ಮಡಿಕೇರಿ ಸೆ.10 NEWS DESK : ಪ್ರಯಾಣಿಕರೊಬ್ಬರು ಬಿಟ್ಟು ಹೋದ ಮೊಬೈಲ್‍ನ್ನು ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ಆಟೋ ಚಾಲಕ ಪ್ರಮಾಣಿಕತೆ ಮೆರೆದಿದ್ದಾರೆ. ಚಾಲಕ ಅಮಿತ್ ತನ್ನ ಆಟೋದಲ್ಲಿ ಮಡಿಕೇರಿಯ ಹಳೆ ಬಸ್ ನಿಲ್ದಾಣದಿಂದ ಪ್ರಯಾಣಿಕರೊಬ್ಬರನ್ನು ಹತ್ತಿಸಿಕೊಂಡು ಮಹದೇವಪೇಟೆಗೆ ಕರೆದೊಯ್ದಿದ್ದಾರೆ. ಆ ಪ್ರಯಾಣಿಕ ಆಟೋದಲ್ಲೇ ತಮ್ಮ ಮೊಬೈಲ್‍ನ್ನು ಬಿಟ್ಟುಹೋಗಿದ್ದಾರೆ. ಆಟೋ ಚಾಲಕ ಅಮಿತ್ ಅವರು ಮಾದಾಪುರಕ್ಕೆ ಬಾಡಿಗೆಗೆ ಹೋಗಿ ಹಿಂತಿರುಗಿ ಬರುವಾಗ ಆಟೋದಲ್ಲಿ ಮೊಬೈಲ್ ಕಂಡಿದೆ. ಇದೇ ಸಂದರ್ಭ ಮೊಬೈಲ್‍ಗೆ ಕರೆ ಬಂದಿದ್ದು, ಕರೆ ಸ್ವೀಕರಿಸಿ ಸರಿಯಾದ ಮಾಹಿತಿ ಪಡೆದು ಪ್ರಯಾಣಿಕರ ಮನೆಗೆ ತೆರಳಿ ಮೊಬೈಲ್‍ನ್ನು ಮರಳಿಸಿದ್ದಾರೆ. ಚಾಲಕನ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.










