ಮಡಿಕೇರಿ ಜು.2 NEWS DESK : ಯೂತ್ ರೆಡ್ ಕ್ರಾಸ್ ಸೊಸೈಟಿ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ರಾಷ್ಟ್ರೀಯ ವೈದ್ಯಕೀಯ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಸುಂಟಿಕೊಪ್ಪದ ಸ್ವಸ್ಥ, ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರದ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ ಶಿಬಿರ ನಡೆಯಿತು.
ಯೂತ್ ರೆಡ್ ಕ್ರಾಸ್ ಮತ್ತು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳ ಕಾರ್ಯಕ್ರಮ ಅಧಿಕಾರಿ ಡಾ. ಕರುಂಬಯ್ಯ, ಸದಸ್ಯ ಡಾ. ಶಶಾಂಕ, ಘಟಕದ ವಿದ್ಯಾರ್ಥಿ ಕಾರ್ಯದರ್ಶಿ ಡಾ. ಹರಿನಾರಾಯಣ್, 26 ವೈದ್ಯರುಗಳ ತಂಡದೊಂದಿಗೆ ಸಾಮಾನ್ಯ ದೈಹಿಕ, ವ್ಯವಸ್ಥಿತ ಪರೀಕ್ಷೆ, ದೃಷ್ಟಿ ಮತ್ತು ಶ್ರವಣ ಪರೀಕ್ಷೆಗಳು ಮತ್ತು ಮನರಂಜನಾ ಚಟುವಟಿಕೆ ನಡೆಯಿತು.
ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕೊಡಗು ಅಧ್ಯಕ್ಷ ಬಿ.ಕೆ.ರವೀಂದ್ರ ರೈ, ಯೂತ್ ರೆಡ್ ಕ್ರಾಸ್ ಸೊಸೈಟಿ ಕೊಡಗು ಅಧ್ಯಕ್ಷ ಎಂ, ಧನಂಜಯ , ಯೂತ್ ರೆಡ್ ಕ್ರಾಸ್ ಕಾರ್ಯಕ್ರಮದ ಸಂಯೋಜಕ ಎಂ,ಆರ್, ಜಗದೀಶ್, ನ್ಯಾಷನಲ್ ಮೆಡಿಕೋಸ್ ಆಗ೯ನೈಸೇಷನ್ ನ ಕರ್ನಾಟಕ ದಕ್ಷಿಣ ವಲಯ ಸಹಪ್ರಮುಖ ಡಾ.ಹರಿನಾರಾಯಣ್, ಸ್ವಸ್ಥ ನಿರ್ದೇಶಕಿ ಆರತಿ ಸೋಮಯ್ಯ ಹಾಜರಿದ್ದರು.
ನ್ಯಾಷನಲ್ ಮೆಡಿಕೋಸ್ ಆಗ೯ನೈಸೇಷನ್ ವತಿಯಿಂದ ಸ್ವಸ್ಥದ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಸ್ಟೇಷನರಿ ಕಿಟ್‌ಗಳನ್ನು ವಿತರಿಸಲಾಯಿತು.