ಮಡಿಕೇರಿ ಜ.10 NEWS DESK : ನಗರದ ಎಸ್.ಆರ್.ವಿ ವತಿಯಿಂದ ದ್ವಿತೀಯ ಬಾರಿಗೆ ಹೊನಲು ಬೆಳಕಿನ ಫುಟ್ಬಾಲ್ ಪ್ರೀಮಿಯರ್ ಲೀಗ್ ಪಂದ್ಯಾವಳಿಯು ಜ.11 ಮತ್ತು 12 ರಂದು ಮಡಿಕೇರಿಯ ಗಾಂಧಿ ಮೈದಾನದಲ್ಲಿ ನಡೆಯಲಿದೆ. ಮಡಿಕೇರಿ ನಗರದ ಕ್ರೀಡಾಪಟುಗಳಿಗೆ ಮಾತ್ರ ಸೀಮಿತವಾಗಿದ್ದು, ಒಟ್ಟು ಹನ್ನೆರಡು ಮಾಲೀಕತ್ವದ ಹನ್ನೆರಡು ತಂಡಗಳು ಪಾಲ್ಗೊಳ್ಳಲಿದೆ. ಟೀಮ್ ಕೆ. ಸಿ.ಎಂ, ಟೀಮ್ ಭಗವತಿ, ಕೂರ್ಗ್ ಚಾಮರ್ಸ್, ಟೀಮ್ ಒನ್ ಟಚ್, ಟೀಮ್ ಬ್ರದರ್ಸ್, ವೆಸ್ಟನ್ ಎಫ್ ಸಿ, ವೈಲ್ಡ್ ಮಾಸ್ಟರ್ಸ್, ಟೀಮ್ ಆರ್ ಆರ್ ಬ್ರದರ್ಸ್ , ಟರ್ಬೊ ಎಫ್ ಸಿ, ಸ್ಕೈ ಲೈನ್ ಹಾಗೂ ಫೋನಿಕ್ಸ್ ತಂಡಗಳ ನಡುವೆ ಪಂದ್ಯಗಳು ನಡೆಯಲಿವೆ. ಪಂದ್ಯ ಕೂಟದ ವಿನ್ನರ್ಸ್ ತಂಡಕ್ಕೆ 35,000 ನಗದು ಹಾಗೂ ಆಕರ್ಷಕ ಟ್ರೊಫಿ, ರನ್ನರ್ಸ್ ತಂಡಕ್ಕೆ 25,000 ನಗದು ಹಾಗೂ ಆಕರ್ಷಕ ಟ್ರೊಫಿ, ತೃತೀಯ ತಂಡಕ್ಕೆ 10,000 ನಗದು ಹಾಗೂ ಆಕರ್ಷಕ ಟ್ರೊಫಿ ಅಲ್ಲದೇ ವೈಯಕ್ತಿಕ ಟ್ರೊಫಿಗಳು ಕೂಡ ಕ್ರೀಡಾಪಟುಗಳಿಗೆ ಸಿಗಲಿದೆ. ಕ್ರೀಡಾ ಕೂಟವನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಶ್ರೀ ರಾಜೇಶ್ವರಿ ವಿದ್ಯಾಸಂಸ್ಥೆಯ ಅಧ್ಯಕ್ಷ ಹೆಚ್.ಎಸ್.ಗೋವಿಂದ ರಾಜ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೌಶಿಕ್ ಪೂವಯ್ಯ ವ್ಯವಸ್ಥಾಪಕರು ಹಾಗೂ ಉಸ್ತುವಾರಿ ದೀಪ ಸೋನಾ ಟಿ ವಿ ಎಸ್ ಮಡಿಕೇರಿ, ವಿಶಾಲ್ ಶಿವಪ್ಪ ಸುಂಟಿಕೊಪ್ಪ, ಎ. ಎಂ. ಕ್ರಿಸ್ಟೋಫರ್ 14 ವರ್ಷದೊಳಗಿನ ಮಿನಿ ಒಲಿಂಪಿಕ್ಸ್ ನ ಕೋಚ್, ಕೊಡಗು ಜಿಲ್ಲಾ ಫುಟ್ಬಾಲ್ ಅಸೋಸಿಯೇಶನ್‌ನ ಉಪಾಧ್ಯಕ್ಷ, ಇಂಡೋನೇಷ್ಯಾದಲ್ಲಿ ನಡೆದ ಕಿರಿಯರ ಅಂತಾರಾಷ್ಟ್ರೀಯ ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ವಿಶ್ವ ಚಾಂಪಿಯನ್, ಆಜ್ಞಾ ಅಮಿತ್, ರಮೇಶ್ ಆಯುಕ್ತರು ಮಡಿಕೇರಿ ನಗರ ಸಭೆ, ವಿಸ್ಮಯಿ ಚಕ್ರವರ್ತಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೊಡಗು ಮಡಿಕೇರಿ, ದಾಕ್ಷಹಿನಿ ವಾಸುದೇವ್ ಉಪಾಧ್ಯಕ್ಷರು, ಶ್ರೀ ರಾಜೇಶ್ವರಿ ವಿದ್ಯಾಲಯ, ಟೀಮ್ ಭಗವತಿ ಸೇರಿದಂತೆ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಬೆದ್ರಾ ಮೀಡಿಯಾ ಯೂ ಟ್ಯೂಬ್ ನ ಮೂಲಕ ಪ್ರಪ್ರಥಮ ಬಾರಿಗೆ ಫುಟ್ಬಾಲ್ ಪಂದ್ಯಾವಳಿ ನೇರ ಪ್ರಸಾರವಾಗಿದ್ದು, ಫುಟ್ಬಾಲ್ ಪ್ರೇಮಿಗಳಿಗೆ ಇನ್ನಷ್ಟು ಮೆರಗು ನೀಡಲಿದ್ದಾರೆ. ವೀಕ್ಷಕ ವಿವರಣೆಯನ್ನು ಚಿಕ್ಕಮಂಗಳೂರಿನ ದಿನೇಶ್ ನೀಡಲಿದ್ದಾರೆ. ಮಡಿಕೇರಿ ಶಾಲಾ ವಿದ್ಯಾರ್ಥಿಗಳಿಗೆ ಫುಟ್ಬಾಲ್ ಪಂದ್ಯವು ನಡೆಯಲಿದೆ ಎಂದು ಆಯೋಜಕ ಸಚಿನ್ ವಾಸುದೇವ್, ಲೋಹಿತ್ ಪಿಕ, ದಿನೇಶ್, ಅಶೋಕ್, ಬಿಬ್ಲ, ಲಿಖಿತ್, ಮನೋಜ್, ಸುರ್ಜಿತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಅಶೋಕ್, ಮಡಿಕೇರಿ