ಮಡಿಕೇರಿ ಜ.14 NEWS DESK : ಜನವರಿ 26 ರಂದು ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ರಾಜ್ಯದ 12ಗ್ರಾ.ಪಂ ಅಧ್ಯಕ್ಷರಿಗೆ ಭಾಗವಹಿಸಲು ಅವಕಾಶ ನೀಡಿ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯ ಆದೇಶ ಹೊರಡಿಸಿದ್ದು,
ಕೊಡಗು ಜಿಲ್ಲೆಯಿಂದ ಏಕೈಕ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಭಾಗವಹಿಸಲು ಅವಕಾಶ ದೊರೆತಿದೆ. ಮಡಿಕೇರಿ ತಾಲ್ಲೂಕಿನ ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಹೆಚ್.ಎ ಹಂಸ ಕೊಟ್ಟಮುಡಿ ಅವರನ್ನು ಭಾರತ, ಸರ್ಕಾರದ ಪಂಚಾಯತ್ ರಾಜ್ಯ ಸಚಿವಾಲಯದ ನಿರ್ದೇಶನದ ಮೇರೆಗೆ ಕರ್ನಾಟಕ ರಾಜ್ಯ ಸರ್ಕಾರ ಹಂಸ ಕೊಟ್ಟಮುಡಿ ಅವರನ್ನು ದೆಹಲಿಯ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಯ್ಕೆ ಮಾಡಿದ್ದು, ಹಂಸ ಅವರ ಪತ್ನಿ ಹೆಚ್.ಹೆಚ್ ಸಹೀರ ಅವರಿಗೆ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಇನ್ನುಳಿದಂತೆ ಕರ್ನಾಟಕದ ಹಾವೇರಿ,ಮೈಸೂರು, ಹಾಸನ,ಮಂಡ್ಯ,ಚಿತ್ರದುರ್ಗ, ಕೊಪ್ಪಳ,ಗದಗ,ಬೀದರ್, ಹಾಗೂ ಉಡುಪಿ ಜಿಲ್ಲೆಯಿಂದ ಇಬ್ಬರು ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.