ವಿರಾಜಪೇಟೆ ಫೆ.1 NEWS DESK : ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ.ದೀಪ್ತಿ ದೇಚಮ್ಮಗೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ. ದೀಪ್ತಿ ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯ ಕಾಲೇಜಿನ ಡೀನ್ ಡಾ. ಜಿ.ಎಂ.ದೇವಗಿರಿ ಅವರ ಮಾರ್ಗದರ್ಶನದಲ್ಲಿ ಸಾದರ ಪಡಿಸಿದ “ಮಧ್ಯ ಪಶ್ಚಿಮ ಘಟ್ಟಗಳಲ್ಲಿನ ಕಾಫಿ ಆಧಾರಿತ ಕೃಷಿ ಅರಣ್ಯದಲ್ಲಿ ಪೋಷಕ ಮತ್ತು ನಿಯಂತ್ರಕ ಪರಿಸರ ವ್ಯವಸ್ಥೆಯ ಸೇವೆಗಳ ಮೌಲ್ಯಮಾಪನ “ಎಂಬ ಸಂಶೋಧನಾ ಪ್ರಭಂದಕ್ಕೆ ಡಾಕ್ಟರೇಟ್ ಲಭಿಸಿದೆ. ಇತ್ತೀಚಿಗೆ ಶಿವಮೊಗ್ಗದಲ್ಲಿ ನಡೆದ ಒಂಬತ್ತನೇ ಘಟಿಕೋತ್ಸವದಲ್ಲಿ ಈ ಪದವಿಯನ್ನು ರಾಜ್ಯಪಾಲರು ಪ್ರದಾನ ಮಾಡಿದರು. ದೀಪ್ತಿ ದೇಚಮ್ಮ ಕಂಡಂಗಾಲದ ನಂಬುಡುಮಾಡ ಲಾಲ ಹಾಗೂ ನಿವೃತ ಶಿಕ್ಷಕಿ ಲತಾ (ತಾಮನೆ ಮೇರಿಯಂಡ )ದಂಪತಿಯ ಪುತ್ರಿ.