ನಾಪೋಕ್ಲು ಜ.8 NEWS DESK : ಪಾಡಿ ಶ್ರೀ ಇಗ್ಗುತ್ತಪ್ಪ ದೇವರ ಆದಿಸ್ಥಾನ ಮಲ್ಮದಲ್ಲಿ ಸಂಪ್ರದಾಯದಂತೆ ಪುದಿಯಕ್ಕಿ ನೈವೇದ್ಯ (ಹೊಸ ಅಕ್ಕಿ ನೈವೇದ್ಯ)ವನ್ನು ಶ್ರದ್ಧಾಭಕ್ತಿಯಿಂದ ದೇವರಿಗೆ ಅರ್ಪಿಸಲಾಯಿತು. ಈ ಸಂದರ್ಭ ಪಾಡಿ, ನೆಲಜಿ, ಪೇರೂರು ಗ್ರಾಮಗಳಿಂದ ತಕ್ಕ ಮುಖ್ಯಸ್ಥರು ಪಾಲ್ ಬೈವಾಡ್ ಸಮೇತ ಆಗಮಿಸಿದ್ದರು. ದೇವತಕ್ಕ ಪರದಂಡ ಪ್ರಿನ್ಸ್ ತಮ್ಮಪ್ಪ ಹೊಸ ಅಕ್ಕಿಯ ನೈವೇದ್ಯ ಅರ್ಪಣೆ ಮಾಡಿ ಸರ್ವ ಜನಾಂಗದ ಶ್ರೇಯೋಭಿವೃದ್ಧಿಗೆ, ನಾಡಿನ ಸುಭಿಕ್ಷೆಗೆ ಪ್ರಾರ್ಥನೆ ಸಲ್ಲಿಸಿದರು.
ವರದಿ : ದುಗ್ಗಳ ಸದಾನಂದ.