ಕಡಂಗ ಜು.3 NEWS DESK : ವಿರಾಜಪೇಟೆ ಸಮೀಪದ ಕಡಂಗ ಗ್ರಾಮದಲ್ಲಿ ದಿನನಿತ್ಯ ವಿದ್ಯುತ್ ಸರಬರಾಜು ಇಲ್ಲದೆ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ 4 ದಿನಗಳಿಂದ ವಿದ್ಯುತ್ ಇಲ್ಲದೆ ಗ್ರಾಮಸ್ಥರು ಕತ್ತಲಲ್ಲಿ ಕಾಲ ಕಳೆಯುವಂತ್ತಾಗಿದೆ. ಹಲವು ಬಾರಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಮಳೆ ಇಲ್ಲದಿದ್ದರೂ ಮಳೆ ನೆಪಹೇಳಿ ದಿನ ಕಳೆಯುತ್ತಿದ್ದಾರೆ, ಗ್ರಾಮಸ್ಥರ ಮನವಿಗೆ ಯಾವುದೇ ರೀತಿಯ ಸ್ಪಂದನೆ ನೀಡುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ವಿದ್ಯಾರ್ಥಿಗಳು ಹಾಗೂ ವ್ಯಾಪಾರಸ್ಥರಿಗೆ ವಿದ್ಯುತ್ ಕಡಿತದಿಂದ ಹೆಚ್ಚು ತೊಂದರೆಯಾಗಿದೆ. ಮೊಬೈಲ್ ಮತ್ತು ಇಂಟರ್ ನೆಟ್ ಬಳಕೆಗೂ ಅಡಚಣೆಯಾಗಿದೆ. ಕಡಂಗದಲ್ಲಿ 2 ಟಿ.ಸಿ ಗಳ ಅವಶ್ಯಕತೆಯಿದ್ದರು ಕೇವಲ 1 ಟಿ ಸಿ ಮಾತ್ರ ಇದೆ. ಶೀಘ್ರ ಸರಿಪಡಿಸದಿದ್ದಲ್ಲಿ ಚೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. (ವರದಿ : ನೌಫಲ್ ಕಡಂಗ)









