ಕುಶಾಲನಗರ ಜು.26 NEWS DESK : ಕುಶಾಲನಗರ ತಾಲೂಕು ಗುಡ್ಡೆ ಹೊಸೂರಿನಲ್ಲಿ ಶ್ರೀ ಧರ್ಮಸ್ಥಳ ಸಿರಿ ಮಿಲ್ಲೆಟ್ ಹೌಸ್ ಕೇಂದ್ರದವನ್ನು ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಎಂ.ಎನ್.ಚಂದ್ರಮೋಹನ್ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು, ಆಹಾರ ಪದ್ಧತಿ ಬದಲಾವಣೆ ಮೂಲಕ ಆರೋಗ್ಯ ಸ್ಥಿತಿಯಲ್ಲಿ ಏರುಪೇರು ಉಂಟಾಗುವ ಸಾಧ್ಯತೆಗಳು ಅಧಿಕವಾಗಿದೆ.
ಪ್ರತಿಯೊಬ್ಬರು ಆಹಾರ ವಸ್ತುಗಳ ಗುಣಮಟ್ಟಗಳ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ ಎಂದರು. ಉತ್ತಮ ಆರೋಗ್ಯ ಮೂಲಕ ಸ್ವಾಸ್ಥ್ಯ ಸಮಾಜ ಕಾಣಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂರ‍್ಭ ನಡೆದ ಸರಳ ಕರ‍್ಯಕ್ರಮದಲ್ಲಿ ಶ್ರೀ ಕ್ಷೇತ್ರ ರ‍್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನರ‍್ದೇಶಕಿ ಲೀಲಾವತಿ ಅವರು ದೀಪ ಪ್ರಜ್ವಲನೆ ಮಾಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ದೀಪ ಪ್ರಜ್ವಲನೆ ಮಾಡಿ ಮಾತನಾಡಿದರು.
ಧರ್ಮಸ್ಥಳ ಸಿರಿ ಮಿಲ್ಲೆಟ್ ಯೋಜನಾಧಿಕಾರಿ ಯು.ಎಂ.ರಮೇಶ್, ಸಿರಿ ಆಹಾರ ಧಾನ್ಯಗಳ ಬಗ್ಗೆ ಸಮಗ್ರ ಮಾಹಿತಿ ಒದಗಿಸಿದರು.
ಮುಖ್ಯ ಅತಿಥಿಗಳಾಗಿ ಗುಡ್ಡೆ ಹೊಸೂರು ಗ್ರಾ.ಪಂ ಅಧ್ಯಕ್ಷೆ ರುಕ್ಮಿಣಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಅಧ್ಯಕ್ಷರಾದ ಸೌಮ್ಯ ಸೋಮವಾರಪೇಟೆ ಯೋಜನಾಧಿಕಾರಿ ಹೆಚ್.ರೋಹಿತ್, ಧರ್ಮಸ್ಥಳ ಸಿರಿ ಮಿಲ್ಲೆಟ್ ಯೋಜನಾಧಿಕಾರಿ ಯು.ಎಂ.ರಮೇಶ್, ಸಿರಿ ಮಾರುಕಟ್ಟೆ ಮೇಲ್ವಿಚಾರಕರಾದ ಹೇಮಂತ್, ಯೋಜನೆಯ ಗುಡ್ಡೆ ಹೊಸೂರು ವಲಯ ಮೇಲ್ವಿಚಾರಕರು ಸೇವಾ ಪ್ರತಿನಿಧಿಗಳು ಇದ್ದರು.