ವಿರಾಜಪೇಟೆ ಡಿ.30 NEWS DESK : ಮಲೆತಿರಿಕೆ ಶ್ರೀ ಅಯ್ಯಪ್ಪ ಸೇವಾ ಸಮಿತಿ ವತಿಯಿಂದ ಶ್ರಿ ಅಯ್ಯಪ್ಪ ಸ್ವಾಮಿ ದೇವಾಲಯದ ವಾರ್ಷಿಕ ಪೂಜಾ ಮಹೋತವವು ಡಿ.30, 31 ಹಾಗೂ 1 ರಂದು ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಜರುಗಲಿದೆ. ಇಂದು (ಡಿ.30) ರಂದು ಬೆಳಿಗ್ಗೆ ಮತ್ತು ರಾತ್ರಿ ವಿಶೇಷ ಪೂಜೆ, ಡಿ.31 ರಂದು ಬೆಳಿಗ್ಗೆ ಮತ್ತು ರಾತ್ರಿ ವಿಶೇಷ ಪೂಜೆಗಳು ನಡೆಯಲಿದೆ. ಜ.1 ರಂದು ಮುಂಜಾನೆ 5.30ಕ್ಕೆ ಗಣಪತಿ ಹೋಮ, ಲಕ್ಷ್ಮೀ ಪೂಜೆ, ಸರಸ್ವತಿ ಪೂಜೆ ನಡೆಯಲಿದೆ. ಬೆಳಿಗ್ಗೆ 9 ಗಂಟೆಗೆ ತುಲಭಾರ ಸೇವೆ ಆರಂಭವಾಗಲಿದೆ. 10 ಗಂಟೆಗೆ ಲಕ್ಷಾರ್ಚನೆ ಸೇವೆ ನಡೆಯಲಿದ್ದು, ಮಧ್ಯಾಹ್ನ 12.30 ಗಂಟೆಗೆ ಶ್ರೀ ಅಯ್ಯಪ್ಪ ಸ್ವಾಮಿಗೆ ಮಹಾಪೂಜೆ ನಡೆಯಲಿದೆ. ನಂತರ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ಹಾಗೂ ಭಕ್ತರಿಗೆ ಅನ್ನಸಂತರ್ಪಣೆ ಜರುಗಲಿದೆ. ಸಂಜೆ 6.3ಕ್ಕೆ ಶ್ರೀ ಸ್ವಾಮಿಯ ಚಲನವಲನ, ಕಥಾ ಸಾರಂಶ ಒಳಗೊಂಡ ಶೋಭಾಯಾತ್ರೆಯು ನಗರದ ಮುಖ್ಯ ಬೀದಿಗಳಲ್ಲಿ ಸಂಚರಿಸಲಿದೆ. ಮೆರವಣಿಗೆಯ ಅಂಗವಾಗಿ ದೀಪಾರತಿ, ಶ್ರೀ ಮತ್ಸ್ಯ ಅವತಾರ ಸ್ತಬ್ದ ಚಿತ್ರ, ಕೇರಳದ ಚಂಡೆ ಮದ್ದಳೆ, ಮಂಗಳೂರಿನ ಚಿಲಿ-ಪಿಲಿ, ಗೊಂಬೆ ಹಾಗೂ ಸಾಂಸ್ಕøತಿಕ ಕಲಾ ತಂಡಗಳು ಶೋಭಾಯತ್ರೆಗೆ ಮೆರೆಗು ನೀಡಲಿದೆ. ಮೆರವಣಿಗೆಯು ಮಲೆತಿರಿಕೆ ಬೆಟ್ಟದ ತಪ್ಪಲಿನಿಂದ ಸಾಗಿ ತೆಲುಗರ ಬೀದಿ, ಜೈನರ ಬೀದಿ, ಫಿ.ಮಾ.ಕಾರ್ಯಪ್ಪ, ರಸ್ತೆ, ಮುಖ್ಯ ರಸ್ತೆಗಾಗಿ ಸಂಚರಿಸಿ ಮಲಬಾರ್ ರಸ್ತೆಯಲ್ಲಿರುವ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಕೊನೆಯಾಗಲಿದೆ. ಬಳಿಕ ರಾತ್ರಿ 12-30ಕ್ಕೆ ದೇವಾಲಯಕ್ಕೆ ಹಿಂತಿರುಗಲಿದೆ. ದೇವಾಲಯದಲ್ಲಿ ಶ್ರೀ ಸುಬ್ರಮಣ್ಯ ಸ್ವಾಮಿಗೆ ವಿಶೇಷ ಪೂಜೆ ನಡೆಯಲಿದೆ. ಜ.14 ರಂದು ಸಂಜೆ 6.30 ಕ್ಕೆ ದೇವಾಲಯದಲ್ಲಿ ಮಕರಜ್ಯೋತಿ ವಿಶೇಷ ಪೂಜೆ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀ ಅಯ್ಯಪ್ಪ ಸೇವಾ ಸಮಿತಿ ಮನವಿ ಮಾಡಿದೆ.
ವರದಿ : ಕಿಶೋರ್ ಕುಮಾರ್ ಶೆಟ್ಟಿ