ಬೇಕಾಗುವ ಸಾಮಾಗ್ರಿಗಳು: 5 ಚೂರು ಮಾಡಿದ ಏಡಿ, ಅರ್ಧ ತೆಂಗಿನ ತುರಿ, ಒಂದು ಲೋಟ ವಿನಿಗರ್, ಆರು ಒಣಮೆಣಸಿನಕಾಯಿ, ಒಂದು ಚಮಚ ಜೀರಿಗೆ, 2 ಬೆಳ್ಳುಳ್ಳಿ ಎಸಳು, 2 ಈರುಳ್ಳಿ, 8 ಲವಂಗ, ತುಪ್ಪ, ಒಂದು ಚಮಚ ಗರಂ ಮಸಾಲಾ, ಮುಕ್ಕಾಲು ಕಟ್ಟು ಕೊತ್ತಂಬರಿ ಸೊಪ್ಪು, 4 ಎಸಳು ಕರಿಬೇವು, ರುಚಿಗೆ ಉಪ್ಪು.
ಮಾಡುವ ವಿಧಾನ: ಅರ್ಧ ಲೋಟ ವಿನಿಗರ್‌ನಲ್ಲಿ ಏಡಿಯ ಚೂರುಗಳನ್ನು ಹಾಕಿ ಮುಕ್ಕಾಲು ಗಂಟೆ ನೆನೆಯಲು ಬಿಡಿ. ಈರುಳ್ಳಿ, ಮೆಣಸಿನಕಾಯಿ ಜೀರಿಗೆ, ಬೆಳ್ಳುಳ್ಳಿ, ಲವಂಗ, ಕೊತ್ತಂಬರಿ ಸೊಪ್ಪುಗಳನ್ನು ನುಣ್ಣಗೆ ರುಬ್ಬಿಕೊಳ್ಳಿ. ದಪ್ಪತಳದ ಅಗಲವಾದ ಪಾತ್ರೆಗೆ ತುಪ್ಪ ಹಾಕಿ ಅದರೊಳಗೆ ವಿನಿಗರ್‌ನಲ್ಲಿರುವ ಏಡಿ ತುಂಡುಗಳನ್ನು ಹಿಂಡಿ ತೆಗೆದು ಹುರಿದುಕೊಳ್ಳಿ.
ಅದು ಕೆಂಪಗಾಗುತ್ತಾ ಬಂದಾಗ ಉಪ್ಪು ಮತ್ತು ರುಬ್ಬಿದ ಮಸಾಲೆಯನ್ನು ಹಾಕಿ ಕೆದಕಿ. ಕರಿಬೇವು, ತೆಂಗಿನ ತುರಿ ಹಾಕಿ ಸಣ್ಣ ಉರಿಯಲ್ಲಿ 12 ನಿಮಿಷ ಬೇಯಿಸಿ ಕೆಳಗಿಳಿಸಿದರೆ ರುಚಿಯಾದ ಚಿಲ್ಲಿ ಕ್ರ್ಯಾಬ್ ಸಿದ್ಧ.