ಮಡಿಕೇರಿ ಜು.20 NEWS DESK : ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ವಿರಾಜಪೇಟೆ ಕ್ಷೇತ್ರದ ವಿವಿಧ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.
ಗೋಣಿಕೊಪ್ಪದ ಕಿರೆಹೊಳೆ, ಪೊನ್ನಂಪೇಟೆ ಬಾಲಕರ ಕ್ರೀಡಾ ವಸತಿ ನಿಲಯ,ಬಾಳೆಲೆ ಕಾಳಜಿ ಕೇಂದ್ರ ಮತ್ತು ಬಲ್ಯಮಂಡೂರು ಕಾಳಜಿ ಕೇಂದ್ರಕ್ಕೆ ಭೇಟಿ ಅಲ್ಲಿನ ನಿವಾಸಿಗಳಿಗೆ ದೈರ್ಯ ತುಂಬಿದರು.
ಈ ಸಂದರ್ಭ ಜಿಲ್ಲಾಧಿಕಾರಿ ವೆಂಕಟ್‌ರಾಜಾ, ಜಿಲ್ಲಾ ಪೋಲಿಸ್ ವರಿಷ್ಠಧಿಕಾರಿ ಕೆ.ರಾಮರಾಜನ್ ಹಾಗೂ ಹಿರಿಯ ಅಧಿಕಾರಿಗಳು ಹಾಜರಿದ್ದರು.










