ಕುಶಾಲನಗರ NEWS DESK ಡಿ.12 : ಕುಶಾಲನಗರ ಸಮೀಪದ ಹೆಬ್ಬಾಲೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಬನಶಂಕರಿ ಇಕೋ ಕ್ಲಬ್ ವತಿಯಿಂದ ಶಾಲಾ ವಿದ್ಯಾರ್ಥಿಗಳು ಕಣಿವೆ ಸಮೀಪದ ಭುವನಗಿರಿಯಲ್ಲಿರುವ ಕಸ ವಿಲೇವಾರಿ ಘಟಕಕ್ಕೆ ಇಂದು ಭೇಟಿ ನೀಡಿದರು. ಘಟಕದಲ್ಲಿ ನಡೆಯುವ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದರು. ಹಸಿಕಸ ಮತ್ತು ಒಣಕಸ ವಿಂಗಡಣೆ ಮಾಡಿ ಈ ಕಸಗಳಿಂದ ಮನೆ ಕಟ್ಟುವ ಇಟ್ಟಿಗೆಯ ತಯಾರಿ ಮತ್ತು ಕಾಂಪೋಸ್ಟ್ ಗೊಬ್ಬರವನ್ನು ಹೇಗೆ ತಯಾರಿ ಮಾಡುತ್ತಾರೆ ಎಂಬ ಮಾಹಿತಿಯನ್ನು ಮನದಟ್ಟು ಮಾಡಿಕೊಂಡರು. ನಂತರ ಕಣಿವೆಯ ರಾಮಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಸ್ಥಳದ ಇತಿಹಾಸವನ್ನು ತಿಳಿದುಕೊಂಡರು. ಸ್ನೇಹಿತರೊಂದಿಗೆ ಹಾಗೂ ಶಿಕ್ಷಕರೊಂದಿಗೆ ವಿಚಾರ ವಿನಿಮಯ ಮಾಡಿಕೊಂಡರು. ಈ ಸಂದರ್ಭ ಶಾಲೆಯ ಇಕೋ ಕ್ಲಬ್ ಮತ್ತು ವಿಜ್ಞಾನ ಶಿಕ್ಷಕಿ ಕೆ.ಎಸ್.ರಮ್ಯಾ ಮತ್ತು ಆಂಗ್ಲ ಭಾಷೆ ಶಿಕ್ಷಕಿ ರಂಜನ ಹಾಜರಿದ್ದರು.
Breaking News
- *ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಡಿವಿನ್ ಗಣಪತಿಗೆ ಚಿನ್ನದ ಪದಕ*
- *ಕಸ ವಿಲೇವಾರಿ ಘಟಕದ ಮಾಹಿತಿ ಪಡೆದ ಹೆಬ್ಬಾಲೆ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು*
- *ಕುಶಾಲನಗರದಲ್ಲಿ ಮಹಿಳಾ ಮತ್ತು ಮಕ್ಕಳ ಚಿಕಿತ್ಸೆಗಾಗಿ ಆಸ್ಪತ್ರೆ*
- *ಸಿಎನ್ಸಿಯಿಂದ ದೇವಟ್ ಪರಂಬು ಹತ್ಯಾಕಾಂಡದ 239ನೇ ವರ್ಷಾಚರಣೆ : ಹಿರಿಯರ ಸ್ಮರಣೆ*
- *ಡಿ.14 ರಂದು ಸಿಎನ್ಸಿ ಯಿಂದ ಪುತ್ತರಿ ನಮ್ಮೆ ಆಚರಣೆ*
- *ಮಡಿಕೇರಿ : ಡಿ.18 ರಂದು ನೇರ ಸಂದರ್ಶನ*
- *ಸೋಮವಾರಪೇಟೆಯಲ್ಲಿ ಕೊಡಗು ಬಂದ್ಗೆ ನೀರಸ ಪ್ರತಿಕ್ರಿಯೆ*
- *ಡಿ.29 ರಂದು ವಿಶ್ವಮಾನವ ದಿನಾಚರಣೆ : ಅಗತ್ಯ ಸಿದ್ಧತೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಸೂಚನೆ*
- *ಕೂಡಿಗೆಯಿಂದ ಕುಶಾಲನಗರದವರೆಗೆ ಅಯೋಧ್ಯೆ ಬಾಲ ರಾಮಮಂದಿರದ ಶೋಭಯಾತ್ರೆ*
- *ಹನುಮ ಜಯಂತಿ : ಡಿ.13 ರಿಂದ ತಿತಿಮತಿಯಲ್ಲಿ ವಿವಿಧ ಕಾರ್ಯಕ್ರಮ*