ಸೋಮವಾರಪೇಟೆ NEWS DESK ಅ.3 : ಐಗೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಆಟಿ 18 ರ ಅಂಗವಾಗಿ ಶಾಲಾ ಮಕ್ಕಳಿಗೆ ಬಿಸಿಯೂಟದೊಂದಿಗೆ ಮಧುಭಾನ ಸೊಪ್ಪಿನ ಪಾಯಸವನ್ನು ಶನಿವಾರ ವಿತರಿಸಲಾಯಿತು.
ಕೊಡಗಿನಲ್ಲಿ ಆಟಿ 18 ರ ಸಂದರ್ಭ ಔಷಧೀಯ ಗುಣಗಳುಳ್ಳ ಸೊಪ್ಪಿನ ಮಹತ್ವದ ಕುರಿತು ಮುಖ್ಯ ಶಿಕ್ಷಕ ಯಶ್ವಂತ್ ಕುಮಾರ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಮಧುಭಾನ ಸೊಪ್ಪಿನಿಂದ ಮಾಡಿದ ಖಾದ್ಯಗಳಲ್ಲಿ ಔಷಧಿ ಗುಣವಿರುತ್ತದೆ ಎಂಬ ನಂಬಿಕೆ ಜನರಲ್ಲಿದೆ. ವರ್ಷಕ್ಕೊಮ್ಮೆ ಈ ಸೊಪ್ಪಿನಿಂದ ತಯಾರಿಸಿದ ಖಾದ್ಯವನ್ನು ಸೇವಿಸುವುದು ವಾಡಿಕೆ. ವಿಶೇಷ ಪರಿಮಳಯುಕ್ತವಾಗಿರುವ ಈ ಗಿಡಕ್ಕೆ ಆರೋಗ್ಯ ಪೂರಕ ಹಾಗು ಹಲವು ರೋಗಗಳನ್ನು ಗುಣಪಡಿಸುವ ಶಕ್ತಿ ಇದೆ ಎನ್ನಲಾಗುತ್ತದೆ ಎಂದು ಹೇಳಿದರು. ಸಹಶಿಕ್ಷಕರುಗಳಾದ ಎಸ್.ಎಸ್.ರಂಜಿತ, ಕೃಷ್ಣಪ್ಪ, ರೇಖಾ, ಮಂಜುನಾಥ್, ಗುಲಾಬಿ ಮತ್ತು ಅಕ್ಷರ ದಾಸೋಅ ಸಿಬ್ಬಂದಿಗಳು ಇದ್ದರು.