ಕುಶಾಲನಗರ ಜು.19 NEWS DESK : ಕುಶಾಲನಗರ ಹೋಬಳಿ ಗೊಂದಿಬಸವನಹಳ್ಳಿ ಗ್ರಾಮದ ರೊಂಡೆ ಕೆರೆಯ ಏರಿ ಭಾರಿ ಮಳೆಯಿಂದ ಒಡೆದು ಅಪಾರ ಪ್ರಮಾಣದ ನೀರು ರೈತರ ಜಮೀನುಗಳಿಗೆ ನುಗ್ಗಿದೆ.
ಕಳೆದ ಮೂರು ದಿನಗಳಿಂದ ಸುರಿದ ಸತತ ಬಿರುಸಿನ ಮಳೆಯಿಂದ ಕೆರೆಯಲ್ಲಿನ ನೀರಿನ ಪ್ರಮಾಣ ಹೆಚ್ಚಳವಾಗಿ ಒಡೆದು ನೀರೆಲ್ಲಾ ರೈತರ ಕೃಷಿ ಭೂಮಿಗೆ ನುಗ್ಗಿದ್ದು, ಅಕ್ಕ ಪಕ್ಕದ ಜಮೀನುಗಳು ಜಲಾವೃತವಾಗಿವೆ.











