ಮಡಿಕೇರಿ ಆ.17 NEWS DESK : ಯೂರೋಪ್ ಖಂಡದ ಅತಿದೊಡ್ಡ ಶಿಖರ ಮೌಂಟ್ ಎಲ್ ಬ್ಯೂಸ್ ನಲ್ಲಿ ಸ್ವಾತಂತ್ರ್ಯೋತವದಂದು ಭಾರತದ ಬಾವುಟವನ್ನು ಎತ್ತಿ ಹಿಡಿಯುವ ಮೂಲಕ ದೇಶಾಭಿಮಾನವನ್ನು ಮೆರೆದಿದ್ದಾರೆ. ದಕ್ಷಿಣ ಕೊಡಗಿನ ಗೋಣಿಕೊಪ್ಪಲಿನ ಅತ್ತೂರು ಜಮ್ಮಡ ಅಯ್ಯಣ್ಣ ಅವರ ಪತ್ನಿ ಜಮ್ಮಡ ಪ್ರೀತ್ ಅಪ್ಪಯ್ಯ (ತವರು ಮನೆ ಅಮ್ಮತ್ತಿ ಕುಂಞಯಂಡ) ಈವರೆಗೆ ಹಲವು ಪರ್ವತ ರೋಹಣದ ಸಾಧನೆಯನ್ನು ಮಾಡಿದ್ದಾರೆ. ಈ ಬಾರಿ ಯೂರೋಪ್‍ನ ಅತೀ ದೊಡ್ಡ ಶಿಖರ, ರಷ್ಯಾದ ಸುಮಾರು 5642 ಮೀಟರ್, 18510 ಸಾವಿರ ಅಡಿಗಳಷ್ಟು ಎತ್ತರದ ಮೌಂಟ್ ಎಲ್ ಬ್ಯೂಸ್ ಪರ್ವತ ಏರುವ ಸಾಧನೆ ಮಾಡಿದ ಕರ್ನಾಟಕದ ಹಾಗೂ ಕೊಡಗಿನ ಮಹಿಳೆಯಾಗಿದ್ದಾರೆ. 2012ರಲ್ಲಿ ನಾಪೋಕ್ಲು ಸಮೀಪದ ಪೇರೂರು ಗ್ರಾಮದ ಪರ್ವತರೋಹಿ ತೆಕ್ಕಡ ಭವಾನಿಮೌಂಟ್ ಎಲ್ ಬ್ಯೂಸ್ ಏರಿ ಭಾರತದ ಪತಾಕೆಯನ್ನು ಹಾರಿಸಿದ ಕರ್ನಾಟಕದ ಹಾಗೂ ಕೊಡಗಿನ ಮೊದಲ ಮಹಿಳೆಯಾದರೆ ಜಮ್ಮಡ ಪ್ರೀತ್ ಅಪ್ಪಯ್ಯ ದ್ವಿತೀಯ ಮಹಿಳೆ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ.
ವರದಿ : ಪುತ್ತರಿರ ಕರುಣ್ ಕಾಳಯ್ಯ