ಮಡಿಕೇರಿ ಅ.29 NEWS DESK : ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಇದೇ ಮೊದಲ ಬಾರಿಗೆ ಜಿಲ್ಲಾ ಮಟ್ಟದ ಪತ್ರಕರ್ತರ ಕಾಲ್ಚೆಂಡು ಪಂದ್ಯವಾಳಿಯು ನ.3 ರಂದು ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಕ್ರೀಡಾಕೂಟದ ಸಂಚಾಲಕ ಪ್ರೆಸ್ ಕ್ಲಬ್ ನಿರ್ದೇಶಕ ಇಸ್ಮಾಯಿಲ್ ಕಂಡಕರೆ ಹಾಗೂ ಕೆ.ಎಂ.ವಿನೋದ್ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊಡಗು ಪ್ರೆಸ್ ಕ್ಲಬ್ ಫುಟ್ಬಾಲ್ ಪಂದ್ಯಾವಳಿಯು ಲೀಗ್ ಮಾದರಿಯಲ್ಲಿ ನಡೆಯಲಿದ್ದು, ಸೂಪರ್ ಸೆವೆನ್ಸ್ ಮಾದರಿಯ ಫುಟ್ಬಾಲ್ ಪಂದ್ಯಾವಳಿಯಲ್ಲಿ ನಾಲ್ಕು ತಂಡಗಳ ಭಾಗವಹಿಸಲಿದೆ. ಗೋಪಾಲ್ ಸೋಮಯ್ಯ ನಾಯಕತ್ವದ ಮೀಡಿಯಾ ಯುನೈಟೆಡ್ ತಂಡದಲ್ಲಿ, ರೆಜಿತ್ ಕುಮಾರ್ ಗುಹ್ಯ, ವಿ.ವಿಅರುಣ್ ಕುಮಾರ್, ಕುಡೆಕಲ್ ಸಂತೋಷ್, ಶಶಿಕುಮಾರ್ ರೈ, ಅಬ್ದುಲ್ಲಾ, ಎಚ್.ಸಿ ಜಯಪ್ರಕಾಶ್, ಕೆ.ಬಿ.ಶಂಶುದ್ದೀನ್, ವಿಶ್ವ ಕುಂಬೂರು, ದುರ್ಗ ಪ್ರಸಾದ್, ಚಂದನ್ ನಂದರಬೆಟ್ಟು ಮತ್ತು ರವಿಕುಮಾರ್ ಸ್ಥಾನ ಪಡೆದಿದ್ದಾರೆ. ಸುರ್ಜಿತ್ ನಾಯಕತ್ವದ ರಾಕ್ ಸ್ಟಾರ್ ತಂಡದಲ್ಲಿ ಸುಬ್ರಮಣಿ ಸಿದ್ದಾಪುರ, ಮಂಜು ಸುವರ್ಣ,ಮುಸ್ತಫಾ ಸಿದ್ದಾಪುರ, ಮನು, ರಿಜ್ವಾನ್ ಹುಸೇನ್, ಲೋಕೇಶ್ ಕಾಟಕೇರಿ, ಕಿಶೋರ್ ನಾಚಪ್ಪ, ಅಂತೋಣಿ, ಚಿತನ್, ಮಹಮ್ಮದ್ ಮುಸ್ತಫಾ, ಸ್ಥಾನ ಪಡೆದಿದ್ದಾರೆ. ವಿಜಯ್ ರಾಯ್ ನಾಯಕತ್ವದ ಟೀಮ್ ಫೀನಿಕ್ಸ್ ಹಂಟರ್ ತಂಡದಲ್ಲಿ ನವೀನ್ ಡಿಸೋಜಾ,ಶಿವರಾಜ್, ಪ್ರೇಮ್ ಕುಮಾರ್, ಪುತ್ತಂ ಪ್ರದೀಪ್, ಗಣೇಶ್ ಕುಡೆಕಲ್, ಸಂತೋಷ್ ರೈ, ದಿವಾಕರ್, ಕಿಶೋರ್ ಕುಮಾರ್ ಶೆಟ್ಟಿ, ಕಿರಣ್ ರಾಜ್ ಹಾಗೂ ಹನೀಫ್ ಕೊಡ್ಲಿಪೇಟೆ ಆಡಲಿದ್ದಾರೆ. ಇಸ್ಮಾಯಿಲ್ ಕಂಡಕರೆ ನಾಯಕತ್ವದ ಮಾಸ್ಟರ್ ಎಫ್.ಸಿ ತಂಡದಲ್ಲಿ, ಎಂ.ಕೆ ಆದರ್ಶ್, ವಿನೋದ್ ಕೆ.ಎಂ, ಅಜ್ಜಮಾಡ ರಮೇಶ್ ಕುಟ್ಟಪ್ಪ, ಸವಿತಾ ರೈ,ಬೊಳ್ಳಜಿರ ಬಿ.ಅಯ್ಯಪ್ಪ, ಶಿವು ಕಾಂತರಾಜ್, ಸವಾದ್ ಉಸ್ಮಾನ್,ಟಿ.ಆರ್ ಪ್ರಭುದೇವ್, ಉದಿಯಂಡ ಜಯಂತಿ, ಹಾಗೂ ಎನ್.ಎನ್ ದಿನೇಶ್ ಸ್ಥಾನ ಪಡೆದಿದ್ದಾರೆ.
ಬಹುಮಾನಗಳ ವಿವರ: : ಕೊಡಗು ಪ್ರೆಸ್ ಕ್ಲಬ್ ಫುಟ್ಬಾಲ್ ಪಂದ್ಯಾವಳಿಯ ಚಾಂಪಿಯನ್ ತಂಡಕ್ಕೆ ಕೆನೇಡಿಯನ್ ಮಾದರಿಯ ಆಕರ್ಷಕ ಟ್ರೋಫಿ ನೀಡಲಾಗುತ್ತದೆ. ಅದಲ್ಲದೇ ಚಾಂಪಿಯನ್ ತಂಡದ ನಾಯಕನಿಗೆ ವೈಯಕ್ತಿಕವಾಗಿ 1500 ರೂ ನಗದು ಬಹುಮಾನ ಮತ್ತು ಎಲ್ಲಾ ಆಟಗಾರರಿಗೆ ತಲಾ ಸಾವಿರ ರೂ ನೀಡಲಾಗುವುದು. ರನ್ನರ್ಸ್ ಪ್ರಶಸ್ತಿ ವಿಜೇತ ತಂಡಕ್ಕೆ ಕೆನೇಡಿಯನ್ ಮಾದರಿಯ ಆಕರ್ಷಕ ಟ್ರೋಫಿಯೊಂದಿಗೆ ತಂಡಕ ನಾಯಕನಿಗೆ ವೈಯಕ್ತಿಕವಾಗಿ 1000 ರೂ ಹಾಗೂ ತಂಡದ ಎಲ್ಲಾ ಆಟಗಾರರಿಗೆ ತಲಾ 500 ರೂ ಬಹುಮಾನ ನೀಡಲಾಗುವುದು. ತೃತೀಯ ಮತ್ತು ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೂ ಕೂಡ ಟ್ರೋಫಿ ನೀಡಲಾಗುತ್ತದೆ.ಅದಲ್ಲದೇ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲಾ ಆಟಗಾರರಿಗೆ ಟ್ರೋಫಿ ನೀಡಿ ಗೌರವಿಸಲಾಗುವುದು. ಬೆಸ್ಟ್ ಪ್ಲೇಯರ್ ಆಫ್ ದಿ-ಟೂರ್ನಮೆಂಟ್, ಟಾಪ್ ಸ್ಕೋರರ್, ಬೆಸ್ಟ್ ಗೋಲ್ ಕೀಪರ್, ಬೆಸ್ಟ್ ಡಿಫೆಂಡರ್,ಬೆಸ್ಟ್ ಮಹಿಳಾ ಆಟಗಾರ್ತಿ,ಬೆಸ್ಟ್ ಎಮರ್ಜಿಂಗ್ ಪ್ಲೇಯರ್,ಫೈನಲ್ ಹಿರೋ ಆಫ್-ದಿಮ್ಯಾಚ್ ಹಾಗೂ ಲೀಗ್ ಮಾದರಿಯ ಎಲ್ಲಾ ಪಂದ್ಯದಲ್ಲಿ ಹಿರೋ-ಆಫ್ ದಿ ಮ್ಯಾಚ್ ಪ್ರಶಸ್ತಿ ನೀಡಲಾಗುತ್ತದೆ ಎಂದು ಕೊಡಗು ಪ್ರೆಸ್ ಕ್ಲಬ್ ಫುಟ್ಬಾಲ್ ಪಂದ್ಯಾವಳಿಯ ಸಂಚಾಲಕರಾದ ಇಸ್ಮಾಯಿಲ್ ಕಂಡಕರೆ ಹಾಗೂ ವಿನೋದ್ ಕೆ.ಎಂ ಮಾಹಿತಿ ನೀಡಿದ್ದಾರೆ.