ಮಡಿಕೇರಿ NEWS DESK ಜ.8 : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ನೂತನ ಜಿಲ್ಲಾಧ್ಯಕ್ಷರಾಗಿ ವಕೀಲ ಅಮೀನ್ ಮೊಹಿಸಿನ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಉಸ್ಮಾನ್ ಸುಂಟಿಕೊಪ್ಪ ಆಯ್ಕೆಯಾಗಿದ್ದಾರೆ. ಕುಶಾಲನಗರ ಸಮೀಪ ಕೊಪ್ಪದಲ್ಲಿ ನಡೆದ ಎಸ್‌ಡಿಪಿಐ ಕೊಡಗು ಜಿಲ್ಲಾ ಪ್ರತಿನಿಧಿಗಳ ಸಭೆಯಲ್ಲಿ ನೂತನ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು. ಕಾರ್ಯದರ್ಶಿಯಾಗಿ ಬಶೀರ್ ಅಹ್ಮದ್, ಉಪಾಧ್ಯಕ್ಷರುಗಳಾಗಿ ಮನ್ಸೂರ್ ಆಲಿ ಮಡಿಕೇರಿ, ನಫೀಸಾ ಅಕ್ಬರ್, ಕೋಶಾಧಿಕಾರಿಯಾಗಿ ಅಕ್ಮಲ್ ಪಾಷಾ, ಸಮಿತಿ ಸದಸ್ಯರುಗಳಾಗಿ ಸ್ವಾಲಿಹ್ ಸೋಮವಾರಪೇಟೆ, ಬಶೀರ್ ಕೆ.ಸಿ, ಮೇರಿ ವೆಗಸ್ ಹಾಗೂ ಅಬ್ದುಲ್ ಅಡ್ಕಾರ್ ಆಯ್ಕೆಯಾದರು. ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಕಾರ್ಯದರ್ಶಿಗಳಾದ ಅಕ್ರಮ್ ಮೌಲಾನ, ಅಪ್ಸರ್ ಕೆ.ಆರ್ ನಗರ ಹಾಗೂ ಖಜಾಂಚಿ ಅಕ್ರಂ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಪ್ರಸಕ್ತ ರಾಜಕೀಯ ವಿದ್ಯಾಮಾನಗಳ ಕುರಿತು ಚರ್ಚಿಸಲಾಯಿತು. ನಂತರ ಸರ್ವಾನುಮತದಿಂದ 5 ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು.