ಸುಂಟಿಕೊಪ್ಪ ನ.4 NEWS DESK : ಮಕ್ಕಳು ಪರಿಸರಕ್ಕೆ ಮಾರಕವಾಗಿರುವ ಸಿಡಿಮದ್ದುಗಳನ್ನು ಬಿಟ್ಟು, ಪರಿಸರ ಸ್ನೇಹಿ ದೀಪಾವಳಿಯನ್ನು ಆಚರಿಸುವಂತೆ ಸ್ಕೌಟ್ಸ್ ಮತ್ತು ಗೈಡ್ಸ್‍ನ ಕ್ಲಸ್ಟರ್ ಅಧಿಕಾರಿ ಸೀಮಾ ಹೇಳಿದರು. ಸುಂಟಿಕೊಪ್ಪ ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಸ್ಕೌಟ್ಸ್, ಗೈಡ್ಸ್, ಬುಲ್ ಬುಲ್, ಕಬ್ಸ್, ಸೇವಾದಳಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ದೀಪಾವಳಿ ಹಬ್ಬದಲ್ಲಿ ಸಿಡಿಮದ್ದುಗಳನ್ನು ಸಿಡಿಸದೆ ಮಣ್ಣಿನ ಹಣತೆಗಳನ್ನು ಹಚ್ಚುವ ಮೂಲಕ ದೀಪಾವಳಿಯನ್ನು ಆಚರಿಸುವುದರಿಂದ ಪರಿಸರದಲ್ಲಿರುವ ಅಜೀವ ಸಂಕುಲಗಳ ರಕ್ಷಣೆಗೊಳ್ಳಲಿದೆ. ಪರಿಸರ ಕಲುಷಿತಗೊಳ್ಳುವುದನ್ನು ನಾವು ತಡೆಯಬಹುದಾಗಿದೆ. ಅದರಿಂದ ಮಕ್ಕಳು ಪಟಾಕಿ ಸಿಡಿಮದ್ದುಗಳನ್ನು ತ್ಯಜಿಸುವ ಮೂಲಕ ಪರಿಸರ ಸಂರಕ್ಷಿತ ದೀಪಾವಳಿಯನ್ನು ಆಚರಿಸುವಂತೆ ಸೀಮಾ ಕಿವಿಮಾತು ಹೇಳಿದರು. ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯನಿ ಜೋವಿಟಾ ವಾಸ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಕೌಟ್ಸ್, ಗೈಡ್, ಬುಲ್ ಬುಲ್, ಕಬ್ ಸೇವಾದಳಗಳ ಶಿಕ್ಷಕರುಗಳಾದ ಪ್ರೀತಿ ಜೋಯ್ಸ್ ಪಿಂಠೋ, ಈವಾ ಜೀತಾ ಬೆನ್ನಿಸ್, ಮಹೇಶ್ ವಿದ್ಯಾರ್ಥಿಗಳೊಂದಿಗೆ ಸೇರಿ ಬಣ್ಣ ಬಣ್ಣದ ರಂಗೋಲಿ ಪುಡಿಯಿಂದ ಆಕರ್ಷಕ ಚಿತ್ರಗಳನ್ನು ಬಿಡಿಸಿ, ಮಣ್ಣಿನ ಹಣತೆ ಹಚ್ಚುವ ಮೂಲಕ ಪರಿಸರ ಜಾಗೃತಿ ಮೂಡಿಸಿದರು. ಇದೇ ಸಂದರ್ಭ ಪರಿಸರ ಸಂರಕ್ಷಣೆಯ ಕುರಿತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಭೋದಿಸಿದರು.