ನಾಪೋಕ್ಲು ಸೆ.4 NEWS DESK : ಹೊದ್ದೂರು ಗ್ರಾ.ಪಂ ಗ್ರಂಥಾಲಯದಲ್ಲಿ ಪಂಚಾಯತ್ ರಾಜ್ ಇಲಾಖೆ, ಶಿಕ್ಷಣ ಫೌಂಡೇಶನ್ ಹಾಗೂ ಡೆಲ್ ಟೆಕ್ನಾಲಜಿ ಸಹಯೋಗದೊಂದಿಗೆ ಗ್ರಾಮೀಣ ಜನತೆಗೆ, ಮಹಿಳಾ ಸಂಘದ ಸದಸ್ಯರಿಗೆ ಡಿಜಿಟಲ್ ಸಾಕ್ಷರತೆಯ ತರಬೇತಿ ಕಾರ್ಯಾಗಾರ ನಡೆಯಿತು. ಶಿಕ್ಷಣ ಫೌಂಡೇಶನ್ ಜಿಲ್ಲಾ ಸಂಯೋಜಕ ದಿಲೀಪ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಜಗತ್ತಿನಲ್ಲಿ ಡಿಜಿಟಲ್ ಸಾಕ್ಷರತೆ ಅತಿ ಮಹತ್ವದಿಂದ ಕೂಡಿದೆ. ಇದರ ತರಬೇತಿಯ ಮೊದಲ ಅಧಿವೇಶನದ ಬಗ್ಗೆ ತರಬೇತಿ ನೀಡಿ ಮಹಿಳೆಯರು ತಮ್ಮ ಸ್ವ ಅಭಿವೃದ್ಧಿಗೆ ಇದನ್ನು ಬಳಸಿಕೊಳ್ಳಬಹುದು ಎಂದು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಸದಸ್ಯೆ ಹಾಗೂ ನಿವೃತ್ತ ಮುಖ್ಯೋಪಾಧ್ಯಾಯಿನಿ ಲೀಲಾವತಿ, ಗ್ರಾಮೀಣ ಮಹಿಳೆಯರು ಡಿಜಿಟಲ್ ಸಾಕ್ಷರತೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಪಂಚಾಯಿತಿ ಕಾರ್ಯದರ್ಶಿ ಚಂದ್ರಶೇಖರ, ಗ್ರಂಥಪಾಲಕಿ ಸರಸ್ವತಿ ಹಾಗೂ ಸಂಜೀವಿನಿ ಒಕ್ಕೂಟ, ಸ್ವ ಸಹಾಯ ಸಂಘದ, ಎಂ ಬಿ ಕೆ ಸದಸ್ಯರು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ.