
ನಾಪೋಕ್ಲು ಸೆ.10 NEWS DESK : ಬಕ್ಕದ ಕೈಲ್‍ಮುಹೂರ್ತ (ಕೈಲ್‍ಪೊಳ್ದ್) ಕ್ರೀಡಾ ಮಂಡಳಿ ವತಿಯಿಂದ ಪ್ರತಿ ವರ್ಷ ನಡೆಸಿಕೊಂಡು ಬರುತ್ತಿರುವ ಕೈಲ್‍ಮುಹೂರ್ತ (ಕೈಲ್‍ಪೊಳ್ದ್) ಕ್ರೀಡಾಕೂಟವನ್ನು ಸೆ.29 ರಂದು ಬಕ್ಕದಲ್ಲಿ ನಡೆಸಲು ತಿರ್ಮಾನಿಸಲಾಗಿದೆ. ಕ್ರೀಡಾಮಂಡಳಿ ವತಿಯಿಂದ ಕ್ರೀಡಾ ಮಂಡಳಿಯ ಅಧ್ಯಕ್ಷರಾದ ಬೈತಡ್ಕ ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ಬಕ್ಕದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು. ಅಂದು ಬೆಳಿಗ್ಗೆ 10 ಗಂಟೆಗೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಲಾಗುವುದು. ಕ್ರೀಡಾಕೂಟದಲ್ಲಿ ಕಿರಿಯರಿಂದ ವಯಸ್ಕರ ವರೆಗೆ ವಿವಿಧ ಆಟೋಟ ಸ್ಪರ್ಧೆಗಳು, ಸಾಧಕರಿಗೆ ಸನ್ಮಾನ, ಸಮಾರೋಪ ಸಮಾರಂಭ , ಬಹುಮಾನ ವಿತರಣೆ ನಡೆಸುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಯಿತು. ಸಭೆಯಲ್ಲಿ ಹಿರಿಯರಾದ ಹೊಸೊಕ್ಲು ಮೊಣ್ಣಪ್ಪ, ನೈಯ್ಯಣಿ ಹೇಮಕುಮಾರ್, ಹೊಸೊಕ್ಲು ಕಿಶೋರ್, ಯಶೋದ, ಪುದಿಯನೆರವನ ವೆಂಕಟೇಶ್, ಸದ, ಅರುಣ, ನೈಯ್ಯಣಿ ಶಾರದಾ ,ಶಾಂತಿ, ಉಮೇಶ್ ನೆಯ್ಯಣಿ, ಸೂದನ ಸುಜಿ , ಕುಂಜಿಲನ ಲೋಕನಾಥ್, ಬಾಡನ ಸತೀಶ್, ಕಡ್ಲೇರ ತುಳಸಿ ಮೋಹನ್ , ಸ್ಥಳೀಯ ಸ್ವಸಹಾಯ ಸಂಘಗಳು ಸ್ತ್ರೀ ಶಕ್ತಿ ಸಂಘ, ಗಜಾನನ ಯುವಕ ಮಂಡಳಿಯ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಪ್ರಮುಖರು ಹಾಜರಿದ್ದರು. ಕ್ರೀಡಾ ಮಂಡಳಿಯ ಕಾರ್ಯದರ್ಶಿ ಪುದಿಯನೆರವನ ವೀಣಾ ಸ್ವಾಗತಿಸಿ ವಂದಿಸಿದರು.
ವರದಿ : ದುಗ್ಗಳ ಸದಾನಂದ.










