ಕುಶಾಲನಗರ, ಜ.14 NEWS DESK : ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ “ಸಚೇತನ” ಕಾರ್ಯಕ್ರಮದಡಿ ಶಾಲೆಯಲ್ಲಿ ಸಂಕ್ರಾಂತಿ ಸಂಭ್ರಮಾಚರಣೆ ಮೂಲಕ “ಸುಗ್ಗಿ” ಹಬ್ಬದ ಆಚರಣೆ ಮತ್ತು ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು. ಶಿಕ್ಷಕರು ಮಕ್ಕಳಿಗೆ ಸಂಕ್ರಾಂತಿ ಹಬ್ಬದ ಮಹತ್ವ ತಿಳಿದುಕೊಟ್ಟರು. ಮಕ್ಕಳು “ಸಂಕ್ರಾಂತಿ” ಹಬ್ಬವನ್ನು ಸಂಭ್ರಮ ಮತ್ತು ಸಡಗರದಿಂದ ಆಚರಿಸಿ ಪರಸ್ಪರ ಎಳ್ಳು ಬೆಲ್ಲವನ್ನು ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು. ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕವಾಗಿ ಸುಗ್ಗಿ ಹಬ್ಬದ ಸಲಕರಣೆಗಳನ್ನು ಇಟ್ಟು ಅಭಿನಯ ಗೀತೆಯೊಂದಿಗೆ ಸಂಭ್ರಮಿಸಿದರು. ನಂತರ ಎಲ್ಲರೂ ಸೇರಿ ಶಾಲಾ ಅವರಣದ ಹೊರಾಂಗಣದಲ್ಲಿ ಸಹ ಪಂಕ್ತಿ ಭೋಜನ ಮಾಡಿದರು. ಶಾಲಾ ಮುಖ್ಯ ಶಿಕ್ಷಕ ಹೆಚ್ ಎಂ ವೆಂಕಟೇಶ್ ರವರ ಉಸ್ತುವಾರಿಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಸಿ.ಎಸ್. ಜಾನಕಿ, ಸಿ.ಎಂ. ಬಬಿತ. ಪುಷ್ಪಾವತಿ, ಕೆ.ಎಸ್.ರಮ್ಯ, ಶಿಕ್ಷಕರಾದ ಎಸ್.ಕೆ.ಶಿವಾನಂದ, ಪ್ರಶಿಕ್ಷಣಾರ್ಥಿ ಕೀರ್ತನ, ಆಂಗ್ಲ ಭಾಷೆ ಶಿಕ್ಷಕಿ ರಂಜನ ಅಡುಗೆ ಸಿಬ್ಬಂದಿಗಳಾದ ವಿನುತಾ, ಮಂಜುಳಾ, ಸೇರಿದಂತೆ ಶಾಲಾ ಮಕ್ಕಳು ಸಂಭ್ರಮದಿಂದ ಲಘು ಬಗೆಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಿಸಿದರು.