ವಿರಾಜಪೇಟೆ NEWS DESK ಆ.21 : ನಾಟ್ಯ ಮಯೂರಿ ನೃತ್ಯ ಶಾಲೆ ಹಾಗೂ ಡಿವೈನ್ ಟೆಂಪಲ್ ಫೌಂಡೇಶನ್ ಬೆಂಗಳೂರು ಇದರ ಸಹಯೋಗದಲ್ಲಿ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದ ನಯನ ಸಭಾಂಗಣದಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವಿರಾಜಪೇಟೆಯ ಭರತನಾಟ್ಯ ಕಲಾವಿದೆ ಬಿ. ಎನ್. ಲಾವಣ್ಯ ಬೋರ್ಕರ್ವ ಅವರಿಗೆ ನೃತ್ಯ ಸಾಧನೆಗಾಗಿ ರಾಷ್ಟ್ರಮಟ್ಟದ ಮಿನುಗುತಾರೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಲಾವಣ್ಯ ಬೋರ್ಕರ್ ವಿರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನ ತೃತೀಯ ಬಿಬಿಎ ವಿದ್ಯಾರ್ಥಿನಿ ಹಾಗೂ ವಿರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಶಾಲೆಯ ಪ್ರೇಮಾಂಜಲಿ ಆಚಾರ್ಯ ರವರ ಶಿಷ್ಯೆಯಾಗಿದ್ದಾರೆ. ಇವರು ಮೂಲತಃ ವಿರಾಜಪೇಟೆ ಸಮೀಪದ ಬೇಟೋಳಿ ರಾಮನಗರದ ಬಿ. ಜಿ.ನಟರಾಜ್ ಬೋರ್ಕರ್ ಹಾಗೂ ಸುನಂದ ದಂಪತಿಗಳ ಪುತ್ರಿ.