ವಿರಾಜಪೇಟೆ ಜ.16 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವಿರಾಜಪೇಟೆ ಬಿ.ಸಿ ಟ್ರಸ್, ಸ್ವಸಹಾಯ ಸಂಘಗಳ ಒಕ್ಕೂಟದ ಆಶ್ರಯದಲ್ಲಿ ಭತ್ತದ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮವು ಅಮ್ಮತ್ತಿ ವಲಯದ ಹಾಲ್ಗುಂದ ಕಾರ್ಯಕ್ಷೇತ್ರದಲ್ಲಿ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪ್ರಗತಿಪರ ಕೃಷಿಕ ನಾಣಯ್ಯ ಮಾತನಾಡಿ, ಯಂತ್ರಶ್ರೀ ಭತ್ತದ ಬೇಸಾಯದಿಂದ ಕಡಿಮೆ ಖರ್ಚು ಅಧಿಕ ಇಳುವರಿ ಪಡೆಯಬಹುದು. ಮುಂದಿನ ದಿನಗಳಲ್ಲಿ ಯಂತ್ರಶ್ರೀ ಭತ್ತದ ಬೇಸಾಯ ಮಾಡಿ ಎಂದು ಮಾಹಿತಿ ನೀಡಿದರು. ಕೃಷಿ ಮೇಲ್ವಿಚಾರಕ ವಸಂತ್ ಭತ್ತದ ಸಸಿ ಮಡಿ ಟ್ರೇಗಳ ಬಳಕೆ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಹಾಲ್ಗುಂದ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸ್ಮಿತಾ, ಒಕ್ಕೂಟದ ಅಧ್ಯಕ್ಷರಾದ ನೇತ್ರಾವತಿ, ಕಾರ್ಯದರ್ಶಿ ರತ್ನ, ಗದ್ದೆಯ ಮಾಲೀಕರಾದ ತಾಯಮ್ಮ, ಊರಿನ ಗ್ರಾಮಸ್ಥರು, ಸಂಘದ ಸದಸ್ಯರು, ಹಾಲ್ಗುಂದ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಮೀನಾಕ್ಷಿ, ಚೆಂಬೆಬೆಳ್ಳೂರು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ದೇವಕ್ಕಿ ಹಾಜರಿದ್ದರು.