
ನಾಪೋಕ್ಲು ಸೆ.10 NEWS DESK : ಕಕ್ಕುಂದಕಾಡಿನ ಶ್ರೀ ವೆಂಕಟೇಶ್ವರ ಗಣಪತಿ ಸೇವಾ ಸಮಿತಿಯ ವತಿಯಿಂದ ಕಕ್ಕುಂದ ಕಾಡುವಿನಲ್ಲಿರುವ ಬಾಳೆಯಡ ಶ್ಯಾಮ್ ಮಂದಪ್ಪ ಅವರ ಗದ್ದೆಯಲ್ಲಿ ಸಾರ್ವಜನಿಕರಿಗೆ ಕೆಸರು ಗದ್ದೆ ಕ್ರೀಡಾಕೂಟ ನಡೆಯಿತು. ಬಾಳೆಯಡ ಶಾರದಾ ಸುಬ್ರಮಣಿ ಕ್ರೀಡಾಕೂಟವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಸಾರ್ವಜನಿಕರಿಗೆ ಆಯೋಜಿಸಿದ ಪುರುಷರ ಕಬಡ್ಡಿಯಲ್ಲಿ ಮೊದಲ ಬಹುಮಾನವನ್ನ ಬೆಟ್ಟಗೇರಿ ತಂಡ ಪಡೆದುಕೊಂಡರೆ, ದ್ವಿತೀಯ ಬಹುಮಾನವನ್ನು ಇಂದಿರಾನಗರದ ತಂಡ ಪಡೆದುಕೊಂಡಿತು. ಹಗ್ಗಜಗ್ಗಾಟದಲ್ಲಿ ಬೆಟ್ಟಗೇರಿ ತಂಡ ಮೊದಲ ಸ್ಥಾನ ಮತ್ತು ವೆಂಕಟರಮಣ ತಂಡ ಎರಡನೇ ಸ್ಥಾನವನ್ನ ಪಡೆದುಕೊಂಡಿತು. ಮಹಿಳಾ ಹಗ್ಗ ಜಗ್ಗಾಟದಲ್ಲಿ ಚೆರಿಯಾಪರಂಬು ತಂಡ ಮೊದಲ ಸ್ಥಾನ ಪಡೆದುಕೊಂಡರೆ, ವೆಂಕಟರಮಣ ತಂಡ ಎರಡನೇ ಸ್ಥಾನವನ್ನ ಪಡೆದುಕೊಂಡಿತು. ಕ್ರೀಡಾಕೂಟದಲ್ಲಿ ಪುರುಷರು, ಮಹಿಳೆಯರು ಹಾಗೂ ಯುವಕ ಯುವತಿಯರು ಮತ್ತು ಪುಟಾಣಿಗಳಿಗೆ ವಿವಿಧ ಸ್ಪರ್ಧೆಗಳು ನಡೆಯಿತು. ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿ ಶುಭ ಹಾರೈಸಿದರು. ಈ ಸಂದರ್ಭ ಗಣಪತಿ ಸೇವಾ ಸಮಿತಿ ಹಾಗೂ ಶ್ರೀ ವೆಂಕಟೇಶ್ವರ ದೇವಾಲಯದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡಾಕೂಟಕ್ಕೆ ಪ್ರೋತ್ಸಾಹಿಸಿದರು.
ವರದಿ : ದುಗ್ಗಳ ಸದಾನಂದ.










