ಮಡಿಕೇರಿ ಜ.7 NEWS DESK : ನಗರದ ಶ್ರೀ ಓಂಕಾರೇಶ್ವರ ದೇವಾಲಯವು ‘ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆಗೆ ಸೇರಿದ ಗ್ರೂಪ್ ‘ಎ’ ದೇವಾಲಯವಾಗಿದ್ದು, ಶ್ರೀ ಓಂಕಾರೇಶ್ವರ ದೇವಾಲಯ ಹಾಗೂ ಈ ದೇವಾಲಯಕ್ಕೆ ಒಳಪಡುವ ಶ್ರೀ ಆಂಜನೇಯ ಮತ್ತು ಕೋಟೆ ಗಣಪತಿ ದೇವಾಲಯದ ಕಾರ್ಯಗಳಿಗೆ ತಾತ್ಕಾಲಿಕ ನೆಲೆಯಲ್ಲಿ ಕರ್ತವ್ಯ ನಿರ್ವಹಿಸಲು 3 ‘ಡಿ’ ಗ್ರೂಪ್ ಹುದ್ದೆಗಳು ಖಾಲಿ ಇದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗೆ ಸಂಬಂಧಿಸಿದ ವಿವರ: ಅರ್ಜಿ ಸಲ್ಲಿಸುವವರ ವಯೋಮಿತಿ 18 ವರ್ಷದಿಂದ 33 ವರ್ಷ ದೊಳಗಿರಬೇಕು. (ವಯಸ್ಸಿನ ಬಗ್ಗೆ ಶಾಲಾ ದಾಖಲೆ ನೀಡಬೇಕು).ದೇವಾಲಯದ ಹೊರಾಂಗಣದ ನೌಕರರು ‘ಡಿ’ ಗ್ರೂಪ್ ಹುದ್ದೆ-3(ಸ್ವಚ್ಛತಗಾರ, ಕಾವಲುಗಾರರು) ವೇತನ ರೂ.9,600 ಮತ್ತು ಇತರೆ. ದೇವಾಲಯದ ಕರ್ತವ್ಯದ ಅವಧಿ ಬೆಳಗ್ಗೆ 7.30 ರಿಂದ ಮಧ್ಯಾಹ್ನ 1 ಗಂಟೆ, ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆವರೆಗೆ. ದೇವಾಲಯದ ಕೆಲಸ ಕಾರ್ಯಗಳು ಮುಜರಾಯಿ ಇಲಾಖೆ ಸೂಚಿಸಿದ ನಿಯಮಗಳು ಹಾಗೂ ಶಿಸ್ತು ಪಾಲನೆಗೆ ಒಳಪಟ್ಟಿರುತ್ತದೆ. ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಯಿಂದ ಪಡೆದ ದೇಹದಾಢ್ರ್ಯ ಪ್ರಮಾಣ ಪತ್ರವನ್ನು ಹಾಜರುಪಡಿಸುವುದು. ಯಾವುದೇ ಕ್ರಿಮಿನಲ್ ಮೊಕದ್ದಮೆ ಹಾಗೂ ನ್ಯಾಯಾಲಯದ ಆದೇಶದಂತೆ ಕಾರಾಗೃಹದ ಶಿಕ್ಷೆಗೆ ಒಳಪಟ್ಟಿರಬಾರದು. ಅರ್ಜಿ ಸಲ್ಲಿಸಲು ಜನವರಿ, 22 ಕೊನೆಯ ದಿನವಾಗಿದೆ. ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ದೇವಾಲಯದ ಕಚೇರಿಯ ಸಮಯ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆ ಒಳಗೆ ಭೇಟಿ ನೀಡಬಹುದು ಎಂದು ಶ್ರೀ ಓಂಕಾರೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ದೇವರಾಜು ತಿಳಿಸಿದ್ದಾರೆ.