ಕಡಂಗ ಜು.2 NEWS DESK : ಕೊಡಗು ಜಿಲ್ಲಾ ಎಸ್.ಎಸ್.ಎಫ್ ನಾಯಕರು ಹಮ್ಮಿಕೊಂಡ ಜಿಲ್ಲಾ ನಾಯಕರ ಯೂನಿಟ್ ಭೇಟಿ ವೊಯೇಜ್ ಕಾರ್ಯಕ್ರಮ ಕಡಂಗ ಬದ್ರಿಯಾ ಮದರಸ ಸಭಾಂಗಣದಲ್ಲಿ ನಡೆಯಿತು.
ಎಸ್ ಎಸ್ ಎಫ್ ಜಿಲ್ಲಾಧ್ಯಕ್ಷ ಝುಬೈರ್ ಸಹದಿ ಮಾಲ್ದಾರೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲಾಂ ಉದ್ಘಾಟಿಸಿ ಸಂಘಟನೆ ನಡೆದು ಬಂದ ಹಾದಿಗಳನ್ನು ವಿವರಿಸಿದರು. ಎಸ್.ಎಸ್.ಎಫ್ ಜಿಲ್ಲಾ ನಾಯಕರು ಹಮ್ಮಿಕೊಂಡ ಕೊಡಗಿನಲ್ಲಿರುವ ಎಸ್.ಎಸ್.ಎಫ್ ನ 100 ಯುನಿಟ್ ಗಳಿಗೆ ಭೇಟಿ ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಮಾಹಿತಿ ನೀಡಿದರು.
ಎಸ್.ವೈ.ಎಸ್ ಜಿಲ್ಲಾ ನಾಯಕ ಖಮರುದ್ದಿನ್ ಅನ್ವಾರಿ ಮಾತನಾಡಿ, ಇಂದಿನ ಯುಗದಲ್ಲಿ ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದು,ಮಾದಕ ವಸ್ತು ಮಾರಾಟ ಹಾಗೂ ಅದಕ್ಕೆ ಪ್ರೇರೆಪಿಸುವವರಿಗೆ ಕಠಿಣ ಶಿಕ್ಷೆಯಾಗಬೇಕು. ಸಂಘಟನೆಯಿಂದ ವಿದ್ಯಾರ್ಥಿಗಳಿಗೆ ಶಿಸ್ತು, ಸಮಾಜ ಸೇವೆ ಮುಂತಾದ ವಿಷಯಗಳಲ್ಲಿ ಹೆಚ್ಚಿನ ಮಹತ್ವ ದೊರೆಯಲಿದ್ದು, ವಿದ್ಯಾರ್ಥಿಗಳು ಸಂಘಟನೆಯಲ್ಲಿ ಹೆಚ್ಚಾಗಿ ಗುರುತಿಸಿ ಸಮಾಜಮುಖ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವಂತೆ ಕರೆ ನೀಡಿದರು.
ಎಸ್.ಎಸ್.ಎಫ್ ರಾಜ್ಯ ಸಮಿತಿಯ ಖಮರುದ್ದಿನ್ ಅನ್ವಾರಿ ಸಖಾಫಿ ಕಾರ್ಯಕ್ರಮಕ್ಕೆ ಶುಭಹಾರೈಸಿ ಮಾತನಾಡಿದರು.
ಈ ಸಂದರ್ಭ ಎಸ್.ಎಸ್.ಎಫ್.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜುನೈದ್ ಅಮ್ಮತ್ತಿ, ಬದ್ರಿಯಾ ಜುಮಾಅತ್ ಅಧ್ಯಕ್ಷ ಕೆ.ಇ.ಉಸ್ಮಾನ್, ಎಸ್.ವೈ.ಎಸ್ ಕಡಂಗ ಅಧ್ಯಕ್ಷ ಸಿ.ಎ.ಅಶ್ರಫ್, ಪ್ರಮುಖರಾದ ರಶಾದ್ ಹೊಳಮಾಳ, ಎಸ್.ಎಸ್.ಎಫ್ ಜಿಲ್ಲಾ ಕಾರ್ಯದರ್ಶಿ ರಿಯಾಜ್ ಗುಯ್ಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಬದ್ರಿಯಾ ಜುಮಾ ಮಸೀದಿಯ ಮುದರಿಸ್ ಸತ್ತಾರ್ ಅಹ್ಸನಿ ಪ್ರಾರ್ಥಿಸಿದರು. ಎಸ್.ಎಸ್.ಎಫ್ ಕಡಂಗ ಯೂನಿಟ್ ಅಧ್ಯಕ್ಷ ಅಂಶಾದ್ ಅನ್ವಾರಿ ಸ್ವಾಗತಿಸಿ, ಡಿವಿಷನ್ ಕಾರ್ಯದರ್ಶಿ ರಾಝೀಕ್ ವಂದಿಸಿದರು.
ವರದಿ : ನೌಫಲ್