
ಮಡಿಕೇರಿ NEWS DESK ಡಿ.12 : ಭಾರತೀಯ ರೋಲರ್ ಸ್ಕೇಟಿಂಗ್ ಸಂಸ್ಥೆಯ ವತಿಯಿಂದ ಮೈಸೂರಿನಲ್ಲಿ ನಡೆದ 62 ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಯುರೋ ಸ್ಕೂಲ್ ಚಿಮ್ಮಿ ಹಿಲ್ಸ್ ಶಾಲೆಯ ಒಂದನೇ ತರಗತಿಯ ವಿದ್ಯಾರ್ಥಿ ಡಿವಿನ್ ಗಣಪತಿ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಮತ್ತು 600 ಮೀಟರ್ ಓಟದ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನುಗಳಿಸುವ ಮೂಲಕ ರಾಷ್ಟ್ರ ಮಟ್ಟಕ್ಕೆ ಅಯ್ಕೆಯಾಗಿದ್ದಾನೆ. ಮೂಲತಃ ಕೊಡಗಿನವರಾದ ಕೋಲೇರ ರೋಷನ್ ಹಾಗೂ ತಾಲಿ ಧರ್ಮಾವತಿ ದಂಪತಿಯ ಪುತ್ರ ಡಿವಿನ್ ಗಣಪತಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾನೆ. ಇವರಿಗೆ ಬೃಂದಾವನ ಸ್ಕೇಟಿಂಗ್ ಸಂಸ್ಥೆಯ ತರಬೇತುದಾರರಾದ ಸಿ.ಎಂ.ನಾಗೇಶ್ ಹಾಗೂ ಮಧುಚಂದ್ರು ತರಬೇತಿ ನೀಡಿದ್ದಾರೆ.








