ಮಡಿಕೇರಿ ನ.4 NEWS DESK : ಕನ್ನಡ ಕೇವಲ ಭಾಷೆಯಾಗಿರದೇ ಪ್ರತೀಯೋವ೯ ಕನ್ನಡಿಗನ ಉಸಿರು ಮತ್ತು ಬದುಕಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಜಿಲ್ಲಾ ಜಾನಪದ ಪರಿಷತ್ ಖಜಾಂಚಿ ಎಸ್.ಎಸ್.ಸಂಪತ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ನಗರದ ಓಂಕರ ಸದನದಲ್ಲಿ ಆಯೋಜಿತ ಸಮಥ೯ ಕನ್ನಡಿಗರು ಸಂಸ್ಥೆಯ ನಿಮ್ಮ ಪ್ರತಿಭೆ – ನಮ್ಮ ವೇದಿಕೆಯ ಸಾಂಸ್ಕೃತಿಕ ಸ್ಪಧೆ೯ಗಳನ್ನು ಉದ್ಘಾಟಿಸಿ ಮಾತನಾಡಿದ ಸಂಪತ್ ಕುಮಾರ್, ಅಲ್ಲಲ್ಲಿ ಚದುರಿ ಹೋಗಿದ್ದ ಕನ್ನಡ ಭಾಷಿಕರನ್ನು ಒಗ್ಗೂಡಿಸಿ 68 ವಷ೯ಗಳ ಮೊದಲು ಕನಾ೯ಟಕ ರಾಜ್ಯವನ್ನಾಗಿ ರೂಪಿಸಿದ ಪರಿಣಾಮವೇ ಕನ್ನಡಿಗರು ಒಟ್ಟಾಗಿ ಕನ್ನಡದ ಕಂಪನ್ನು ಪಸರಿಸಲು ಸಾಧ್ಯವಾಗಿದೆ ಎಂದರು. ಕನ್ನಡ ಎಂದರೆ ಪ್ರೀತಿ, ಸ್ನೇಹ, ಸಹನಾ ಗುಣದ ಪ್ರತೀಕವಾಗಿದ್ದು, ಕನ್ನಡ ಮಾತನಾಡುವುದೇ ಪದ ಕಟ್ಟಿದಂತೆ ಎಂದು ಹೇಳಿದ ಸಂಪತ್ ಕುಮಾರ್, ಕನ್ನಡಪರ ಕಾಯ೯ಕ್ರಮಗಳು ನವಂಬರ್ ಗೆ ಮಾತ್ರ ಸೀಮಿತವಾಗದೇ ವಷ೯ಪೂತಿ೯ ಬೇರೆ ಬೇರೆ ಸಂಸ್ಥೆಗಳಿಂದ ಆಯೋಜಿತವಾಗಬೇಕು, ಪ್ರತೀ ದಿನವೂ ಎಲ್ಲೆಡೆ ಕನ್ನಡದ ಹಬ್ಬದ ಸಂಭ್ರಮ ಕಾಣುವಂತಾಗಬೇಕು ಎಂದು ಆಶಿಸಿದರು. ಕನ್ನಡ ಭಾಷೆ, ಸಂಸ್ಕೃತಿಯ ಸಂರಕ್ಷಣೆಯ ಧ್ಯೇಯ ಹೊಂದಿ ಸ್ಥಾಪಿತವಾದ ಸಮಥ೯ ಕನ್ನಡಿಗರು ಸಂಘಟನೆ ಕೊಡಗಿನಲ್ಲಿ ಯಶಸ್ವಿಯಾಗಿ 7ನೇ ವಷ೯ ನಿಮ್ಮ ಪ್ರತಿಭೆ ನಮ್ಮ ವೇದಿಕೆ ಮೂಲಕ ಕಾಯ೯ಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಾಹಿತಿ ಮತ್ತು ವೈದ್ಯರಾದ ಡಾ.ಕುಶ್ವಂತ್ ಕೋಳಿಬೈಲು ಮಾತನಾಡಿ, ಸಾಂಸ್ಕೃತಿಕ ಮತ್ತು ಸಾಹಿತ್ಯ ಪರ ಕಾಯ೯ಕ್ರಮಗಳ ಮೂಲಕ ವ್ಯಕ್ತಿತ್ವ ವಿಕಸನ ಸಾಧ್ಯವಾಗುತ್ತದೆ. ಪ್ರತೀಯೋವ೯ರಲ್ಲಿಯೂ ಇರುವ ಸುಪ್ತ ಪ್ರತಿಭೆಯನ್ನು ಗುರುತಿಸಲು ಇಂಥ ಸಾಂಸ್ಕೃತಿಕ ಕಾಯ೯ಕ್ರಮಗಳ ಅಗತ್ಯ ಸಮಾಜಕ್ಕಿದೆ ಎಂದರು.ಯಾವುದೇ ಮಗುವಾದರೂ ವೇದಿಕೆ ಏರಿ ಪ್ರತಿಭಾ ಪ್ರದಶ೯ನ ಮಾಡಿದೆ ಎಂದರೆ ಆ ಮಗು ಬಹುಮಾನ ವಿಜೇತರಿಗೆ ಸಮಾನ ಎಂದು ಅಭಿಪ್ರಾಯಪಟ್ಟ ಮಕ್ಕಳ ವೈದ್ಯ ಕುಶ್ವಂತ್, ನೂರಾರು ಮಕ್ಕಳು ಈ ಕಾಯ೯ಕ್ರಮದ ಮೂಲಕ ತಮ್ಮ ಪ್ರತಿಭೆಯನ್ನು ಬಾಲ್ಯದ ಹಂತದಲ್ಲಿಯೇ ಪ್ರದಶಿ೯ಸುತ್ತಿರುವುದು ಹೆಮ್ಮೆ ಪಡುವಂಥ ವಿಚಾರ, ಮಕ್ಕಳು ಮತ್ತು ಯುವಪೀಳಿಗೆಯ ಪ್ರತಿಭಾ ಪ್ರದಶ೯ನಕ್ಕೆ ಸಮಥ೯ ಕನ್ನಡಿಗ ಸಂಸ್ಥೆ ಸೂಕ್ತ ವೇದಿಕೆ ಕಲ್ಪಿಸಿರುವುದು ಮೆಚ್ಚತಕ್ಕದ್ದು ಎಂದು ಶ್ಲಾಘಿಸಿದರು. ಸಮಥ೯ ಕನ್ನಡಿಗರು ಸಂಸ್ಥೆಯ ಜಿಲ್ಲಾ ಸಂಚಾಲಕಿ ಕೆ.ಜಯಲಕ್ಷ್ಮಿ ಮಾತನಾಡಿ, ಕಾಲೇಜುಗಳಲ್ಲಿ ಕನ್ನಡ ಭಾಷಾ ಕಲಿಕೆಯಿಂದ ವಿದ್ಯಾಥಿ೯ಗಳು ವಿಮುಖರಾಗುತ್ತಿದ್ದಾರೆ ಕನ್ನಡದ ಬದಲಿಗೆ ಐಚ್ಚಿಕ ವಿಷಯವಾಗಿ ಸಂಸ್ಕೃತ, ಇಂಗ್ಲೀಷ್ ಭಾಷೆಯ ಕಲಿಕೆಗೆ ಆದ್ಯತೆ ನೀಡುತ್ತಿದ್ದಾರೆ, ವಿದ್ಯಾಥಿ೯ಯ ಬೌಧ್ದಿಕ ಮಟ್ಟವನ್ನೂ ಮೀರಿದ ಕನ್ನಡ ಪಠ್ಯಗಳಿಂದಾಗಿಯೇ ಈ ರೀತಿಯಾಗಿದೆ, ಪೋಷಕರು, ಶಿಕ್ಷಕರು ಎಷ್ಟೇ ಮನವೊಲಿಸಿದರೂ ವಿದ್ಯಾಥಿ೯ಗಳು ಕನ್ನಡ ಕಲಿಕೆಯ ಆಯ್ಕೆಗೆ ಮುಂದಾಗದಿರುವುದು ಕಳವಳಕಾರಿಯಾಗಿದೆ ಎಂದು ಹೇಳಿದರು. ಸಮಥ೯ ಕನ್ನಡಿಗರು ಸಂಸ್ಥೆಯ ಸಂಸ್ಪಾಪಕ ಲಿಂಗೇಶ್ ಹುಣಸೂರು, ರಾಜ್ಯ ಪ್ರಧಾನ ಸಂಚಾಲಕ ಆನಂದ್ ದೆಗ್ಗನಹಳ್ಳಿ, ವೇದಿಕೆಯಲ್ಲಿದ್ದರು. ಗಿರಿಜಾಮಣಿ ನಿರೂಪಿಸಿದ ಕಾಯ೯ಕ್ರಮದಲ್ಲಿ ಸವಿತಾ ರಾಕೇಶ್ ಸ್ವಾಗತಿಸಿ, ಚಿತ್ರಾ ಆಯ೯ನ್ ವಂದಿಸಿದರು. ಭೂಮಿಕಾ ಅವರಿಂದ ಸ್ವಾಗತ ನೖತ್ಯ ಜರುಗಿತು. ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ, ಮಡಿಕೇರಿ ತಾಲ್ಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಹೆಚ್.ಟಿ, ಡಾ.ಸತೀಶ್, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ನಿಮ್ಮ ಪ್ರತಿಭೆ – ನಮ್ಮ ವೇದಿಕೆ ಕಾಯ೯ಕ್ರಮದ ಅಂಗವಾಗಿ ಛದ್ಮವೇಷ, ಸಮೂಹ ಗಾಯನ, ಸಮೂಹ ನೖತ್ಯ, ಚಿತ್ರಕಲೆ ಮತ್ತು ಪ್ರಬಂಧ ಸ್ಪದೆ೯ಗಳು ಆಯೋಜಿತು. ಸಮಥ೯ ಕನ್ನಡಿಗ ರಾಜ್ಯ ಸಂಚಾಲಕ ಆನಂದ ದೆಗ್ಗನಹಳ್ಳಿ ಅಧ್ಯಕ್ಷತೆಯಲ್ಲಿ ಅಬ್ದುಲ್ ಕೌಸರ್ ಸಮನ್ವಯದಲ್ಲಿ ಆಯೋಜಿತ ಕವಿಗೋಷ್ಟಿಯಲ್ಲಿ ಬಿ.ಜಿ.ಅನಂತಶಯನ, ಗಿರೀಶ್ ಕಿಗ್ಗಾಲು, ಡಾ.ಸತೀಶ್, ಸಂಗೀತ ರವಿರಾಜ್, ರಂಜಿತ್ ಕವಲಪಾರ, ಕೃಪಾ ದೇವರಾಜ್, ಶ್ವೇತಾರವೀಂದ್ರ, ಹೇಮಂತ್ ಪಾರೇರ, ಸಹನಾ ಕಾಂತಬೈಲು, ಹೇಮಂತ್ ಹೊಸೂರು, ಹರಿಣಿ ವಿಜಯ್, ಲೀಲಾ ತೊಡಿಕ್ಕಾನ, ವಿನೋದ್ ಮೂಡಗದ್ದೆ, ಓಂಶ್ರೀ ಧನ್ಯ ಕವನಗಳನ್ನು ವಾಚಿಸಿದರು.