ಕುಶಾಲನಗರ NEWS DESK ಡಿ.12 : ಕಾಂಗರೂ ಕೇರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ, ಫರ್ಟಿಲಿಟಿ ಸೆಂಟರ್ ವತಿಯಿಂದ ಕುಶಾಲನಗರದಲ್ಲಿ ಔಟ್ರೀಚ್ ಕ್ಲಿನಿಕ್ ಸ್ಥಾಪಿಸುವ ಮೂಲಕ ಶೀಘ್ರದಲ್ಲೇ ಸೇವೆ ಒದಗಿಸಲಾಗುವುದು ಎಂದು ಕಾಂಗರೂ ಕೇರ್ ಗ್ರೂಪ್ ಆಫ್ ಹಾಸ್ಪಿಟಲ್ಸ್ ನ ಫೌಂಡರ್ ಹಾಗೂ ಸಿಇಒ ಕೂಡ ಆದ ಮಕ್ಕಳ ತಜ್ಞ ಡಾ.ಶೇಖರ್ ಸುಬ್ಬಯ್ಯ ತಿಳಿಸಿದರು. ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಮತ್ತು ಮಕ್ಕಳ ಚಿಕಿತ್ಸೆಗಾಗಿ ಸ್ಥಾಪಿಸಿರುವ ಆಸ್ಪತ್ರೆ ಬೆಂಗಳೂರು, ರಾಮನಗರ ಹಾಗೂ ಮೈಸೂರಿನಲ್ಲಿ ಶಾಖೆಗಳು ಕಾರ್ಯನಿರ್ವಹಿಸುತ್ತಿವೆ. ಮೈಸೂರು ಸುತ್ತಮುತ್ತಲ ವ್ಯಾಪ್ತಿಯಲ್ಲಿ ಸೇವೆಯನ್ನು ವಿಸ್ತರಿಸುವ ನಿಟ್ಟಿನಲ್ಲಿ ಕುಶಾಲನಗರದ ಮುಖ್ಯ ರಸ್ತೆಯಲ್ಲಿರುವ ಮೆಡಿ ಪ್ಲೆಕ್ಸ್ ಡಯಗ್ನಾಸ್ಟಿಕ್ ಲ್ಯಾಬ್ ಕೇಂದ್ರದಲ್ಲಿ ಔಟ್ ರೀಚ್ ಕ್ಲಿನಿಕ್ ಮುಂದಿನ ವಾರದಿಂದ ಕಾರ್ಯಾರಂಭ ಮಾಡಲಿದೆ. ಕೊಡಗು ಜಿಲ್ಲೆಯ ವಿವಿಧೆಡೆಗಳಿಂದ ಹಾಗೂ ಗಡಿಭಾಗದಿಂದ ಮೈಸೂರಿಗೆ ಆಗಮಿಸುವವರಿಗೆ ಕುಶಾಲನಗರದಲ್ಲಿ ಔಟ್ ರೀಚ್ ಕ್ಲಿನಿಕ್ ಸ್ಥಾಪನೆಯಿಂದ ಅತ್ಯಂತ ಅನುಕೂಲ ಒದಗಲಿದೆ. ಮೈಸೂರಿನಿಂದ ತಜ್ಞ ವೈದ್ಯರು ತಪಾಸಣೆ ನಡೆಸಿ ಅಗತ್ಯ ಸಲಹೆ ಸೂಚನೆ ನೀಡಲಿದ್ದಾರೆ. ಕೊಡಗು ಜಿಲ್ಲಾ ಮಡಿಕೇರಿ ಕೇಂದ್ರದಲ್ಲಿ ಕೂಡ ಕಾಂಗರೂ ಕೇರ್ ಆಸ್ಪತ್ರೆ ಸ್ಥಾಪಿಸುವ ಉದ್ದೇಶ ಹೊಂದಿದ್ದೇವೆ ಎಂದು ಅವರು ತಿಳಿಸಿದರು. ಆಸ್ಪತ್ರೆಯ ಸ್ತ್ರೀರೋಗ, ಫಲವತ್ತತೆ ತಜ್ಞೆ ಡಾ.ಹೆಚ್.ಕೆ.ಸ್ವಾತಿ ಮಾತನಾಡಿ, ಇಂದಿನ ಆಧುನಿಕ, ಒತ್ತಡದ ಜೀವನ ಶೈಲಿ, ಯೌವನದಲ್ಲಿನ ಕೆಲವು ದುಶ್ಚಟಗಳಿಂದ ಮಹಿಳೆಯರಲ್ಲಿ ಗರ್ಭಧಾರಣೆ ಸಮಸ್ಯೆ, ಬಂಜೆತನ ಪ್ರಕರಣ ಹೆಚ್ಚಾಗುತ್ತಿದೆ. ಮಹಿಳೆ ಹಾಗೂ ಪುರುಷರಲ್ಲಿ ಸಮಾನ ಪ್ರಮಾಣದಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳತೊಡಗಿವೆ. ಇದಕ್ಕೆ ಕಾರಣಗಳನ್ನು ಪತ್ತೆಹಚ್ಚಿ ಸ್ವಾಭಾವಿಕವಾಗಿಯೇ ಗರ್ಭಧಾರಣೆಗೆ ಅವಕಾಶಗಳನ್ನು ಪರಿಶೀಲಿಸಿ ಅಗತ್ಯ ಬಿದ್ದಲ್ಲಿ ಐವಿಎಫ್, ಐಸಿಎಸ್ ಐ, ಐ ಯು ಐ ನಂತಹ ಹೆಚ್ಚಿನ ಆಧುನಿಕ ಚಿಕಿತ್ಸೆಗಳ ಮೊರೆ ಹೋಗಲು ಸೂಚಿಸಲಾಗುತ್ತದೆ. ಕೊಡಗು ಜಿಲ್ಲೆಯಿಂದ ಈಗಾಗಲೆ ಮೈಸೂರಿಗೆ ಹಲವು ಮಂದಿ ಸಮಸ್ಯೆಗಳ ನಿವಾರಣೆಗೆ ಭೇಟಿ ನೀಡುತ್ತಿದ್ದು ಕುಶಾಲನಗರದಲ್ಲಿಯೇ ಈ ಸೇವೆ ಆರಂಭಿಸುವ ಮೂಲಕ ಅಗತ್ಯ ಕೌಂಸಲಿಂಗ್, ಪರೀಕ್ಷೆಗಳನ್ನು ನಡೆಸಲಾಗುತ್ತದೆ ಎಂದರು. ಕುಶಾಲನಗರ ಮೆಡಿ ಪ್ಲೆಕ್ಸ್ ಕೇಂದ್ರದ ವೈದ್ಯೆ ಡಾ. ದಿವ್ಯ ಕರುಂಬಯ್ಯ ಮಾತನಾಡಿ, ದೂರದ ಮೈಸೂರಿಗೆ ಕೊಡಗಿನಿಂದ ತೆರಳುವವರಿಗಾಗಿ ಕುಶಾಲನಗರದಲ್ಲಿ ಸೇವೆ ಒದಗಿಸಲಾಗುತ್ತಿದ್ದು ಅಗತ್ಯವಿರುವವರು ಇದರ ಸದುಪಯೋಗ ಪಡೆದುಕೊಳ್ಳಲು ಸೂಚಿಸಿದರು. ಇದೇ ಸಂದರ್ಭ ಕಾಂಗರೂ ಆಸ್ಪತ್ರೆಯ ಇನ್ ಕ್ಯೂಬೇಟರ್ ನ್ಯೂ ಬಾರ್ನ್ ಐಸಿಯು ಸೌಲಭ್ಯದ ಬಗ್ಗೆ ಡಾ.ಶೇಖರ್ ಸುಬ್ಬಯ್ಯ ವಿವರ ನೀಡಿದರು. ನವಜಾತ ಶಿಶುಗಳ ಚಿಕಿತ್ಸೆ, ರವಾನೆಗೆ ಸಹಕಾರಿಯಾಗುವ ಅತ್ಯಾಧುನಿಕ ಇನ್ ಕ್ಯೂಬೇಟರ್ ನ ವಿಶೇಷತೆಗಳ ಬಗ್ಗೆ ಮಾಹಿತಿ ಒದಗಿಸಿದರು.
Breaking News
- *ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಡಿವಿನ್ ಗಣಪತಿಗೆ ಚಿನ್ನದ ಪದಕ*
- *ಕಸ ವಿಲೇವಾರಿ ಘಟಕದ ಮಾಹಿತಿ ಪಡೆದ ಹೆಬ್ಬಾಲೆ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು*
- *ಕುಶಾಲನಗರದಲ್ಲಿ ಮಹಿಳಾ ಮತ್ತು ಮಕ್ಕಳ ಚಿಕಿತ್ಸೆಗಾಗಿ ಆಸ್ಪತ್ರೆ*
- *ಸಿಎನ್ಸಿಯಿಂದ ದೇವಟ್ ಪರಂಬು ಹತ್ಯಾಕಾಂಡದ 239ನೇ ವರ್ಷಾಚರಣೆ : ಹಿರಿಯರ ಸ್ಮರಣೆ*
- *ಡಿ.14 ರಂದು ಸಿಎನ್ಸಿ ಯಿಂದ ಪುತ್ತರಿ ನಮ್ಮೆ ಆಚರಣೆ*
- *ಮಡಿಕೇರಿ : ಡಿ.18 ರಂದು ನೇರ ಸಂದರ್ಶನ*
- *ಸೋಮವಾರಪೇಟೆಯಲ್ಲಿ ಕೊಡಗು ಬಂದ್ಗೆ ನೀರಸ ಪ್ರತಿಕ್ರಿಯೆ*
- *ಡಿ.29 ರಂದು ವಿಶ್ವಮಾನವ ದಿನಾಚರಣೆ : ಅಗತ್ಯ ಸಿದ್ಧತೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಸೂಚನೆ*
- *ಕೂಡಿಗೆಯಿಂದ ಕುಶಾಲನಗರದವರೆಗೆ ಅಯೋಧ್ಯೆ ಬಾಲ ರಾಮಮಂದಿರದ ಶೋಭಯಾತ್ರೆ*
- *ಹನುಮ ಜಯಂತಿ : ಡಿ.13 ರಿಂದ ತಿತಿಮತಿಯಲ್ಲಿ ವಿವಿಧ ಕಾರ್ಯಕ್ರಮ*