ಮಡಿಕೇರಿ NEWS DESK ಆ 21 : ವನ್ಯಜೀವಿಗಳ ಜೀವನ ಕುರಿತು ಸೂಕ್ತ ಮಾಹಿತಿ ಮತ್ತು ಅಪಾರವಾದ ತಾಳ್ಮೆಯಿದ್ದಲ್ಲಿ ಉತ್ತಮ ವನ್ಯಜೀವಿ ಛಾಯಾಗ್ರಾಹಕರಾಗಲು ಸಾಧ್ಯ ಎಂದು ವನ್ಯಜೀವಿ ಛಾಯಾಗ್ರಾಹಕಿ ಛಾಯಾ ಸುನೀಲ್ ಅಭಿಪ್ರಾಯಪಟ್ಟಿದ್ದಾರೆ, ನಗರದ ರೋಟರಿ ಸಭಾಂಗಣದಲ್ಲಿ ರೋಟರಿ ಮಿಸ್ಟಿ ಹಿಲ್ಸ್ ನಿಂದ ಆಯೋಜಿತ ವಿಶ್ವಛಾಯಾಗ್ರಹಣ ದಿನದ ಅಂಗವಾಗಿನ ವನ್ಯಜೀವಿ ಛಾಯಾಚಿತ್ರ ಪ್ರದಶ೯ನದಲ್ಲಿ ಮಾತನಾಡಿದ ಹನಗೋಡು ಗ್ರಾಮದ ವನ್ಯಜೀವಿ ಛಾಯಾಗ್ರಾಹಕಿ ಛಾಯಾ ಸುನೀಲ್, ತಾನೋವ೯ ಶಿಕ್ಷಕಿಯಾಗಿ ವನ್ಯಜೀವಿಗಳ ಕುರಿತು ಸಾಕಷ್ಟು ಕುತೂಹಲ ಹೊಂದಿದ್ದೆ, ಕಾಡು ಜೀವಿಗಳು ಮತ್ತು ಮಾನವನ ನಡುವಿನ ಸಂಘಷ೯ದ ಬಗ್ಗೆಯೂ ಅನೇಕ ಪ್ರಶ್ನೆಗಳೂ ಮನದಲ್ಲಿದ್ದವು, ಕೆಲವೇ ವಷ೯ಗಳ ಹಿಂದೆ ಈ ಎಲ್ಲಾ ಸಂಶಯಗಳಿಗೆ ಪರಿಹಾರರೂಪವಾಗಿ ಅರಣ್ಯ ಜೀವಿಗಳ ಜೀವನ ಅಧ್ಯಯನ ಮಾಡಲು ಮುಂದಾಗಿದ್ದೆ, ಆಗ ಜತೆಯಾದ ಛಾಯಾಗ್ರಹಣ ಹವ್ಯಾಸವೇ ವನ್ಯಜೀವಿಗಳ ಅದ್ಬುತ ಲೋಕದತ್ತ ತನ್ನನ್ನು ಸಾಗುವಂತೆ ಮಾಡಿತು ಎಂದು ಛಾಯಾಸುನೀಲ್ ಹೇಳಿದರು, ವನ್ಯಜೀವಿ ಛಾಯಾಗ್ರಹಣಕ್ಕೆ ವನ್ಯಜೀವಿಗಳ ಜೀವನ ಕ್ರಮದ ಬಗ್ಗೆ ಸೂಕ್ತ ತಿಳುವಳಿಕೆ ಮತ್ತು ಅಪಾರವಾದ ತಾಳ್ಮೆಯ ಅಗತ್ಯವಿದೆ, ಕೆಲವೊಂದು ಛಾಯಾಚಿತ್ರ ತೆಗೆಯಲು ವಾರಗಟ್ಟಲೆ ಮಾತ್ರವಲ್ಲ ತಿಂಗಳಾನುಗಟ್ಟಲೆ ಕಾಯಬೇಕಾಗುತ್ತದೆ, ಹೀಗೆ ಕಾದಾಗಲೇ ಅತ್ಯುದ್ವತ ಛಾಯಾಚಿತ್ರಗಳನ್ನು ತೆಗೆಯಲು ಸಾಧ್ಯವಾಗುತ್ತದೆ ಎಂದೂ ಛಾಯಾ ಸುನೀಲ್ ಹೇಳಿದರು, ಹುಲಿ, ಸಿಂಹ, ಕಾಡಾನೆಗಳಲ್ಲಿ ವೈವಿಧ್ಯತೆ ಹೆ್ಚ್ಚಾಗಿ ಕಂಡು ಬರುವುದಿಲ್ಲ, ಆದರೆ ಪಕ್ಷಿಗಳು, ಚಿಟ್ಟೆಗಳಂತ ಪ್ರಾಣಿಗಳಲ್ಲಿ ನೂರಾರು ವೈವಿಧ್ಯತೆಗಳು ಕಾಣುವುದರಿಂದಾಗಿ ಪಕ್ಷಿ ಛಾಯಾಚಿತ್ರಗಳಿಗೆ ಆದ್ಯತೆ ನೀಡಿರುವುದಾಗಿ ಛಾಯಾ ಸುನೀಲ್ ಹೇಳಿದರು, ಓವ೯ ಮಹಿಳಾ ಛಾಯಾಗ್ರಾಹಕಿಯಾಗಿ ಸಾಕಷ್ಟು ಸವಾಲುಗಳನ್ನು ಛಾಯಾಗ್ರಹಣ ಕ್ಷೇತ್ರದಲ್ಲಿ ಎದುರಿಸಿದ್ದಾಗಿ ಹೇಳಿದ ಛಾಯಾ, ಪ್ರತೀಯೋವ೯ ಮಹಿಳೆಯರೂ ತನ್ನ ಮನಸ್ಸೊಳಗಿರುವ ಸುಪ್ತ ಪ್ರತಿಭೆಗಳನ್ನು ಹೊರತರುವ ಮೂಲಕ ಸಮಾಜದಲ್ಲಿ ಪ್ರತಿಭಾವಂತೆಯಾಗಿ ಗುರುತಿಸಿಕೊಳ್ಳುವಂತೆ ಸಲಹೆ ನೀಡಿದ ಛಾಯಾ ಸುನೀಲ್, ಛಾಯಾಗ್ರಹಣದಂಥ ಹೆಚ್ಚು ವೆಚ್ಚ ಬಯಸುವ ಹವ್ಸಾಸ ಆಥಿ೯ಕ ಲಾಭಕ್ಕಿಂತ ಮನಸ್ಸಿಗೆ ಹೆಚ್ಚು ತೖಪ್ತಿ ನೀಡಬಲ್ಲುದ್ದಾಗಿದೆ ಎಂದೂ ಅಭಿಪ್ರಾಯಪಟ್ಟರು, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್ ಮಾತನಾಡಿ, ವಿಶ್ವದಾದ್ಯಂತಲಿನ ಛಾಯಾಗ್ರಾಹಕರ ಶ್ರಮವನ್ನು ಗುರುತಿಸಲು ರೋಟರಿಯಿಂದ ಛಾಯಾಗ್ರಹಣ ಮಹತ್ವದ ಬಗೆಗಿನ ಕಾಯ೯ಕ್ರಮ ಆಯೋಜಿಸಿರುವುದಾಗಿ ನುಡಿದರು. ಕಾಯ೯ಕ್ರಮ ಸಂಚಾಲಕ ಅನಿಲ್ ಹೆಚ್,ಟಿ, ನಿರೂಪಿಸಿದ ಕಾಯ೯ಕ್ರಮದಲ್ಲಿ ಮಿಸ್ಟಿ ಹಿಲ್ಸ್ ಕಾಯ೯ದಶಿ೯ ಕಟ್ಟೆಮನೆ ಸೋನಜಿತ್ ವಂದಿಸಿ, ನಿದೇ೯ಶಕರಾದ ಎಂ, ಧನಂಜಯ್, ಗಾನಾ ಪ್ರಶಾಂತ್ , ಶಂಕರ್ ಪೂಜಾರಿ ಕಾಯ೯ಕ್ರಮ ನಿವ೯ಹಿಸಿದರು. 300 ಕ್ಕೂ ಅಧಿಕ ವನ್ಯಜೀವಿಗಳ ಛಾಯಾಚಿತ್ರಗಳ ಪ್ರದಶ೯ನ ನೂರಾರು ವೀಕ್ಷಕರ ಮನಸೆಳೆಯಿತು.
Breaking News
- *ಹೊದ್ದೂರಿನ ಕಬ್ಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*
- *ದೇಶ ದ್ರೋಹದ ಪ್ರಕರಣ ದಾಖಲಿಸಲು ಕೆ.ಜಿ.ಬೋಪಯ್ಯ ಆಗ್ರಹ*
- *ಬಿಜೆಪಿ, ಜೆಡಿಎಸ್ ಗೆ ಜನ ತಕ್ಕ ಪಾಠ ಕಲಿಸಿದ್ದಾರೆ : ಎಂ.ಎ.ಕಲೀಲ್ ಬಾಷ*
- *ಕೆವಿ ಎನ್ಸಿಸಿ ಕೆಡೆಟ್ ಗಳಿಂದ ಕಾಯ೯ಪ್ಪ ಪ್ರತಿಮೆ ಸ್ವಚ್ಛತೆ*
- *ಸೋಮವಾರಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ*
- *ಕರ್ನಾಟಕ ಉಪ ಚುನಾವಣೆ : ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ*