ಮಡಿಕೇರಿ ಸೆ.5 NEWS DESK : ಭಾಗಮಂಡಲದ ಜ್ಞಾನೋದಯ ಆಂಗ್ಲ ಮಾಧ್ಯಮ ಶಾಲೆಯ (JEMS) ವಿದ್ಯಾರ್ಥಿಗಳು ನಾಪೋಕ್ಲು ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿ ಸಾಧನೆ ಮಾಡಿದ್ದಾರೆ. ಪ್ರಾಥಮಿಕ ಶಾಲಾ ವಿಭಾಗದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಬಾಲಕಿಯರ ವಿಭಾಗದಲ್ಲಿ ಪ್ರಥಮ, ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಚೆಸ್ ಪಂದ್ಯಾವಳಿಯಲ್ಲಿ ಎ.ಎನ್.ಬೃಂದಾ, ಕೆ. ಆರ್.ಬಿನೀಷ್, ಎ.ಎನ್.ಚಿರಾಗ್ ಚಂಗಪ್ಪ ವೀಜೆತಾರಾಗಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಭಾಗಮಂಡಲ ಕಾವೇರಿ ಜೂನಿಯರ್ ಕಾಲೇಜಿನಲ್ಲಿ ನಡೆದ ಪ್ರೌಢ ಶಾಲಾ ವಿಭಾಗ ಮಟ್ಟದ ಬಾಲಕರ ಹಾಕಿ ಪಂದ್ಯಾವಳಿಯಲ್ಲಿ ಪ್ರಥಮ, ಹ್ಯಾಂಡ್ ಬಾಲ್ ನಲ್ಲಿ ದ್ವಿತೀಯ ಹಾಗೂ ಶಟಲ್ ಬ್ಯಾಡ್ಮಿಂಟನ್ ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಬಾಲಕಿಯರ ವಿಭಾಗದ ಖೋ -ಖೋ ಪಂದ್ಯಾವಳಿಯಲ್ಲಿ ದ್ವಿತೀಯ, ಶಟಲ್ ಬ್ಯಾಡ್ಮಿಂಟನ್ ನಲ್ಲಿ ದ್ವಿತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಚೆಸ್ ಪಂದ್ಯಾವಳಿಯಲ್ಲಿ ಬಾಲಕಿಯರಾದ ಶಿರಿನ್ ಸೀತಮ್ಮ , ಶೀರ್ಷಾ, ವೈ.ಎಸ್.ಸ್ಪಂದನ, ಕೆ.ಪಿ.ನಿಧಿ ಮತ್ತು ಬಾಲಕರ ವಿಭಾಗದಲ್ಲಿ ಬಿ.ಯು.ಕುಶಾಲಪ್ಪ ವಿಜೇತರಾಗಿ ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಥ್ಲೆಟಿಕ್ಸ್ ಬಾಲಕಿಯರ ವಿಭಾಗದಲ್ಲಿ 400 ಹಾಗೂ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಕೆ.ಆರ್.ಯಶಿಕ ಪ್ರಥಮ, 1500 ಮೀಟರ್ ಓಟದ ಸ್ಪರ್ಧೆಯಲ್ಲಿ ಕೆ.ಪಿ.ನಿಧಿ ಪ್ರಥಮ, 4*200ಮೀಟರ್ ಹಾಗೂ 4*100ಮೀಟರ್ ರಿಲೇ ಓಟದಲ್ಲಿ ಪ್ರಥಮ, ಗುಂಡು ಎಸೆತ ಸ್ಪರ್ಧೆಯಲ್ಲಿ ಬಿ.ಎ.ಫಾತಿಮಾತ್ ವಾಫಾ ಪ್ರಥಮ, ಭರ್ಜಿ ಎಸೆತದಲ್ಲಿ ಓಂ ಶ್ರೀ ಪ್ರಥಮ, ಉದ್ದ ಜಿಗಿತ ಸ್ಪರ್ಧೆಯಲ್ಲಿ ಕೆ.ಆರ್.ಯಶಿಕ ಪ್ರಥಮ, ಎತ್ತರ ಜಿಗಿತದಲ್ಲಿ ಕೆ.ಪಿ.ನಿಧಿ ದ್ವಿತೀಯ ಸ್ಥಾನ ಪಡೆದುಕೊಂಡು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 400 ಮೀಟರ್ ಓಟದಲ್ಲಿ ನೀತು ದ್ವಿತೀಯ, 800 ಮೀಟರ್ ಓಟದಲ್ಲಿ ಸಾನಿಯಾ ದ್ವಿತೀಯ, ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಸಹನ ದ್ವಿತೀಯ ಹಾಗೂ ಭರ್ಜಿ ಎಸೆತ (javelin throw) ಸ್ಪರ್ಧೆಯಲ್ಲಿ ಫಾತಿಮಾತ್ ಹಿಬ ತೃತೀಯ, ಎತ್ತರ ಜಿಗಿತದಲ್ಲಿ ಲಕ್ಷಿತಾ ತೃತೀಯ, ತ್ರಿಪ್ಪಲ್ ಜಂಪ್ ನಲ್ಲಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಬಾಲಕರ ವಿಭಾಗದ 200 ಮೀಟರ್ ಓಟದ ಸ್ಪರ್ಧೆಯಲ್ಲಿ ಶಮ್ಮಾಸ್ ದ್ವಿತೀಯ, 4*200 ಮೀಟರ್ ರಿಲೇ ಸ್ಪರ್ಧೆಯಲ್ಲಿ ತೃತೀಯ, ಉದ್ದ ಜಿಗಿತದಲ್ಲಿ ಮಾನ್ವಿತ್ ದ್ವಿತೀಯ, ತ್ರಿಪ್ಪಲ್ ಜಂಪ್ ನಲ್ಲಿ ಯಶಿಕ್ ತೃತೀಯ, ಭರ್ಜಿ ಎಸೆತದಲ್ಲಿ ಮಾನ್ವಿತ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಪ್ರಾಂಶುಪಾಲರು, ದೈಹಿಕ ಶಿಕ್ಷಕರು ಹಾಗೂ ಶಿಕ್ಷಕ ವೃಂದದವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.