ಸೋಮವಾರಪೇಟೆ ಜ.17 NEWS DESK : ಪಟ್ಟಣದ ಶಾಲಾರಸ್ತೆ ನಿವಾಸಿ ಕಾಫಿ ಬೆಳೆಗಾರ, ಹಿರಿಯ ಸಹಕಾರಿ, ಸ್ವಯಂ ಸೇವಕ, ಭಾರತೀಯ ಜನತಾಪಕ್ಷದ ಹಿರಿಯ ಕಾರ್ಯಕರ್ತರಾದ ಡಿ.ವಿ.ಸದಾನಂದ್ (76)ಇಂದು (ಜ.17) ರಂದು ನಿಧನರಾಗಿದ್ದಾರೆ. ಅನಾರೋಗ್ಯಕ್ಕೆ ಒಳಗಾಗಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜೆ.ಎಸ್.ಎಸ್.ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ, ಪುತ್ರಿ ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಜ.18 ರಂದು ಮಧ್ಯಾಹ್ನ ಸೋಮವಾರಪೇಟೆಯಲ್ಲಿ ನಡೆಯಲಿದೆ. ಸರಳ, ಸಜ್ಜನಿಕೆಯ ಸದಾನಂದ್ ತಮ್ಮ ಸೌಮ್ಯತೆಯಿಂದಲೇ ಎಲ್ಲರನ್ನೂ ಆಕರ್ಷಿಸಿಸುತ್ತಿದ್ದವರು, 1973ರಿಂದ ಆರೆಸ್ಸೆಸ್ ನ ಸಕ್ರಿಯ ಕಾರ್ಯಕರ್ತರಾಗಿದ್ದ ಇವರು,1977 ರಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಏ.ಕೆ.ಸುಬ್ಬಯ್ಯನವರ ಪರವಾಗಿ ಪ್ರಚಾರ ನಡೆಸಿದ್ದ ಇವರು ನಂತರ ಭಾರತೀಯ ಜನತಾ ಪಕ್ಷ ಸೇರಿ ಇಂದಿನವರೆಗೂ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿದಿದ್ದಾರೆ. ಹಿರಿಯ ರಾಜಕಾರಣಿ ದಿವಂಗತ ಬಿ.ಬಿ.ಶಿವಪ್ಪನವರ ಒಡನಾಡಿಯಾಗಿದ್ದರು. ಹಿಂದೆ ಲಾಲ್ಕೃಷ್ಣ ಆಡ್ವಾಣಿ, ಸುಷ್ಮಾ ಸ್ವರಾಜ್ ಮುಂತಾದ ಹಿರಿಯ ನಾಯಕರು ಇವರ ಮನೆಗೆ ಭೇಟಿ ನೀಡಿರುವುದು ಗಮನಾರ್ಹ. ಸದಾನಂದ್ ರವರು ನಗರ ಬ.ಜ.ಪ ಅಧ್ಯಕ್ಷರಾಗಿ,ಇಲ್ಲಿನ ಗ್ರಾಹಕರ ಸ್ಟೋರ್ನ ನಿರ್ದೇಶಕರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.