ಕೊಳ್ಳೇಗಾಲ ಜು.6 NEWS DESK : ಕಾಮಗೆರೆ ಸೆಂಟ್ ಫ್ರಾನ್ಸಿಸ್ ಕ್ಷೇವಿಯರ್ ಶಾಲೆಯಲ್ಲಿ 2024-25ನೇ ಶೈಕ್ಷಣಿಕ ಸಾಲಿಗೆ ಶಾಲಾ ಮಂತ್ರಿಮಂಡಲವನ್ನು ರಚಿಸಲಾಯಿತು. ಶಾಲಾ ಮಕ್ಕಳು ಚುನಾವಣೆಯ ಮೂಲಕ ವಿವಿಧ ನಾಯಕರನ್ನು ಆಯ್ಕೆ ಮಾಡಿದರು.
ಶಾಲಾ ಮಂತ್ರಿ ಮಂಡಲದ ವಿದ್ಯಾರ್ಥಿ ಅಧ್ಯಕ್ಷನಾಗಿ ಶೈನ ಜೆರುಷ, ಉಪಾಧ್ಯಕ್ಷರಾಗಿ ಮೋಕ್ಷಿತ್ ಗೌಡ, ಕಾರ್ಯದರ್ಶಿಯಾಗಿ ರಿತುನಿಶಿ, ಶಿಸ್ತುಪಾಲನೆ ಮಂತ್ರಿಯಾಗಿ ಗಾನವಿ ಗೌಡ, ಸಹಾಯಕ ಮಂತ್ರಿಯಾಗಿ ಆಕಾಶ್, ಆರೋಗ್ಯ ಮಂತ್ರಿಯಾಗಿ ಮೋಹಿತ್ ಗೌಡ, ಉಪ ಆರೋಗ್ಯ ಮಂತ್ರಿಯಾಗಿ ಇಂಚರ, ಸಾಂಸ್ಕೃತಿಕ ಮಂತ್ರಿಯಾಗಿ ಅನ್ವಿತಾ ಅರುಳ್, ಉಪ ಸಾಂಸ್ಕೃತಿಕ ಮಂತ್ರಿಯಾಗಿ ಮೊಹಮದ್ ಸಾದ್ ಸರೀಫ್, ಕ್ರೀಡಾ ಮಂತ್ರಿಯಾಗಿ ಪುನೀತ್ ಕುಮಾರ್, ಉಪ ಕ್ರೀಡಾ ಮಂತ್ರಿಯಾಗಿ ಶ್ರೇಯಸ್ ಕುಮಾರ್,ವಾದ್ಯ ದ ನಾಯಕನಾಗಿ ಸೋಹನ್ ಆಯ್ಕೆಗೊಂಡರು.
ಶಾಲಾ ವಿದ್ಯಾರ್ಥಿ ನಾಯಕರ ಪದಗ್ರಹಣ ಸಮಾರಂಭದಲ್ಲಿ ಶಾಲಾ ವ್ಯವಸ್ಥಾಪಕರು ಮತ್ತು ಧರ್ಮಗುರುಗಳಾದ ರೆ. ಫಾ. ಐಸಾಕ್ ರತ್ನಾಕರ್, ನೂತನ ವಿದ್ಯಾರ್ಥಿ ಮುಖಂಡರಿಗೆ ಪ್ರಮಾಣವಚನ ಭೋದಿಸಿದರು ಮತ್ತು ವಿದ್ಯಾರ್ಥಿಗಳಿಂದ ಗೌರವ ರಕ್ಷೆ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವ್ಯವಸ್ಥಾಪಕರು, ಶಾಲಾ ಮಂತ್ರಿ ಮಂಡಲದಲ್ಲಿ ವಿದ್ಯಾರ್ಥಿಗಳು ತಮಗೆ ವಹಿಸಿದ ಜವಾಬ್ದಾರಿಗಳನ್ನರಿತು ಕಾರ್ಯವನ್ನು ನಿರ್ವಹಿಸಬೇಕು. ಆ ಮೂಲಕ ಸಂಸ್ಥೆಗೂ, ಗುರುಗಳಿಗೂ ಆದರ್ಶಪ್ರಾಯವಾಗಿರಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಅಂತೋಣಿರಾಜ್, ಸಹ ಶಿಕ್ಷಕರು, ಸಿಬ್ಬಂದಿಗಳು, ಮಕ್ಕಳು ಉಪಸ್ಥಿತರಿದ್ದರು.