಥೆಯ ನೀತಿಯನ್ನು ಹೇಳಬೇಕು., ಕಥೆ ಕನ್ನಡದಲ್ಲಿಯೇ ಇರಬೇಕು.
ನೃತ್ಯ ಸ್ಪರ್ಧೆ : 7 ವರ್ಷದಿಂದ 12 ವರ್ಷದ ಒಳಗಿನ ಮಕ್ಕಳು ಭಾಗವಹಿಸಬಹುದು. ಕನ್ನಡ ಭಕ್ತಿಗೀತೆಗಳಿಗೆ 3 ನಿಮಿಷದ ಅವಧಿಯೊಳಗೆ ನೃತ್ಯ ಮಾಡಬೇಕು.
ಭರತನಾಟ್ಯ ಸ್ಪರ್ಧೆ : ಚಲನಚಿತ್ರದ ಗೀತೆಗೆ ಭರತನಾಟ್ಯ ಮಾಡುವಂತಿಲ್ಲ, ಭರತನಾಟ್ಯ ದ ಉಡುಗೆ – ತೊಡುಗೆ ಕಡ್ಡಾಯ., 3 ನಿಮಿಷದ ಅವಧಿ,
12 ವರ್ಷದಿಂದ 18 ವರ್ಷದ ಮಕ್ಕಳು ಭಾಗವಹಿಸಬಹುದು.
ಎಲ್ಲ ಸ್ಪರ್ಧಿಗಳು ಸ್ಪಧೆ೯ಗಳಿಗೆ ವೀಡಿಯೋಗಳನ್ನು ಜೂ.30 ರ ಒಳಗೆ ಕಳುಹಿಸಬೇಕು
ವೀಡಿಯೋ ವಾಟ್ಸಪ್ ಮಾಡಬೇಕಾದ ಸಂಖ್ಯೆ. : ಕಥೆ ಹೇಳುವ ಸ್ಪರ್ಧೆ : 9353748962 ರಜನಿ ನವೀನ್, ನೃತ್ಯ ಸ್ಪರ್ಧೆ : 9632870102 ಅಖಿಲಾ ಭಟ್,
ಭರತನಾಟ್ಯ : 9480783156 ಉಮಾ ನಾಗರಾಜ್, ಹೆಚ್ಚಿನ ಮಾಹಿತಿಗಾಗಿ ಸಂಪಕ೯ ಸಂಖ್ಯೆ – 9663119670.
ವಿಜೇತ ರಿಗೆ ನವೆಂಬರ್ ತಿಂಗಳಲ್ಲಿ ನಡೆಯುವ ಕನ್ನಡ ಹಬ್ಬದ ವೇದಿಕೆಯಲ್ಲಿ ಬಹುಮಾನಗಳನ್ನು ನೀಡಲಾಗುವುದು. ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ ಮಕ್ಕಳಿಗೆ ವೇದಿಕೆಯಲ್ಲಿ ಪ್ರತಿಭಾ ಅನಾವರಣಕ್ಕೆ ಅವಕಾಶ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.