ಸೋಮವಾರಪೇಟೆ NEWS DESK ಆ.21 : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಾಮರಸ್ಯ ವೇದಿಕೆ ಸೋಮವಾರಪೇಟೆ ತಾಲ್ಲೂಕಿನ ಕಿಬ್ಬೆಟ್ಟ ಗ್ರಾಮದ ದಲಿತ ಕಾಲೋನಿಯಲ್ಲಿ ರಕ್ಷಾ ಬಂಧನ ಆಚರಿಸಿತು. ವೇದಿಕೆಯ ಪ್ರಮುಖರು ನಿವಾಸಿಗಳಿಗೆ ರಕ್ಷೆ ಕಟ್ಟಿ ಸಿಹಿ ಹಂಚಿದರು. ಸಾಮರಸ್ಯ ವೇದಿಕೆ ಕಾರ್ಯಕ್ರಮ ಕಾರ್ಯಕರ್ತರಾದ ಮಂಜುನಾಥ್ ವಿ.ಸಿ, ನಿಖಿಲ್, ಆನಂದ್ ಮತ್ತಿತರರು ಹಾಜರಿದ್ದರು.











