ಮಡಿಕೇರಿ ನ.3 NEWS DESK : ಅಮೇರಿಕಾದಲ್ಲಿ ನೆಲಸಿರುವ ಪ್ರಭಾವತಿ ಫರ್ನಾಂಡಿಸ್ ಅವರು ಮಡಿಕೇರಿಯ ಕೊಡಗು ವಿದ್ಯಾಲಯಕ್ಕೆ 16.ಲಕ್ಷ ಅನುದಾನದಲ್ಲಿ ಚಿಣ್ಣರಿಗಾಗಿ ಕೊಡುಗೆಯಾಗಿ ನೀಡಿದ ಒಳಾಂಗಣ ಕ್ರೀಡಾವನವನ್ನು ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ನಿದೇ೯ಶಕ ಅನಿಲ್ ಹೆಚ್.ಟಿ ಉದ್ಘಾಟಿಸಿದರು. ನಗರದ ಕೊಡಗು ವಿದ್ಯಾಲಯಕ್ಕೆ ಪ್ರಭಾವತಿ ಫರ್ನಾಂಡಿಸ್, 16 ಲಕ್ಷ ರುಪಾಯಿಗಳನ್ನು ಕೊಡುಗೆಯಾಗಿ ನೀಡಿದ್ದು ಇದನ್ನು ಚಿಣ್ಣರ ಒಳಾಂಗಣ ಕ್ರೀಡಾವನಕ್ಕೆ ಬಳಸಿಕೊಂಡು ವೈವಿಧ್ಯಮಯ ಒಳಾಂಗಣ ಕ್ರೀಡಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ಕೊಡಗು ವಿದ್ಯಾಲಯದ ನಿದೇ೯ಶಕ ಸಿ.ಎಸ್.ಗುರುದತ್ ಮಾಹಿತಿ ನೀಡಿದರು. ಕ್ರೀಡಾವನ ಉದ್ಘಾಟಿಸಿದ ರೋಟರಿ ಮಿಸ್ಟಿ ಹಿಲ್ಸ್ ನಿದೇ೯ಶಕ ಅನಿಲ್ ಹೆಚ್ ಟಿ, ಒಂದು ಸಂಸ್ಥೆ ಉತ್ತಮವಾಗಿ ಕಾಯ೯ ನಿವ೯ಹಿಸುತ್ತಿದ್ದಾಗ ಮಾತ್ರ ಅಂಥ ಸಂಸ್ಥೆಗೆ ದಾನಿಗಳು ಕೂಡ ಆಥಿ೯ಕ ನೆರವಿನ ಮೂಲಕ ಮತ್ತಷ್ಟು ಸೌಲಭ್ಯಗಳಿಗೆ ಕಾರಣರಾಗುತ್ತಾರೆ. ನಾಲ್ಕೂವರೆ ದಶಕಗಳ ಅಥ೯ಪೂಣ೯ ಸೈಕ್ಷಣಿಕ ಸಾಧನೆ ಹೊಂದಿರುವ ಕೊಡಗು ವಿದ್ಯಾಲಯ ಇಂಥ ಅನೇಕ ದಾನಿಗಳ ಮೂಲಕ ಸಾಕಷ್ಟು ಉನ್ನತ ಸೌಲಭ್ಯಗಳನ್ನು ತನ್ನ ವಿದ್ಯಾಥಿ೯ಗಳಿಗೆ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮನೆಯಲ್ಲಿರುವ ಪೋಷಕರು, ಹಿರಿಯರು, ಒಡಹುಟ್ಟಿದವರೂ ಸೇರಿದಂತೆ ಕುಟುಂಬ ಸದಸ್ಯರೊಂದಿಗೆ ಚಿಣ್ಣರು ಹೆಚ್ಚಿನ ಸಮಯ ಕಳೆಯಬೇಕು, ಹಿಂದಿನ ಕಾಲದಲ್ಲಿ ಹಿರಿಯರು ಹೇಳುತ್ತಿದ್ದ ನೀತಿಕಥೆಗಳೇ ಮಕ್ಕಳ ಪಾಲಿಗೆ ವೇದವಾಕ್ಯದಂತಿತ್ತು, ಆದರೆ ಮೊಬೈಲ್ ಗುಂಗಿನಲ್ಲಿ ಮುಳುಗಿರುವ ಇಂದಿನ ಪುಟಾಣಿಗಳಿಗೆ ಮೊಬೈಲ್ ಎಂಬುದೇ ಪ್ರಪಂಚದಂತಾಗಿದೆ, ಇಂತಾದರೆ ಯಾರ ನಿಯಂತ್ರಣಕ್ಕೂ ಸಿಕ್ಕದ ಮಕ್ಕಳು ಸಂಸ್ಕಾರ ಮರೆತು ತಂತ್ರಜ್ಞಾನ ಲೋಕದಲ್ಲಿ ವಿಹರಿಸುತ್ತಾ ಸಮಾಜದಲ್ಲಿ ಹಾದಿ ತಪ್ಪುವ ಅಪಾಯ ಇದೆ ಎಂದೂ ಅನಿಲ್ ಎಚ್ಚರಿಸಿದರು. ಕಾಯ೯ಕ್ರಮದಲ್ಲಿ ಕೊಡಗು ವಿದ್ಯಾಲಯದ ಆಡಳಿತ ಮಂಡಳಿ, ಸಲಹೆಗಾರ ಕೊಕ್ಕಲೇರ ಕುಮಾರ್ ಸುಬ್ಬಯ್ಯ, ಜಿಲ್ಲಾ ಹೊಟೇಲ್ ರೆಸಾಟ್೯ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳಂಡ ದಿನೇಶ್ ಕಾಯ೯ಪ್ಪ, ಪ್ರಾಂಶುಪಾಲರಾದ ಕೆ.ಎಸ್.ಸುಮಿತ್ರಾ, ಆಡಳಿತಾಧಿಕಾರಿ ಪಿ.ರವಿ, ಎ.ನೀಲಮ್ಮ ಕಾಯ೯ಪ್ಪ, ಪುಣ್ಯ ಗುರುದತ್ ಹಾಜರಿದ್ದರು.