ಮಡಿಕೇರಿ ಜ.8 NEWS DESK : ಮಡಿಕೇರಿ 66/11ಕೆ.ವಿ ವಿದ್ಯುತ್ ಉಪ ಕೇಂದ್ರದಿಂದ ಹೊರಹೊಮ್ಮುವ, ಜಿ.ಟಿ.ರಸ್ತೆ ಫೀಡರ್‍ನಲ್ಲಿ ವಿದ್ಯುತ್ ವಾಹಕ ಬದಲಾವಣೆ ಕಾಮಗಾರಿಯನ್ನು ಜ.9 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೆ ನಿರ್ವಹಿಸಲಾಗುವುದು. ಆದ್ದರಿಂದ ಮಡಿಕೇರಿ, ಜಲಾಶ್ರಯ ಬಡಾವಣೆ, ಜಯನಗರ, ಅಶೋಕಪುರ, ಜಿ.ಟಿ ರಸ್ತೆ, ಮಂಗಳಾದೇವಿ ನಗರ, ಅರಣ್ಯ ಭವನ, ಚೈನ್‍ಗೇಟ್ ಹಾಗೂ ಸುತ್ತಮುತ್ತಲ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.