ಮಡಿಕೇರಿ ಡಿ.18 NEWS DESK : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಮೂರ್ನಾಡಿನ ಬಲಂಬೇರಿಯ ಕಾಫಿ ಕ್ಯಾಸಲ್ ಕೂರ್ಗ್ ರೆಸಾರ್ಟ್‍ನಲ್ಲಿ 15ನೇ ವರ್ಷದ ಗನ್ ಕಾರ್ನಿವಲ್- ತೋಕ್ ನಮ್ಮೆ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ಅಧ್ಯಕ್ಷತೆಯಲ್ಲಿ ಅರ್ಥಪೂರ್ಣವಾಗಿ ನಡೆಯಿತು. ಬಂದೂಕುಗಳನ್ನು ಹೂವುಗಳಿಂದ ಅಲಂಕರಿಸಿ, ವಾಹನದಲ್ಲಿರಿಸಿ ದುಡಿಕೋಟ್ ಪಾಟ್‍ನೊಂದಿಗೆ ಮೆರವಣಿಗೆ ನಡೆಸಲಾಯಿತು. ನಂತರ ಮಕ್ಕಳು, ಮಹಿಳೆಯರು ಮತ್ತು ಪುರುಷರಿಗಾಗಿ ಶೂಟಿಂಗ್ ಸ್ಪರ್ಧೆಗಳು ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಕೊಡವತಿ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆರಂಭದಲ್ಲಿ ನಂದಿನೆರವಂಡ ನಿಶಾ ಅಚ್ಚಯ್ಯ ಅವರು ಹಿರಿಯ ಸಾಹಿತಿ ಬಾಚರಣಿಯಂಡ ಅಪ್ಪಣ್ಣ ವಿರಚಿತ ತೋಕ್‍ಪಾಟ್ ಹಾಡಿದರು. ಎನ್.ಯು.ನಾಚಪ್ಪ ಅವರು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಂದೂಕು/ತೋಕ್ ಆದಿಮ ಸಂಜಾತ ಕೊಡವರ ಜನಾಂಗದ ಧಾರ್ಮಿಕ-ಜನಾಂಗೀಯ ಸಂಸ್ಕಾರವಾಗಿದೆ. ತೋಕ್ ಕೊಡವರ ಪ್ರಾಚೀನ ಹೆಮ್ಮೆಯ ಹೆಗ್ಗುರುತಾಗಿದ್ದು, ಪೂರ್ವಕಾಲದ ಸಂಪ್ರದಾಯ, ಆಚರಣೆಗಳು ಮತ್ತು ಜಾನಪದ ಕಾನೂನು ವ್ಯವಸ್ಥೆಗಳನ್ನು ಪ್ರದರ್ಶಿಸಲು ಹಾಗೂ ಸಂರಕ್ಷಿಸಲು ಸಿಎನ್‍ಸಿ ಪ್ರತಿವರ್ಷ ತೋಕ್ ನಮ್ಮೆಯನ್ನು ಸಾರ್ವಜನಿಕ ಗನ್ ಕಾರ್ನಿವಲ್ ನ್ನಾಗಿ ಆಚರಿಸಿಕೊಂಡು ಬರುತ್ತಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದರು. ಆದಿಮ ಸಂಜಾತ ಕೊಡವ ಜನಾಂಗೀಯ ಹೆಗ್ಗುರುತು ಭೂಮಿ ತಾಯಿ, ಪ್ರಕೃತಿ ಮಾತೆ, ಜಲದೇವತೆ ಪವಿತ್ರ ಕಾವೇರಿ ನದಿ, ಬುಡಕಟ್ಟು ಪ್ರಾಚೀನತೆ ಜನಾಂಗ, ದೈವಿಕ ವನಪ್ರದೇಶಗಳು, ಪೂಜನೀಯ ಮಂದ್‍ಗಳು, ಪಾರಂಪರಿಕ ಸಾಮುದಾಯಿಕ ಭೂಮಿಗಳು, ಅಲಿಖಿತ ಮೌಖಿಕ ಜಾನಪದ-ಕಾನೂನು ವ್ಯವಸ್ಥೆಗಳು ಮತ್ತು ತೋಕ್/ಬಂದೂಕು ಸಂಸ್ಕೃತಿಯೊಂದಿಗೆ ಆಳವಾಗಿ ಹೆಣೆದುಕೊಂಡಿದೆ. ಇವು ಕೊಡವ ಜನಾಂಗದ ಭೂತ, ವರ್ತಮಾನ ಮತ್ತು ಭವಿಷ್ಯದಿಂದ ಬೇರ್ಪಡಿಸಲಾಗದ ಕೊಡವ ಪರಂಪರೆಯ ಶ್ರೀಮಂತ ಭಂಡಾರಗಳಾಗಿವೆ. ನಿಶ್ಯಸ್ತ್ರೀಕರಣ ಕಾಯಿದೆ ಜಾರಿಗೆ ಬಂದಾಗಿನಿಂದ, ಆದಿಮಸಂಜಾತ ಕೊಡವ ಜನಾಂಗವು ಶಸ್ತ್ರಾಸ್ತ್ರಗಳನ್ನು ಹೊಂದಲು ಪರವಾನಗಿಗಳನ್ನು ಪಡೆಯುವುದರಿಂದ ವಿನಾಯಿತಿ ಪಡೆದಿದೆ, ಇದು ಕಾಲಾನಂತರದಲ್ಲಿ ವಿವಿಧ ಆಡಳಿತಗಾರರಿಂದ ಗುರುತಿಸಲ್ಪಟ್ಟಿದೆ. ಭಾರತ ಸ್ವಾತಂತ್ರ್ಯ ಪಡೆದ ನಂತರ, ಭಾರತೀಯ ಶಸ್ತ್ರಾಸ್ತ್ರ ಕಾಯಿದೆಯ ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿ ಈ ವಿನಾಯಿತಿ ಮುಂದುವರೆಯಿತು. ಆದಾಗ್ಯೂ, 1956 ರಲ್ಲಿ ರಾಜ್ಯ ಮರುಸಂಘಟನೆ ಕಾಯಿದೆಯಡಿಯಲ್ಲಿ ಕೊಡಗು ರಾಜ್ಯವನ್ನು ಕರ್ನಾಟಕದಲ್ಲಿ ವಿಲೀನಗೊಳಿಸಿದ ನಂತರ, ಆಡಳಿತ ವರ್ಗವು ವಿವಿಧ ದುರುದ್ದೇಶಪೂರಿತ ತಂತ್ರಗಳ ಮೂಲಕ ನಮ್ಮ ಧಾರ್ಮಿಕ ಸಂಸ್ಕಾರವಾದ ತೋಕ್/ಬಂದೂಕು ಹಕ್ಕುಗಳನ್ನು ಅಪಾಯಕ್ಕೆ ತರಲು ಪ್ರಾರಂಭಿಸಿತು.
ಹಳೇ ಮೈಸೂರಿನ ಪ್ರಬಲ ಸಮುದಾಯಗಳಿಂದ ಪ್ರಭಾವಿತವಾಗಿರುವ ಸರ್ಕಾರಿ ಅಂಗಗಳು ಕೊಡವ ಹಕ್ಕುಗಳನ್ನು ದುರ್ಬಲಗೊಳಿಸಲು ಸಂವಿಧಾನೇತರ ಶಕ್ತಿ ಕೇಂದ್ರಗಳನ್ನು ಬಳಸಿಕೊಂಡಿವೆ. ಅವರು ಕೊಡವ ಅಸ್ತಿತ್ವ ಮತ್ತು ಗುರುತನ್ನು ನಿರರ್ಥಕಗೊಳಿಸಲು ಮತ್ತು ಕಾನೂನುಬಾಹಿರಗೊಳಿಸಲು ಸಂಚು ನಡೆಸುತ್ತಿದ್ದಾರೆ ಎಂದು ಎಂದು ಆರೋಪಿಸಿದರು. ಅಪರೂಪದ, ಪುರಾತನವಾದ ಕೊಡವ ಜನಾಂಗವನ್ನು ರಕ್ಷಿಸುವ ಬದಲು, ರಾಜಕೀಯ ಪ್ರಭಾವ ಮತ್ತು ಜನಸಂಖ್ಯಾ ಪ್ರಾಬಲ್ಯವನ್ನು ಬಳಸಿಕೊಂಡು ನಮ್ಮನ್ನು ಬೆದರಿಸುತ್ತಾರೆ. ಕೊಡವ ಜನಾಂಗದ ಧಾರ್ಮಿಕ-ಸಾಂಸ್ಕೃತಿಕ ಲಾಂಛನ ಹಾಗೂ ಜನಪದ ಸಂಕೇತವಾಗಿರುವ ಬಂದೂಕನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸಬೇಕು ಹಾಗೂ ಈ ತೋಕ್ ಸಂಸ್ಕೃತಿ ಶಾಶ್ವತವಾಗಿ ಸ್ಥಿರೀಕರಣಗೊಳ್ಳಲು ಹಾಗೂ ಇದರ ಸ್ಥಿತಿಸ್ಥಾಪಕತ್ವನ್ನು ಕಾಯ್ದುಗೊಳ್ಳಲು ರಾಜ್ಯಾಂಗ ಖಾತ್ರಿ ಅತ್ಯವಶ್ಯವಾಗಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದರು. ವಿಶ್ವದಲ್ಲೇ ಈ ವೈಶಿಷ್ಟ್ಯ ಪೂರ್ಣ ಕೊಡವ ಗನ್ ಕಾರ್ನಿವಲ್-ತೋಕ್ ನಮ್ಮೆಯನ್ನು ಕೇಂದ್ರ-ರಾಜ್ಯ ಸರ್ಕಾರಗಳು ಮಧ್ಯೆಏಷ್ಯಾ ದೇಶಗಳಲ್ಲಿ ನಡೆಸುತ್ತಿರುವ ಸಂಪ್ರದಾಯಿಕ “ಬುಜಕಾಸಿ” ಉತ್ಸವದಂತೆ ನಡೆಸಲು ಉತ್ತೇಜನ ಮತ್ತು ಪ್ರೋತ್ಸಾಹ ನೀಡಬೇಕೆಂದು ಒತ್ತಾಯಿಸಿದರು. ಇದೇ ಸಂದರ್ಭ ಕೊಡವರ ಪರವಾದ ಗುರಿಗಳು ಮತ್ತು ಶಾಸನ ಬದ್ಧ ಹಕ್ಕೊತ್ತಾಯಗಳನ್ನು ಪರಿಗಣಿಸಬೇಕೆಂಬ ನಿರ್ಣಯ ಅಂಗೀಕರಿಸಲಾಯಿತು. ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಯೊಂದಿಗೆ ಕೊಡವ ಸ್ವಯಂ ಆಡಳಿತ ಹಾಗೂ ಆಂತರಿಕ ರಾಜಕೀಯ ಸ್ವ-ನಿರ್ಣಯ ಹಕ್ಕುಗಳನ್ನು ಮಾನ್ಯ ಮಾಡಬೇಕು. ವಿಶ್ವ ರಾಷ್ಟ್ರ ಸಂಸ್ಥೆಯ ಅಂತರಾಷ್ಟ್ರೀಯ ಕಾನೂನಿನನ್ವಯ ಆದಿಮ ಸಂಜಾತ ಕೊಡವರನ್ನು ಶಾಸಕ ಬದ್ಧವಾಗಿ ರಕ್ಷಿಸಬೇಕು ಹಾಗೂ ಹಿಂದೆ ಹೊರಗಿನ ಆಡಳಿತಗಾರರು ಕೊಡವರಿಂದ ವಶಪಡಿಸಿಕೊಂಡು ಹೊರಗಿನ ಬಂಡವಾಳ ಶಾಹಿಗಳಿಗೆ ಭೋಗ್ಯಕ್ಕೆ ನೀಡಿದ, ಮಾರಾಟ ಮಾಡಿದ ಮತ್ತು ಅಡಮಾನವಿಟ್ಟ ಕೊಡವರ ಪೂರ್ವಾರ್ಜಿತ ಆಸ್ತಿಗಳನ್ನು ವಿಶ್ವ ರಾಷ್ಟ್ರ ಸಂಸ್ಥೆಯ ಇಂಡಿಜಿನೆಸ್ ಪಿಪಲ್ಸ್ ಪ್ರಾಪರ್ಟಿ ರಿ ಕ್ಲೆಮ್ ಕಾಯ್ದೆಯಡಿ ಕೊಡವರಿಗೆ ಪುನರ್ ಸ್ಥಾಪಿಸಬೇಕು. ಕೊಡವ ಜನಾಂಗೀಯ ಸಂಸ್ಕಾರದ ಗನ್/ತೋಕ್ ಅನ್ನು ನಮ್ಮ ಸಂವಿಧಾನದ 25 ಮತ್ತು 26 ನೇ ವಿಧಿಯ ಅಡಿಯಲ್ಲಿ ಸಿಖ್ಖರ ಕಿರ್ಪಾನ್‍ಗೆ ಸಮಾನವಾಗಿ ರಕ್ಷಿಸಬೇಕು. ಕೊಡವ ಜನಾಂಗೀಯ ಬುಡಕಟ್ಟು ಜನಾಂಗದವರು ಜನಸಾಂದ್ರತೆಯಿಲ್ಲದ ಆಯಕಟ್ಟಿನ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವುದರಿಂದ, ಸ್ವಯಂ ರಕ್ಷಣೆಗಾಗಿ ಕೊಡವ ಮಹಿಳೆಯರಿಗೆ ವಿಶೇಷ ಗನ್ ಶೂಟಿಂಗ್ ತರಬೇತಿಯನ್ನು ಸರ್ಕಾರ ಪ್ರಾರಂಭಿಸಬೇಕು. ವಿಶಾಲ ಮೈಸೂರಿನಲ್ಲಿ ವಿಲೀನಗೊಂಡ ನಂತರ, ಜನಸಂಖ್ಯಾ ಪಲ್ಲಟವು ಪ್ರಸ್ತುತ ಅದರ ಮಿತಿಮೀರಿದ ಹಂತವನ್ನು ತಲುಪಿದೆ. ಆದ್ದರಿಂದ ಭೌಗೋಳಿಕವಾಗಿ ಪ್ರತ್ಯೇಕವಾದ ಪರ್ವತ ಭೂಪ್ರದೇಶದಲ್ಲಿ ವಾಸಿಸುವ ಕೊಡವ ಮಹಿಳೆಯರಿಗೆ ಸುರಕ್ಷತೆ ಮತ್ತು ಭದ್ರತೆಯು ಅತಿಮುಖ್ಯವಾಗಿದೆ. ಕೊಡವ ಲ್ಯಾಂಡ್ ವ್ಯೂವಾಹತ್ಮಕವಾಗಿ ಆಯಕಟ್ಟಿನ ಜಾಗವಾಗಿದ್ದು, ಪ್ರಸ್ತುತ ಕೊಡವ ಲ್ಯಾಂಡ್‍ನ ಗ್ರಾಮಗಳು ಮತ್ತು ಕುಗ್ರಾಮಗಳಲ್ಲಿ ದೇಶದ್ರೋಹಿ ಮಾವೊವಾದಿ ನಕ್ಸಲ್ ಅಂಶಗಳು ಆಶ್ರಯ ಪಡೆದಿವೆ. ವಿನಾಯಿತಿ ಪ್ರಮಾಣಪತ್ರಗಳ ವಿತರಣೆಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಆಡಳಿತಾತ್ಮಕ ಅಡಚಣೆಗಳನ್ನು ಸರ್ಕಾರ ತೆಗೆದುಹಾಕಬೇಕು. ಸರ್ಕಾರವು ಒಂದೇ ವಿಂಡೋ ಏಕ ಗವಾಕ್ಷಿ ಯೋಜನೆ ಮೂಲಕ ತೋಕ್ ವಿನಾಯಿತಿ ಪತ್ರವನ್ನು ವಿಳಂಬ ದ್ರೋಹ ಎಸಗದೆ ಫಲಾನುಭವಿ ಕೊಡವರಿಗೆ ವಿತರಿಸಬೇಕು/ಒದಗಿಸಬೇಕು. ಕೊಡವ ಕುಲದ ಯಾವುದೇ ಒಬ್ಬ ವ್ಯಕ್ತಿ ಅಂದರೆ ಅವಳು ಅಥವಾ ಅವನು ವಿನಾಯಿತಿ ಪತ್ರಕ್ಕೆ ಅರ್ಜಿ ಸಲ್ಲಿಸಿದಾಗ ಆತ ಕೊಡವ ಎಂದು ದೃಢಿಕರಿಸಲ್ಪಟ್ಟರೆ ಅಂತವರಿಗೆ ವಿಳಂಬ ಮಾಡದೆ ಗನ್ ವಿನಾಯಿತಿ ಪತ್ರ ನೀಡಬೇಕು. ಗನ್ ವಿನಾಯಿತಿ ಪತ್ರವೂ ಭಿಕ್ಷೆಯಲ್ಲ ಆದಿಮಸಂಜಾತ ಕೊಡವ ಹಕ್ಕು. ಇದು ಕೊಡಗು ಆಮ್ರ್ಸ್ ಆ್ಯಕ್ಟ್ ಅಲ್ಲ ಅಥವಾ ಕರ್ನಾಟಕ ಆಮ್ರ್ಸ್ ಆ್ಯಕ್ಟ್ ಅಲ್ಲ. ಬದಲಾಗಿ ಕೊಡವರಿಗೆ ಇರುವ ಈ ವಿಶೇಷ ಗನ್ ವಿನಾಯಿತಿ ಪತ್ರವೂ ಇಂಡಿಯನ್ ಆಮ್ರ್ಸ್ ಆ್ಯಕ್ಟ್‍ನಲ್ಲಿ ಅಡಕವಾಗಿರುವ ಕಾಯ್ದೆಯಾಗಿದೆ ಎಂಬುದನ್ನು ಆಡಳಿತಗಾರರು ಅರಿಯಬೇಕು. ಕೊಡವ ಪೋಷಕರು ತಮ್ಮ ಹೆಣ್ಣುಮಕ್ಕಳಿಗೆ ವಿವಾಹವಾಗುವಾಗ ವಿನಾಯಿತಿ ಪ್ರಮಾಣಪತ್ರ ಮತ್ತು ಗನ್/ತೋಕ್‍ಅನ್ನು ಕಡ್ಡಾಯವಾಗಿ ನೀಡಬೇಕು. ಪೊಟ್ಟಿ ದುಂಬಚಿಡುವ ಆಚರಣೆಯಲ್ಲಿ ಬಂದೂಕು ಮತ್ತು ಬಂದೂಕು ವಿನಾಯಿತಿ ಪ್ರಮಾಣಪತ್ರವನ್ನು ಸೇರಿಸಬೇಕು. ಎಲ್ಲಾ ಕೊಡವ ಆಚರಣೆಗಳಲ್ಲಿ, ಬಂದೂಕು ಗುಂಡು ಹಾರಿಸಲಾಗುತ್ತದೆ. ಆದರೆ ಇಂದಿನ ದಿನಗಳಲ್ಲಿ ಕೊಡವ ವಿರೋಧಿ ಮಾವೊವಾದಿಗಳ ಚಿತಾವಣೆಯಲ್ಲಿರುವ ಸರ್ಕಾರದ ಬೆದರಿಕೆ ತಂತ್ರದಿಂದಾಗಿ ನಮ್ಮ ಎಲ್ಲಾ ಗನ್/ತೋಕ್ ಆಚರಣೆಗಳು ಹಿಂದಕ್ಕೆ ತಳ್ಳಲ್ಪಟ್ಟಿವೆ. ಜನನ, ಮರಣ, ಮದುವೆ ಮತ್ತು ತಲಕಾವೇರಿಯಲ್ಲಿ ತೀರ್ಥೋದ್ಭವದ ಸಂದರ್ಭದಲ್ಲಿಯೂ ಬಂದೂಕಿನಿಂದ ಗುಂಡು ಹಾರಿಸಲಾಗುತ್ತಿತ್ತು. ಅದು ಮುಂದುವೆಯಬೇಕು. ಒಟ್ಟಾರೆ ಕೊಡವ ಸಂಸ್ಕೃತಿಯ ಧಾರ್ಮಿಕ ಸಂಸ್ಕಾರವಾಗಿರುವ ತೋಕ್/ಗನ್ ಅದರ ಸ್ಥಿತಿ ಸ್ಥಾಪಕತ್ವವನ್ನು ಮುಂದುವರೆಸುವ ಸ್ಥಿತಿ ನಿರ್ಮಾಣವಾಗಬೇಕು.
::: ಪ್ರಶಸ್ತಿ ಪ್ರದಾನ :::
15ನೇ ವಾರ್ಷಿಕ ಗನ್ ಕಾರ್ನೀವಲ್‍ನಲ್ಲಿ, ಸಿಎನ್‍ಸಿ ಕೊಡವ ಆದಿಮ ಸಂಜಾತತೆಯನ್ನು ದೃಢೀಕರಿಸುವ ನಿಟ್ಟಿನಲ್ಲಿ ತಮ್ಮ ಉಜ್ವಲ ಸಾಹಿತ್ಯದ ಮೂಲಕ ದಾಖಲಿಕರಣ ಮಾಡಿದ ಮೂವರು ಪ್ರಾತ ಸ್ಮರಣೀಯ ಶ್ರೇಷ್ಠ ಸಾಹಿತ್ಯ ರತ್ನ ವಿದ್ವಾಂಸರುಗಳಾದ ಅಲ್ಲೆ ಕೊಡವರ ನಾಡೆಲ್ಲ… ಅಲ್ಲೆ ಕೊಡವರ ಬೀಡೆಲ್ಲ… ಎನ್ನುವ ಕೊಡವ ಲ್ಯಾಂಡ್ ಆದಿಮ ಸಂಜಾತತೆಯನ್ನು ಸಾಕ್ಷಿಕರಿಸುವ ಹಾಡು ರಚಿಸಿದ ಶ್ರೀ ಪಂಜೆಮಂಗೇಶ ರಾವ್, ನಾವು ಕೊಡವರು-ಕೊಡಗಿನೊಡೆಯರು-ಸಮರರಂಗದ ಹಿರಿಯರು ಎನ್ನುವ ಮೌಲ್ಯಯುತ ಹಾಡು ರಚಿಸಿದ ಶಕ್ತಿ ಪತ್ರಿಕೆಯ ಭೂತಪೂರ್ವ ಸಂಪಾದಕರಾದ ದಿ.ಶ್ರೀ ಜಿ.ಯದುಮಣಿ ಹಾಗೂ ವಿಶ್ವ ಕೋಶದಂತಿರುವ “ಕೊಡಗಿನ ಇತಿಹಾಸ” ಎನ್ನುವ ಅತ್ಯುನ್ನತ ನೈಜ್ಯ ಚರಿತ್ರೆ ರಚಿಸಿದ ದಿವಂಗತ ಡಿ.ಎನ್.ಕೃಷ್ಣಯ್ಯ ತಮ್ಮ ಕೃತಿಯ ಮೂಲಕ ಕೊಡವರ ಇರುವಿಕೆ ಈ ನೆಲದಲ್ಲಿ ಚಿರಸ್ಥಾಯಿ ಆಗುವಂತೆ ಕಾಪಾಡಿದ ಈ ಮೂವರು ಉದಾಮ ಪಂಡಿತರಿಗೆ ಮರಣೋತ್ತರ “ಕೊಡವ ರತ್ನ” ಪ್ರಶಸ್ತಿಯನ್ನು ಮತ್ತು ವಿವಿಧ ಕ್ಷೇತ್ರಗಳಲ್ಲಿ ಅವರ ಅತ್ಯುತ್ತಮ ಕೊಡುಗೆಗಳಿಗಾಗಿ ಆಯ್ದ ಕೆಲವು ವ್ಯಕ್ತಿಗಳಿಗೆ “ಕೊಡವ ವಿಭೂಷಣ” ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕೊಡವ ವಿಭೂಷಣ ಪ್ರಶಸ್ತಿಗೆ ಭಾಜನರಾದವರು 1.ಡಾ. ಹರ್ಷ.ಸಿ.ಆರ್., ವಿಖ್ಯಾತ ಅಂಗರಚನಾಶಾಸ್ತ್ರ ವೈದ್ಯರು, ಮಡಿಕೇರಿ, ಇವರ ಅಮೋಘ ವೈದ್ಯಕೀಯ ಸೇವೆಯಿಂದ ಸಹಸ್ರಾರು ರೋಗಿಗಳು ಗುಣಮುಖರಾಗಲು ಕಾಣಿಕೆ ನೀಡಿ ಅವರ ಬದುಕಿಗೆ ಆಶಾಕಿರಣವಾಗಿದ್ದಾರೆ. 2.ಡಾ.ಎಂ.ಎನ್.ರವಿ ಶಂಕರ್, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು, ಪ್ರಾಧ್ಯಪಕರು, ಕೊಡವ ಭಾಷ ಎಂ.ಎ.ತರಗತಿಯನ್ನು ತೆರೆಯುವಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. 3. ಶ್ರೀ ಕಾಂಡೇರ ಕೆ.ಸುರೇಶ್, ಬಿಳೂರು-ಬಾಳೆಲೆ, ಇವರು ಸುಮಾರು 191ಕ್ಕೂ ಅಧಿಕ ಶವಸಂಸ್ಕಾರಗಳನ್ನು ನೆರವೇರಿಸಿ ಪುಣ್ಯಕಟ್ಟಿಕೊಂಡಿದ್ದಾರೆ. 4.ಶ್ರೀಮತಿ ಬಾಚರಣಿಯಂಡ ರಾಣು ಅಪ್ಪಣ್ಣ, ಪ್ರಥಮ, ಕೊಡವ ಎಂ.ಎ. ತರಗತಿಯ ನುರಿತ ಪ್ರಾಧ್ಯಪಕರು, 5. ಶ್ರೀಮತಿ ಕೊಡಂದೇರ ಉತ್ತರೆ ತಿಮ್ಮಯ್ಯ, ಮಾಯಮುಡಿ, ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದು, ಇಳಿ ವಯಸ್ಸಿನಲ್ಲೂ ಆದರ್ಶ ಕಾಫಿ, ಕಾಳುಮೆಣಸು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. 6. ಶ್ರೀಮತಿ ಪಟ್ಟಮಾಡ ಲಲಿತಾ ಗಣಪತಿ, ಅಂಗವಿಕಲರು ಮತ್ತು ವಯೋವೃದ್ಧರ ಕಲ್ಯಾಣ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡವರು. 7. ಶ್ರೀ ಹಂಚೆಟ್ಟಿರ ನಯನ ಚಂಗಪ್ಪ, ಕೊಡವ ಜಾನಪದ ನೃತ್ಯವಾದ ಕತ್ತಿಯಾಟ್, ಪೀಲಿಯಾಟ್ ತಜ್ಞ ಕಲಾವಿದರು. ಮುಕ್ಕೊಡ್ಲು ವ್ಯಾಲಿ ಡ್ಯೂ ಕಲ್ಚರಲ್ ಸಂಸ್ಥೆ 8. ಶ್ರೀ ಮುಕ್ಕಾಟಿರ ಎ.ವಸಂತ್, ಸುಂಟಿಕೊಪ್ಪ, ಹಿರಿಯ ಸಮಾಜ ಸೇವಕರು, (60 ವರ್ಷಗಳ ಸಮಾಜ ಸೇವೆ ಹಿನ್ನೆಲೆ) 9. ಶ್ರೀ ಬೊಟ್ಟೋಳಂಡ ಜಿ.ಮಿಟ್ಟುಚಂಗಪ್ಪ, ಹೆಸರಾಂತ ಉದ್ಯಮಿ, ಮಡಿಕೇರಿ. 10. ಶ್ರೀ ಉದಿಯಂಡ ಚಂಗಪ್ಪ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್.ಬಿ.ಐ) ನಿವೃತ್ತ ಅಧಿಕಾರಿ. 11. ಶ್ರೀ ಬೊಳ್ಳಾರ್ಪಂಡ ಸಾಬು ಚಂಗಪ್ಪ, ಸಮಾಜ ಸೇವಕರು., ಕಾರುಗುಂದ, 12. ಶ್ರೀ ನಂದಿನೆರವಂಡ ಅಪ್ಪಯ್ಯ, ಆದರ್ಶ ಕಾಫಿ ಬೆಳೆಗಾರರು, ಇಬ್ನಿವಳವಾಡಿ, 13. ಶ್ರೀ ಪೆಮ್ಮುಡಿಯಂಡ ವೇಣು ಅಪ್ಪಣ್ಣ, ಮೂರ್ನಾಡು. ಶಿಕ್ಷಣ ಸಂಸ್ಥೆ, ಕ್ರೀಡೆ ಹಾಗೂ ಹಲವಾರು ಸಾಮಾಜಿಕ ಸಂಘ-ಸಂಸ್ಥೆಗಳ ಪೋಷಕರು, ಮೂರ್ನಾಡು. ಕೊಡವ ರತ್ನ ಪ್ರಶಸ್ತಿ ಭಾಜನರಾದ ದಿವಂಗತ ಜಿ.ಯದುಮಣಿಯವರ ಪರವಾಗಿ ಅವರ ಸಹೋದರ ಶಕ್ತಿ ಪತ್ರಿಕೆಯ ಸಂಪಾದಕ ಜಿ.ರಾಜೇಂದ್ರ ಅವರು ಸ್ವೀಕರಿಸಿದರು. ದಿವಂಗತ ಪಂಜೆಮಂಗೇಶರಾಯರ ಪರವಾಗಿ ಅನಿಲ್ ಹೆಚ್.ಟಿ., ಡಿ.ಎನ್.ಕೃಷ್ಣಯ್ಯನವರ ಪರವಾಗಿ ಅವರ ಮೊಮ್ಮಗ ಕ್ಯಾಪ್ಟನ್ ರಾಜಾರಾಮ್ ಅವರು ಸ್ವೀಕರಿಸಿದರು.
ಜಿ.ರಾಜೇಂದ್ರ ಅವರು ಎನ್.ಯುನಾಚಪ್ಪ ಅವರ ಸುಧೀರ್ಘ ಅವಿಶ್ರಾಂತ ಶಾಂತಿಯುತ ಹಾಗೂ ಸಂವಿಧಾನಿಕ ಚೌಕಟ್ಟಿನ ಹೋರಾಟದ ಬಗ್ಗೆ ಪ್ರಶಂಸೆಯ ನುಡಿಗಳನ್ನಾಡಿದರು. ಕರ್ನಾಟಕ ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ, ಸಮಾಜ ಸೇವಕ ಮುಕ್ಕಾಟಿರ ವಸಂತ್ ಹಾಗೂ ಮನೆಯಪಂಡ ಕಾಂತಿ ಸತೀಶ್ ಸಿಎನ್‍ಸಿ ಹೋರಾಟದ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು. ನಾಚಪ್ಪನವರ ಬದ್ಧತೆ ಮತ್ತು ಸಂಕಲ್ಪವನ್ನು ಕೊಡವ ಜನಾಂಗದ ಭವಿಷ್ಯತ್ತಿನ ದೃಷ್ಟಿಯಿಂದ ಎಲ್ಲರೂ ಸದ್ಭಳಕೆ ಮಾಡಿಕೊಂಡು ಅವರಿಗೆ ತನು, ಮನ ಮತ್ತು ಧನದ ಸಹಾಯ ನೀಡಬೇಕು. ಅತೀ ಶೀಘ್ರ ಎಸ್.ಟಿ.ಟ್ಯಾಗ್ ಮತ್ತು ಕೊಡವ ಲ್ಯಾಂಡ್ ದೊರಕುವಲ್ಲಿ ಕಾರ್ಯೋನ್ಮುಖರಾಗಬೇಕೆಂದು ಸಂಕೇತ್ ಪೂವಯ್ಯ ಕರೆ ನೀಡಿದರು.
::: ಸ್ಪರ್ಧಾ ವಿಜೇತರು :::
ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ನೆಲ್ಲಮಕ್ಕಡ ವಿವೇಕ್ ಮೊದಲ ಸ್ಥಾನ ಗಳಿಸಿದರಲ್ಲದೆ ಮ್ಯಾನ್‍ಆಫ್ ದಿ ಇವೆಂಟ್ ಮೆಡಲ್‍ಗೆ ಭಾಜನರಾದರು. ಬೊಟ್ಟಂಗಡ ಸಮಿತಾ ಗಿರೀಶ್, ಪಟ್ಟಚರವಂಡ ಗಿರಿ ರಾಜೇಶ್, ಪೆಮ್ಮುಡಿಯಂಡ ವೇಣು ಉತ್ತಪ್ಪ, ಸೋಮಯಂಡ ರೇಷಾ, ಮಳೇಯಂಡ ವಿಜು, ಕೂಪದಿರ ಸಾಬು, ಅಜ್ಜಿಕುಟ್ಟೀರ ಅಪ್ಪಯ್ಯ, ಅರೆಯಡ ಸಾವನ್ ವಿಜೇತರಾದರು. ಕಾರ್ಯಕ್ರಮದಲ್ಲಿ ನಂದೇಟಿರ ಕವಿತಾ ಸುಬ್ಬಯ್ಯ, ಕಲಿಯಂಡ ಮೀನಾ ಪ್ರಕಾಶ್, ಲೆ.ಕರ್ನಲ್ ಬಿ.ಎಂ.ಪಾರ್ವತಿ, ಬೊಟ್ಟಂಗಡ ಸವಿತಾ ಗಿರೀಶ್, ಪುಲ್ಲೇರ ಸ್ವಾತಿ ಕಾಳಪ್ಪ, ಮನೆಯಪಂಡ ಕಾಂತಿ ಸತೀಶ್, ಬಿದ್ದಂಡ ಉಷಾ ದೇವಮ್ಮ, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಅರೆಯಡ ಸವಿತಾ ಗಿರೀಶ್, ಮಂದಪಂಡ ರಚನಾ ಮಂದಣ್ಣ, ಚೊಳಪಂಡ ಜ್ಯೋತಿ ನಾಣಯ್ಯ, ನಂದಿನೆರವಂಡ ನಿಶಾ ಅಚ್ಚಯ್ಯ, ಬಿದ್ದಂಡ ಪ್ರೇಮಾ ಗಣಪತಿ, ಚಂಞÀಂಡ ಕನ್ನಿಕಾ ಸೂರಜ್, ಕರವಂಡ ಸರಸು, ಬೊಳ್ಳಚೆಟ್ಟೀರ ಯಮುನಾ ಪೂಣಚ್ಚ, ಅಜ್ಜೆಟ್ಟೀರ ರಾಣಿ, ಬಲ್ಲಡಿಚಂಡ ಬೇಬಿ ಮೇದಪ್ಪ ಚಿರಿಯಪಂಡ ವನಿತಾ ಪೊನ್ನಪ್ಪ, ಚಿರಿಯಪಂಡ ರೇಷ್ಮ ಶ್ಯಾಮ್, ಸರ್ವ ಶ್ರೀ ಕಲಿಯಂಡ ಪ್ರಕಾಶ್, ಅಳ್ಮಂಡ ಜೈ, ಪಟ್ಟಮಾಡ ಕುಶ, ಬಾಚರಣಿಯಂಡ ಚಿಪ್ಪಣ್ಣ, ಸಂಕೇತ್ ಪೂವಯ್ಯ, ನಂದೇಟಿರ ರವಿ ಸುಬ್ಬಯ್ಯ, ಅರೆಯಡ ಗಿರೀಶ್, ಚಂಬಂಡ ಜನತ್, ಬೇಪಡಿಯಂಡ ಬಿದ್ದಪ್ಪ, ಬೊಟ್ಟಂಗಡ ಗಿರೀಶ್, ಬೇಪಡಿಯಂಡ ದಿನು, ಅಳ್ಮಂಡ ನೆಹರು, ನಂದಿನೆರವಂಡ ಅಯ್ಯಣ್ಣ, ಅಜ್ಜಿಕುಟ್ಟೀರ ಲೋಕೇಶ್, ಪಟ್ರಪಂಡ ಬೋಪಯ್ಯ, ಮಂದಪಂಡ ಮನೋಜ್, ಚೋಳಪಂಡ ನಾಣಯ್ಯ, ಪುದಿಯೊಕ್ಕಡ ಕಾಶಿ, ಅಂಚೆಟ್ಟಿರ ಮನು ಮುತ್ತಪ್ಪ, ಅಪ್ಪೆಂಗಡ ಮಾಲೆ ಪೂಣಚ್ಚ, ಅಜ್ಜೆಟ್ಟೀರ ಶಂಭು, ಪುದಿಯೊಕ್ಕಡ ಪೃಥ್ವಿ, ಚಂಗಂಡ ಚಾಮಿ ಪಳಂಗಪ್ಪ, ಮಾಳೆಯಂಡ ವಿಜು ಚಂಗಪ್ಪ, ನಂದಿನೆರವಂಡ ವಿಜು, ನಂದೇಟಿರ ಜೀವನ್, ಅಪ್ಪನೆರವಂಡ ಮೇದಪ್ಪ, ನೆಲ್ಲಮಕ್ಕಡ ವಿವೇಕ್, ಕೂಪದಿರ ಸಾಬು, ಪಟ್ಟಚೆರವಂಡ ಗಿರಿ ರಾಜೇಶ್, ಐತಿಚಂಡ ಸೋಮಯ್ಯ, ಚಟ್ಟಂಗಡ ಸೋಮಣ್ಣ, ಮಾಣಿರ ಸೋಮಯ್ಯ, ಬೊಜ್ಜಂಗಡ ನಂದಾ, ಮುಕ್ಕಾಟಿರ ಮುತ್ತಣ್ಣ, ಅಜ್ಜಿನಿಕಂಡ ಮಾಚಯ್ಯ, ಬಡುವಂಡ ವಿಜಯ, ಚಂಗಂಡ ಸೂರಜ್, ಕೂಪದಿರ ಸಾಬು, ಸೊಮಯಂಡ ರೇಷ ತಿಮ್ಮಯ್ಯ, ಪಾರ್ವಂಗಡ ನವೀನ್, ನಂದಿನೆವಂಡ ಬೋಪಣ್ಣ, ಬೊಳ್ಳಚೆಟ್ಟೀರ ಸುರೇಶ್, ಬೊಳ್ಳಚೆಟ್ಟೀರ ಪ್ರಕಾಶ್, ಮೇದುರ ಕಂಠಿ ನಾಣ್ಯಪ್ಪ, ಮೇದುರ ಮಾದಪ್ಪ, ಮುದ್ದಂಡ ಗಪ್ಪು, ಚಂಬಂಡ ಭೀಮಯ್ಯ, ಪೊರ್ಕೊಂಡ ಬೋಪಣ್ಣ, ಚಂಗಂಡ ನಾಗೇಶ್, ತೊತ್ತಿಯಂಡ ಬೊಳ್ಯಪ್ಪ, ಅಚ್ಚಕಾಳೇರ ಸಂತು ಅಪ್ಪಣ್ಣ, ಮಂಡೀರ ಅನು, ಸಾದೇರ ರಮೇಶ್, ಬಾಳೆಯಡ ಸೋಮಯ್ಯ, ಮೂವೇರ ಸೋಮಣ್ಣ, ಅರೆಯಡ ಸಾವನ್, ಕೊಣಿಯಂಡ ಸಂಜು, ನಂದಿನೆರವಂಡ ನಿಖಿಲ್, ನಂದಿನೆರವಂಡ ಅನಿರುದ್ಧ್, ಚಿರಿಯಪಂಡ ಶ್ಯಾಮ್ ಮುತ್ತಪ್ಪ, ಚಿರಿಯಪಂಡ ಡ್ಯಾನಿ ಪೊನ್ನಪ್ಪ, ತೋಲಂಡ ಸೋಮಯ್ಯ, ಅಳ್ಮಂಡ ಲವ, ಪೂಳಂಡ ಉತ್ತಪ್ಪ, ಪೂಳಂಡ ತನು, ಬಾಚಿರ ಚಿನ್ನಪ್ಪ, ಪೂಳಂಡ ಪೂವಯ್ಯ, ನಾಪಂಡ ಅರುಣಾ, ಅಜ್ಜಿಕುಟ್ಟೀರ ಅಪ್ಪಯ್ಯ, ಪೂಳಂಡ ವಿಠಲ, ಸ್ವರೂಪ್ ಮಣವಟ್ಟೀರ, ನಂದಾ ಮಣವಟ್ಟೀರ ಉಪಸ್ಥಿತರಿದ್ದರು.