ಸುಂಟಿಕೊಪ್ಪ,ಸೆ.23 NEWS DESK : ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸುಂಟಿಕೊಪ್ಪ ಸಂತ ಮೇರಿ ಆಂಗ್ಲ ಮಾಧ್ಯಮ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ತೋರುವುದರೊಂದಿಗೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಕೋಲಾರದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 15 ವರ್ಷದ ವಿಭಾಗದ ಟಾಟಾ ಸ್ಪರ್ಧೆಯಲ್ಲಿ ವಿಕೆ ಹರಿಪ್ರಿಯಾ ಪ್ರಥಮ, 14 ವರ್ಷದ ವಿಭಾಗದಲ್ಲಿ ಎಂ.ಎಸ್.ದಿಗಂತ್ ಕುಳಿತೆ ಹಾಗೂ ಕಾಟಾ ವಿಭಾಗದಲ್ಲಿ ಪ್ರಥಮ, 13 ವರ್ಷದ ವಿಭಾಗದಲ್ಲಿ ಆರ್.ಜೀವಿಕ ಕುಮಿತೆ ಹಾಗೂ ಕಾಟಾ ಪ್ರಥಮ, 12 ವರ್ಷ ವಿಭಾಗ ದಲ್ಲಿ ವಿ.ಕೆ.ಚೈತನ್ಯ ಕುಳಿತೆ ಪ್ರಥಮ ಹಾಗೂ ಕಾಟಾ ವಿಭಾಗದಲ್ಲಿ ದ್ವಿತೀಯ, 12 ವರ್ಷ ವಿಭಾಗದಲ್ಲಿ ದಿವಿನ್ ಕಮಿತೆ ಹಾಗೂ ಕಾಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಸೀನಿಯರ್ ವಿಭಾಗದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿಗಳಾದ ಕೆ.ಎಸ್.ಅಕ್ಷಯ್ ಹಾಗೂ ಎ.ಅಂಕಿತ್ ಕುಮಿತೆ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಇವರು ಕರಾಟೆ ತರಬೇತುದಾರರಾದ ರೇನ್ಸಿ ಮುಖೇಶ್ ಅವರ ಶಿಷ್ಯರಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಸಂತ ಮೇರಿ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ ವ್ಯವಸ್ಥಾಪಕರಾದ ರೇ.ಫಾ.ವಿಜಯಕುಮಾರ್ ಹಾಗೂ ಶಾಲೆಯ ಪ್ರಾಂಶುಪಾಲರಾದ ಸೆಲ್ವರಾಜ್ ಪ್ರಶಂಸಿದ್ದಾರೆ.