ಮಡಿಕೇರಿ ಡಿ.6 NEWS DESK : ಸಿದ್ದಾಪುರದಲ್ಲಿ ನಡೆದ ಕೊಡಗು ಜಿಲ್ಲಾ ಎಸ್.ಕೆ.ಎಸ್.ಎಸ್.ಎಫ್ ಇಸ್ಲಾಮಿಕ್ ಕಲೋತ್ಸವದ ತ್ವಲಬಾ ವಿಭಾಗದಲ್ಲಿ ನಾಲ್ಕು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಆಸಿಫ್ ಅಂಧತ್ವವನ್ನು ಮೆಟ್ಟಿ ನಿಂತು ಗೆಲುವು ಸಾಧಿಸಿದ್ದಾನೆ. ನಾಪೋಕ್ಲು ಮೂಲದ ದೃಷ್ಟಿ ಕಳೆದುಕೊಂಡಿರುವ ಆಸೀಫ್ ಉಸ್ಮಾನ್ ಮುಸ್ಲಿಯಾರ್ ನೇತೃತ್ವದ ಸುಂಟ್ಟಿಕೊಪ್ಪ ತಸ್ಕಿಯಾತು ತ್ವಲಬಾ ದರ್ಸ್ ನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದು, ಉರ್ದು ಗೀತೆ, ಅಝಾನ್, ಕನ್ನಡ ಹಾಡು, ಮುಂತಾದ ವಿಭಾಗಗಳಲ್ಲಿ ಸ್ಪರ್ಧಿಸಿ ಎಲ್ಲಾ ವಿಭಾಗಗಳಲ್ಲಿ ಬಹುಮಾನ ಪಡೆದುಕೊಂಡಿದ್ದಾನೆ. ನಾಪೋಕ್ಲುವಿನ ಹಮ್ಜಾ-ಆಯಿಷಾ ದಂಪತಿಯ ಹಿರಿಯ ಪುತ್ರನಾಗಿರುವ ಆಸಿಫ್ ಕೊಡಗು ಜಿಲ್ಲಾ ಜಮ್ಯಿಯತುಲ್ ಮುಅಲ್ಲಿಮೀನ್ ನ ಸ್ಪರ್ಧಾ ಕಾರ್ಯಕ್ರಮದ ಎಲ್ಲಾ ವಿಭಾಗಗಳಲ್ಲಿ ಆಸಿಫ್ ಭಾಗವಹಿಸುತ್ತಾನೆ ಎಂದು ಶಿಕ್ಷಕರು ಹೇಳುತ್ತಾರೆ. ಎಸ್.ಕೆ.ಎಸ್.ಎಸ್.ಎಫ್ ಜಿಲ್ಲಾ ಮಟ್ಟದ ಇಸ್ಲಾಮಿಕ್ ಕಲೋತ್ಸವದ ಸಮಾರೋಪ ಸಮಾರಂಭದಲ್ಲಿ ಆಸಿಫ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.