ಮಡಿಕೇರಿ ಜ.13 NEWS DESK : ಗರಗಂದೂರಿನ ಶ್ರೀಮತಿ ಡಿ.ಚೆನ್ನಮ್ಮ ಎಜುಕೇಷನ್ ಸೊಸೈಟಿಯ ವಜ್ರಮಹೋತ್ಸವ ಸಂದಭ೯ ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ 2 ಲಕ್ಷ ರು. ಮೌಲ್ಯದ 5 ಕಂಪ್ಟೂಟರ್ ಗಳನ್ನು ಶಿಕ್ಷಣ ಸಂಸ್ಥೆಗೆ ನೀಡಲಾಯಿತು. ಸಂಸ್ಥೆಯಲ್ಲಿ ಆಯೋಜಿತ ವಜ್ರಮಹೋತ್ಸವ ಸಂದಭ೯ದಲ್ಲಿ ರೋಟರಿ ಮಾಜಿ ಜಿಲ್ಲಾ ಗವನ೯ರ್ ಹೆಚ್.ಆರ್.ಕೇಶವ್ ಕಂಪ್ಯೂಟರ್ ಗಳಿಗೆ ಚಾಲನೆ ನೀಡಿದರು. ಶ್ರೀಮತಿ ಡಿ.ಚೆನ್ನಮ್ಮ ಎಜುಕೇಷನ್ ಸೊಸೈಟಿಯ ಆಡಳಿತ ಮಂಡಳಿ ಅಧ್ಯಕ್ಷ ಕನ೯ಲ್ ಬಿ.ಜಿ.ವಿ. ಕುಮಾರ್, ಸಂಸ್ಥೆಯ ಕಾಯ೯ದಶಿ೯ ಎಂ.ಬಿ.ಬೋಪಣ್ಣ, ಎಂ.ಜಿ.ಬೋಪಣ್ಣ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್, ಕಾಯ೯ದಶಿ೯ ಕಟ್ಟೆಮನೆ ಸೋನಜಿತ್, ಮಾಜಿ ಸಹಾಯಕ ಗವನ೯ರ್ ಗಳಾದ ಡಾ.ಸಿ.ಆರ್. ಪ್ರಶಾಂತ್, ಅನಿಲ್ ಹೆಚ್.ಟಿ., ರತನ್ ತಮ್ಮಯ್ಯ, ರೋಟರಿ ಮಿಸ್ಟಿ ಹಿಲ್ಸ್ ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಸದಸ್ಯ ಪಿ.ಡಬ್ಲು.ಫ್ರಾನ್ಸಿಸ್, ಕನಾ೯ಟಕ ಸಕಾ೯ರದ ಚೀಫ್ ಎಲೆಕ್ಟ್ರಿಕಲ್ ಇನ್ಸ್ ಪೆಕ್ಟರ್ ತೀತೀರ ರೋಷನ್ ಅಪ್ಪಚ್ಚು, ನಗರಸಭೆ ಮಾಜಿ ಪೌರಾಯುಕ್ತೆ ಬಿ.ಬಿ.ಪುಪ್ಪಾವತಿ, ಸಂಸ್ಥೆಯ ಪ್ರಾಂಶುಪಾಲ ಸಿ.ಜಿ.ಮಂದಪ್ಪ, ಮುಖ್ಯ ಶಿಕ್ಷಕಿ ರೀಟಾ, ಕಂಪ್ಯೂಟರ್ ವಿಭಾಗದ ಶಿಕ್ಷಕಿ ಸವಿತ, ಆಡಳಿತ ಮಂಡಳಿ ನಿದೇ೯ಶಕರು ಹಾಜರಿದ್ದರು.