ಮಡಿಕೇರಿ ಡಿ.21 NEWS DESK : ಗೋಣಿಕೊಪ್ಪಲಿನ ಆಲ್ ಸ್ಟಾರ್ ಫುಟ್ಬಾಲ್ ಕ್ಲಬ್ ಗೌರವಾಧ್ಯಕ್ಷರಾಗಿ ಗೋಣಿಕೊಪ್ಪಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಅವಿರೋಧ ಆಯ್ಕೆಯಾಗಿದ್ದಾರೆ. ಆಲ್ ಸ್ಟಾರ್ ಎಫ್.ಸಿ ತಂಡದಿಂದ ಗೋಣಿಕೊಪ್ಪಲಿನಲ್ಲಿ ನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಕುಲ್ಲಚಂಡ ಪ್ರಮೋದ್ ಗಣಪತಿ ಯುವ ಕ್ರೀಡಾಪಟುಗಳಿಗೆ ನನ್ನ ಎಲ್ಲಾ ರೀತಿಯ ಸಹಕಾರ ಮತ್ತು ಬೆಂಬಲ ಇರಲಿದೆ. ಮೇ ತಿಂಗಳ ಒಂದರಿಂದ ನಾಲ್ಕರವರೆಗೆ ಗೋಣಿಕೊಪ್ಪಲಿನ ಜಿ.ಎಂಪಿ ಶಾಲಾ ಮೈದಾನದಲ್ಲಿ ನಡೆಯಲಿರುವ ಆಲ್ ಸ್ಟಾರ್ ಎಫ್.ಸಿ ಕೊಡಗು ವರ್ಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ. ಕ್ರೀಡಾಕೂಟವೂ ಯಶಸ್ವಿಯಾಗಿ ನಡೆಯಲಿ ಎಂದು ಪ್ರಮೋದ್ ಗಣಪತಿ ಶುಭ ಹಾರೈಸಿದರು. ಈ ಸಂದರ್ಭ ಗೋಣಿಕೊಪ್ಪ ಗ್ರಾ.ಪಂ ಉಪಾಧ್ಯಕ್ಷೆ ಮಂಜುಳಾ, ಆಲ್ ಸ್ಟಾರ್ ಎಫ್.ಸಿ ತಂಡದ ಶೀಲಾ ಬೋಪಣ್ಣ, ಎಒನ್ ಶರತ್, ಚುಮ್ಮಿ, ಸಲೀಂ, ರನೀಸ್,
ಶಾನಿಫ್,ಬೋಪಣ್ಣ, ಸುಮನ್, ವಿನ್ಸಿ, ಧನುಷ್ ಇದ್ದರು.