


ಮಡಿಕೇರಿ ಜು.11 NEWS DESK : ಮಡಿಕೇರಿಯ ಆರೋಗ್ಯ ಇಲಾಖೆಯ ಸರ್ವೇಲೆನ್ಸ್ ಕಚೇರಿಗೆ ಶಾಸಕ ಡಾ.ಮಂತರ್ ಗೌಡ ದಿಢೀರ್ ಭೇಟಿ ನೀಡಿದರು.
ಅಧಿಕಾರಿಗಳೊಂದಿಗೆ ಡೆಂಗ್ಯೂ ಜ್ವರದ ಬಗ್ಗೆ ಮಾಹಿತಿ ಪಡೆದು, ಡೆಂಗ್ಯೂ ಪ್ರಕರಣಗಳು ಕಡಿಮೆಯಾಗುವಂತೆ ಜಾಗೃತಿವಹಿಸಬೇಕು, ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವಂತೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು, ಆಸ್ಪತ್ರೆ ವ್ಯಾಪ್ತಿಯಲ್ಲೂ ಶುಚಿತ್ವ ಕಾಪಾಡಿಕೊಳ್ಳುವಂತೆ ಸೂಚನೆ ನೀಡಿದರು.