ಮೂರ್ನಾಡು ಜು.20 NEWS DESK : ಕಕ್ಕಬ್ಬೆ ಗ್ರಾಮದ ಮಲ್ಮ ಹಾಕಿ ಕ್ಲಬ್ನ ಸದಸ್ಯರು ಸ್ವಯಂ ಪ್ರೇರಿತರಾಗಿ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವ ಮೂಲಕ ಶ್ರಮದಾನ ಮಾಡಿದರು.
ವಿರಾಜಪೇಟೆಯಿಂದ ಕಕ್ಕಬ್ಬೆ ಮುಖಾಂತರ ಭಾಗಮಂಡಲಕ್ಕೆ ತೆರಳುವ ರಸ್ತೆ ತುಂಬಾ ಹದಗೆಟ್ಟಿದ್ದು, ನಿರಂತರ ಮಳೆಯಿಂದ ರಸ್ತೆಯಲ್ಲಿ ದೊಡ್ಡ ದೊಡ್ಡಗುಂಡಿಗಳಾಗಿವೆ. ವಾಹನ ಸಂಚಾರ ಹಾಗೂ ಸಾರ್ವಜನಿಕರು ನಡೆದಾಡಲು ಪರದಾಡುವಂತಾಗಿತ್ತು. ಈ ನಿಟ್ಟಿನಲ್ಲಿ ಮಲ್ಮ ಹಾಕಿ ಕ್ಲಬ್ನ ಸದಸ್ಯರು ನಿರಂತರ ಮಳೆಯ ನಡುವೆಯು ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.
ಮಲ್ಮ ಹಾಕಿ ಕ್ಲಬ್ನ ಅಧ್ಯಕ್ಷ ಮಾದಂಡ ಸಂದೇಶ್ ಅಪ್ಪಯ್ಯ, ಮಿಲನ್, ದಿವೇಶ್, ಅರ್ಜುನ ಕ್ಲಬ್ ನ ಸದಸ್ಯರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.
ವರದಿ : ಟಿ.ಸಿ. ನಾಗರಾಜ್, ಮೂರ್ನಾಡು









