ನಾಪೋಕ್ಲು ಸೆ.4 NEWS DESK : ಕೊಡಗಿನ ಸಾಂಪ್ರದಾಯ ಹಬ್ಬ (ಕೈಲ್ ಮುಹೂರ್ತ) ಕೈಲ್ ಪೊಳ್ದ್ ನಮ್ಮೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ನೆಲಜಿ ಗ್ರಾಮದ ಚೀಯಕ ಪೂವಂಡ ಐನ್ ಮನೆಯಲ್ಲಿ ಕುಟುಂಬಸ್ಥರೆಲ್ಲ ಸೇರಿ ಕೈಲ್ ಪೊಳ್ದ್ ನಮ್ಮೆಯನ್ನು ಆಚರಿಸಿದರು. ಹಬ್ಬದ ಪ್ರಯುಕ್ತ ನೆಲ್ಲಕ್ಕಿ ನಡುಬಾಡೆಯಲ್ಲಿ ಕೋವಿ, ಓಡಿಕತ್ತಿ, ಗೆಜ್ಜೆ ತಂಡ್ ಇಟ್ಟು ತೋಕ್ ಪೂ ಹಾಗೂ ಇತರ ಹೂವುಗಳಿಂದ ಶೃಂಗರಿಸಿ ಮೀದಿ ಇಟ್ಟು ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿ ಪ್ರಾರ್ಥಿಸಲಾಯಿತು. ಹಬ್ಬದ ವಿಶೇಷ ಭೋಜನದ ನಂತರ ಹಿರಿಯರು, ಕಿರಿಯರು, ಮಹಿಳೆಯರು ತೆಂಗಿನ ಕಾಯಿಗೆ ಗುಂಡುಹೊಡೆಯುವ ಮೂಲಕ ವಿವಿಧ ಕ್ರೀಡಾಕೂಟಗಳು ನಡೆಯಿತು. ನಾಪೋಕ್ಲು ಸುತ್ತಮುತ್ತಲ ಗ್ರಾಮಗಳಾದ ನೆಲಜಿ ಪುಲಿಕೋಟ್, ಪೇರೂರು, ಕೈಕಾಡು, ಪಾರಾಣೆ, ಬೆಟ್ಟಗೇರಿ, ಪಾಲೂರು, ಕಾರುಗುಂದ, ಹೆರವನಾಡು, ಅವಂದೂರು, ಹೊದ್ದೂರು, ಬಲಮುರಿ ಸೇರಿದಂತೆ ಇನ್ನಿತರ ಕಡೆಗಲಲ್ಲಿಯೂ ಸಂಭ್ರಮದಿಂದ ಹಬ್ಬವನ್ನು ಆಚರಿಸಲಾಯಿತು.
ವರದಿ : ದುಗ್ಗಳ ಸದಾನಂದ.