ಮಡಿಕೇರಿ ಜ.10 NEWS DESK : ನಗರದ ಕೋಟೆ ಮಹಿಳಾ ಸಮಾಜದಲ್ಲಿ ಹೊಸ ವರ್ಷಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಈಶ್ವರೀಯ ವಿಶ್ವವಿದ್ಯಾನಿಲಯದ ಸಮರ್ಪಿತ ಸಹೋದರಿ ಬಿ.ಕೆ. ಧನಲಕ್ಷ್ಮಿ ಅಕ್ಕನವರು ಮಹಿಳೆಯರಿಗೆ ಮನ:ಶಾಂತಿ ಮತ್ತು ಮನೆಯ ಶಾಂತಿಗಾಗಿ ಧ್ಯಾನದ ಮೂಲಕ ಜಾಗೃತಿ ಮೂಡಿಸಿ ವಿಶೇಷ ಉಪನ್ಯಾಸ ನೀಡಿದರು. ಮಹಿಳೆಯರಿಗೆ ಮನಸ್ಸಿನ ಶಾಂತಿಗಾಗಿ ಧ್ಯಾನ ಬಹಳ ಪೂರಕವಾಗಿರಬೇಕು. ಧ್ಯಾನದಲ್ಲಿ ಯಾವ ಮಾತುಗಳ ಬಗ್ಗೆ ಅರಿವಿರಬೇಕು ಮತ್ತು ಶಾಂತಿಯಿಂದಿದ್ದಾಗ ಸಂಸಾರದಲ್ಲಿ ಎಷ್ಟು ಸುಖ ನೆಮ್ಮದಿಯಿರುತ್ತದೆ. ಶಾಂತಿಯಿದ್ದಾಗ ಮನುಷ್ಯನ ಮನಸ್ಸು ಎಷ್ಟು ಪ್ರಫುಲ್ಲಿತವಾಗಿರುತ್ತದೆ. ಶಾಂತಿಯಿಂದ ತಮ್ಮ ಕಾರ್ಯವ್ಯವಹಾರ ಮಾಡುತ್ತಿದ್ದಾಗ ನಮ್ಮ ಸುತ್ತಲೂ ಎಷ್ಟು ಸಕಾರಾತ್ಮಕ ತರಂಗಗಳ ಅನುಭವ ಮಾಡುತ್ತೇವೆ ಎಂಬುದನ್ನು ಕ್ರಿಯಾ ಚಟುವಟಿಕೆಗಳ ಮೂಲಕ ಮಹಿಳೆಯರಿಗೆ ಅನುಭವ ಮಾಡಿಸಿದರು. ತಮ್ಮ ಶರೀರ ಮತ್ತು ಮನಸ್ಸಿನ ಸ್ವಾಸ್ಥ್ಯಕ್ಕಾಗಿ ಗಮನ ನೀಡಬೇಕೆಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಮಹಿಳಾ ಸಮಾಜದ ಅಧ್ಯಕ್ಷರಾದ ಅರವಿಂದ, ಉಪಾಧ್ಯಕ್ಷರಾದ ಕಸ್ತೂರಿ ಗೋವಿಂದಮ್ಮಯ್ಯ ಎಲ್ಲರನ್ನು ಸ್ವಾಗತಿಸಿ, ಹೊಸ ವರ್ಷದ ಶುಭಾಶಯ ಕೋರಿದರು. ಕಮಲಾ ಮುರುಗೇಶ್ ಹಾಗೂ ಕಾವೇರಮ್ಮ ಗೀತೆಯನ್ನು ಹಾಡಿದವರು. ಗಿರಿಜಾ ಪೂಣಚ್ಚ ಹಾಗೂ ಸದಸ್ಯರಾದ ರೂಪಾ ನಾಣಯ್ಯ, ಜಯಶೀಲಾ ಪ್ರಕಾಶ್, ಕಮಲಾಕ್ಷಿ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಹಿಳಾ ಸಮಾಜವನ್ನು ಎಲ್ಲರೂ ಸೇರಿ ಅಭಿವೃದ್ಧಿ ಪಡಿಸಿ ಸಮಾಜಕ್ಕೆ ಪೂರಕ ಕಾರ್ಯದಲ್ಲಿ ನಿರತರಾಗಬೇಕೆಂಬ ದೃಢ ಸಂಕಲ್ಪ ಮಾಡಿದರು.