ಮಡಿಕೇರಿ ಜ.6 NEWS DESK : ಕುಶಾಲನಗರದ ಸಮೀಪದ ಬೈಲುಕುಪ್ಪೆ ಟಿಬೆಟಿಯನ್ ನಿರಾಶ್ರಿತರಕ್ಕೆ ಶಿಬಿರಕ್ಕೆ ಟೆಬೆಟಿಯನ್ ಧಾರ್ಮಿಕ ಗುರು ಮತ್ತು ನೊಬೆಲ್ ಪ್ರಶಸ್ತಿ ವಿಜೇತ 14ನೇ ದಲೈಲಾಮ ಭೇಟಿ ನೀಡಿದರು. ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಬೈಲುಕಪ್ಪೆಗೆ ಆಗಮಿಸಿದ ದಲೈದಾಮ ಅವರನ್ನು ಮೈಸೂರು ಜಿಲ್ಲಾಡಳಿತ, ಶಿಬಿರದ ಪ್ರತಿನಿಧಿಗಳು ಹಾಗೂ ಅವರ ಅನುಯಾಯಿಗಳು ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು. ಟಿಬೆಟಿಯನ್ನರ ನಡೆದಾಡುವ ದೈವ ಎಂದೇ ಬಿಂಬಿತವಾಗಿರುವ ಸುಮಾರು 89ರ ವಯೋಮಾನದ ಟಿಬೆಟಿಯನ್ ಪರಮೊಚ್ಚ ಗುರುಗಳಾದ ದಲೈಲಾಮ ವಿಶ್ವಾಂತಿಗಾಗಿ ಬೈಲುಕುಪ್ಪೆಗೆ ಆಗಮಿಸಿದ್ದು, ಬೈಲುಕುಪ್ಪೆ ಶಿಬಿರದ ತಶಿಲೊಂಪೊ ಬೌದ್ಧ ಮಂದಿರದಲ್ಲಿ ಮುಂದಿನ ಒಂದು ತಿಂಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಶಿಬಿರದ ಪ್ರತಿನಿಧಿ ಜಿಗ್ಮೆ ಸುಲ್ಟರೀಂ ಮಾಹಿತಿ ನೀಡಿದರು. ಮೈಸೂರು ಜಿಲ್ಲಾ ಪೊಲೀಸ್ ವತಿಯಿಂದ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.