ಗೋಣಿಕೊಪ್ಪಲು ಡಿ.11 NEWS DESK : ಮನುಷ್ಯ ಮಾನವ ಹಕ್ಕನ್ನು ಅನುಭವಿಸುತ್ತಾನೆ ಅದು ನಮ್ಮ ಪ್ರಾಚೀನ ಧರ್ಮ ಗ್ರಂಥಗಳಿಂದಲೇ ತಿಳಿದುಬರುತ್ತದೆ. ಮಾನವ ಹಕ್ಕುಗಳ ಮೂಲ ಧರ್ಮ ಗ್ರಂಥಗಳಾಗಿವೆ ಎಂದು ವಕೀಲರಾದ ಬಿ.ಬಿ ಮಾದಪ್ಪ ಅಭಿಪ್ರಾಯಪಟ್ಟರು. ಕಾವೇರಿ ಕಾಲೇಜು ಗೋಣಿಕೊಪ್ಪಲು ಮಾನವ ಹಕ್ಕುಗಳ ಸಮಿತಿ ಮತ್ತು ಆಂತರಿಕ ಗುಣಮಟ್ಟದ ಭರವಸೆ ಕೋಶ ಸಹಯೋಗದಲ್ಲಿ ನಡೆದ ಮಾನವ ಹಕ್ಕುಗಳ ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾನವ ನಿಸರ್ಗದತ್ತವಾಗಿ ಹಕ್ಕುಗಳನ್ನು ಹೊಂದಿರುತ್ತಾನೆ. ಮಾನವ ಹಕ್ಕುಗಳು ನಮ್ಮ ನಮ್ಮಲೇ ಇರುತ್ತವೆ. ಮಾನವ ಹಕ್ಕುಗಳ ಇತಿಹಾಸದ ಬಗ್ಗೆ ಪ್ರಾಚೀನ ಗ್ರಂಥಗಳೇ ತಿಳಿಸಿವೆ. ಪ್ರಾಚೀನ ಕಾಲದಲ್ಲಿ ,ಮಧ್ಯಯುಗದಲ್ಲಿ,21ನೇ ಶತಮಾನದಲ್ಲಿ ಮಾನವ ಹಕ್ಕುಗಳ ಬೆಳವಣಿಗೆ ಹೇಗೆ ಅಯಿತು ಎಂಬುದನ್ನು ತಿಳಿಸುವ ಜೊತೆಗೆ ಎಲ್ಲಾ ಧರ್ಮಗಳಲು ರಾಮಾಯಣ, ಮಹಾಭಾರತ, ಬೈಬಲ್, ಕೂರನ್ ನಂತಹ ಗ್ರಂಥಗಳಲ್ಲಿ ಮಾನವ ಹಕ್ಕಿನ ಕುರುಹುಗಳು ಕಂಡುಬರುತ್ತವೆ.ಹಕ್ಕುಗಳ ಜೊತೆಗೆ ಕರ್ತವ್ಯಕ್ಕೆ ಆದ್ಯತೆ ನೀಡಬೇಕು ಎಂದರು. ಭಾರತದ ಪ್ರಾಚೀನ ಗ್ರಂಥಗಳು ಧರ್ಮ ಮತ್ತು ಅಧರ್ಮಗಳ ಮೂಲಕ ಹಕ್ಕು ಮತ್ತು ಕರ್ತವ್ಯದ ಬಗ್ಗೆ ತಿಳಿಸಲಾಗುತ್ತಿತ್ತು. ಮಾನವ ತನ್ನ ಕರ್ತವ್ಯ ಪೂರೈಸಿದರೆ ತನ್ನ ಹಕ್ಕುಗಳನ್ನು ಪಡೆದಂತೆಯೇ ನಾವು ಮಾಡವ ಕೆಲಸಕ್ಕೆ ನಾವು ಯೋಗ್ಯರಾಗಿರಬೇಕು, ನಮ್ಮ ಕರ್ತವ್ಯ ಪ್ರಜ್ಞೆ ನಮಗೆ ಇದ್ದರೆ ತಪ್ಪು ಮಾಡಲು ಸಾಧ್ಯವಾಗುವುದಿಲ್ಲ. ಆಗ ಎಲ್ಲರೂ ತಮ್ಮ ತಮ್ಮ ಹಕ್ಕುಗಳನ್ನು ಅನುಭವಿಸಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮ ಅಧ್ಯಕ್ಷತೆವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ.ಬಿ.ಕಾವೇರಿಯಪ್ಪ ಮಾತನಾಡಿ, ಮಾನವ ಹಕ್ಕುಗಳು ಸ್ವಾತಂತ್ರ್ಯ ಸಮಾನತೆ, ನ್ಯಾಯವನ್ನು ಒದಗಿಸಲು ಸಹಕಾರಿ ಅದ್ದರಿಂದ ನಮ್ಮ ಹಕ್ಕುಗಳನ್ನು ಒಳೆಯ ರೀತಿಯಲ್ಲಿ ಬಳಸಿಕೊಂಡು ತಮ್ಮ ಸ್ವಾತಂತ್ರ್ಯ ಸಮಾನತೆಯನ್ನು ಅನುಭವಿಸಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಐ.ಕ್ಯೂ.ಎ.ಸಿ ಸಂಚಾಲಕರಾದ ಡಾ.ನಯನ ತಮ್ಮಯ್ಯ, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ರೇಷ್ಮ, ಮಾನವ ಹಕ್ಕುಗಳ ಸಂಚಾಲಕರಾದ ಕಾವ್ಯ. ಸಿ.ಟಿ. ಸದಸ್ಯರಾದ ದಿವ್ಯ.ಎಚ್.ವಿ ಮುಂತಾದವರು ಉಪಸ್ಥಿತರಿದ್ದರು.